ಗಾಂಧಿ ಜಯಂತಿ : ಅರೆಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

October 3, 2020

ಮಡಿಕೇರಿ ಅ. 3 : ಅರೆಕಾಡು ಹೊಸ್ಕೇರಿ ಕೊಡವ ವೆಲ್‍ಫೇರ್ ಆಂಡ್ ಕ್ರಿಯೇಶನ್ ಅಸೋಶಿಯೇಶನ್ ವತಿಯಿಂದ ಮಹಾತ್ಮ ಗಾಂಧಿ ಅವರ 151ನೇ ಜನ್ಮದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 117ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅರೆಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಸೋಶಿಯೇಶನ್‍ನ ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪ ಅವರ ನೇತೃತ್ವದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಶಾಲೆಯ ಆವರಣ ಮತ್ತು ಶಾಲಾ ಮೈದಾನವನ್ನು ಸ್ವಚ್ಚಗೊಳಿಸಲಾಯಿತು.
ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯರಾದ ಎ.ಡಿ. ಮೀನಾಕ್ಷಿ, ಎಸ್‍ಡಿಎಮ್‍ಸಿ ಅಧ್ಯಕ್ಷ ಹಂಸ, ಕೆಡಬ್ಯ್ಲುಆರ್‍ಎ ಸಂಘದ ಕಾರ್ಯದರ್ಶಿ ತೊಂಡಿಯಂಡ ಎ. ಕುಶಾಲಪ್ಪ, ಖಜಾಂಚಿ ಕುಕ್ಕೆರ ಕೆ. ಎ. ಉತ್ತಪ್ಪ, ಸದಸ್ಯರುಗಳಾದ ಮಂಡೇಪಂಡ ಎ. ಕುಟ್ಟಣ, ತೊಂಡಿಯಂಡ ಎಸ್. ನಾಣಯ್ಯ, ಅಣ್ಣಾರ್ಕಂಡ ಎಸ್. ಸೋಮಯ್ಯ, ಕುಕ್ಕೆರ ಎ. ಗಣಪತಿ, ಕುಕ್ಕೆರ ಎ. ಅಯ್ಯಪ್ಪ, ಕುಕ್ಕೆರ ಎಸ್. ಪೂವಯ್ಯ, ನೆಲ್ಲಮಕ್ಕಡ ಎಸ್. ಎಂ. ಪೂಣಚ್ಚ, ಬಲ್ಲರಂಡ ಎಂ. ಅಧಿತ, ನೆಲ್ಲಮಕ್ಕಡ ಎಂ. ಮೊಣಪ್ಪ, ಕಾಡುಮಂಡ ಎ. ತಿಮ್ಮಯ್ಯ, ಕಾಡುಮಂಡ ಬಿ. ತಮ್ಮಯ್ಯ, ಚೇರಂಡ ಪಿ. ಶುಭಾಷ್, ಬೊಡ್ಡಂಡ ಎಂ. ರೋಷನ್, ತೊಂಡಿಯಂಡ ಎ. ಪೂಣಚ್ಚ, ಬೊಳೆಯಾಡಿರ ಎ. ಅರುಣ, ಕುಕ್ಕೆರ ಎಂ. ದಿನು ಮೇದಪ್ಪ, ಬಲ್ಲಚಂಡ ಚಂದನ್, ನೆಲ್ಲಮಕ್ಕಡ ಪವನ್ , ಹೊಸ್ಕೇರಿ ಗ್ರಾ. ಪಂ. ಪಿ.ಡಿ.ಓ ಅಂಜನ ಮೂರ್ತಿ ಹಾಗೂ ಇತರ ಅದ್ಯಾಪಕ ವೃಂದದವರು ಪಾಲ್ಗೊಂಡಿದ್ದರು.