ಕೊಡಗಿನಲ್ಲಿ ಒಂದೇ ದಿನ 10 ಮಕ್ಕಳನ್ನು ಕಾಡಿದ ಕೋವಿಡ್ ಸೋಂಕು

29/09/2020

ಮಡಿಕೇರಿ ಸೆ.29 : ಮಕ್ಕಳನ್ನು ಕೋವಿಡ್ ಕಾಡುತ್ತಲೇ ಇದ್ದು, ಇಂದು ಬೆಳಗ್ಗೆ 10 ಮಕ್ಕಳಲ್ಲಿ ಸೋಂಕು ಕಂಡು ಬಂದಿದೆ. ಸೋಮವಾರಪೇಟೆ ಅಬ್ಬೂರು ಕಟ್ಟೆ ಗ್ರಾಮದ 2, 7, 11, 13 ವರ್ಷದ ಬಾಲಕಿಯರು, ವಿರಾಜಪೇಟೆ ಕಣ್ಣಂಗಾಲದ 4 ವರ್ಷದ ಬಾಲಕಿ, ಕಲ್ಲುಗುಂಡಿಯ 10, 11 ವರ್ಷದ ಬಾಲಕಿಯರು, ಗೋಣಿಕೊಪ್ಪದ 3 ವರ್ಷದ ಬಾಲಕಿ, ಸೀಗೆತೋಡುವಿನ 15 ವರ್ಷದ ಬಾಲಕಿ, ಮಡಿಕೇರಿ ಸುದರ್ಶನ ಬಡಾವಣೆಯ 15 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿದೆ.