ಸಿಡಿಲು ಬಡಿದು 38 ಮೇಕೆಗಳ ಸಾವು
01/10/2020

ಕಲಬುರಗಿ ಸೆ.30 : ಸಿಡಿಲು ಬಡಿದು 38 ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬುಧವಾರ ಮಧ್ಯಾಹ್ನ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕೊಳ್ಳೂರು ಗ್ರಾಮದಲ್ಲಿ ಸಂಭವಿಸಿದೆ.ಗ್ರಾಮದ ಸತೀಶ ಹುಗ್ಗೆಳ್ಳಿ, ಬಾಬು ಗುತ್ತಿ, ದಶರಥ ಗುತ್ತಿ, ಅಮೃತ ದೊಡನೋರ, ಗುಂಡಪ್ಪ, ವಿಠಲ ಗಡ್ಡಿಮನಿ, ತುಳಜಪ್ಪ ಅವರಿಗೆ ಸೇರಿದ್ದ 38 ಮೇಕೆಗಳು ಮೃತಪಟ್ಟಿವೆ ಎನ್ನಲಾಗಿದೆ.
ಮೇಕೆಗಳನ್ನು ಮೇಯಿಸಲು ಅಡವಿಗೆ ಹೋದಾಗ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಮೇಕೆಗಳು ಕೊನೆಯುಸಿರೆಳೆದಿವೆ.
