ಪ್ರಬಂಧ ಸ್ಪರ್ಧೆ: ಪೊನ್ನಂಪೇಟೆಯ ಶಿಹಾಬ್ ಪ್ರಥಮ

08/10/2020

ಮಡಿಕೇರಿ ಅ. 8 : ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿ ಆಶ್ರಯದಲ್ಲಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ತ್ವಲಬಾ ವಿಂಗ್ ಕೊಡಗು ಜಿಲ್ಲೆ ಪ್ರಾಯೋಜಕತ್ವದಲ್ಲಿ ಆಗಸ್ಟ್ 15 ಸ್ವಾತಂತ್ರ್ಯ ದಿನದ ಫ್ರೀಡಂ ಸ್ಕ್ವಯರ್ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶಿಹಾಬ್ ಪೊನ್ನಂಪೇಟೆ ಪಡೆದಿದ್ದಾರೆ ಎಂದು ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಹೈಬ್ ಫೈಝಿ ಕೊಳಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದ್ವಿತೀಯ ಸ್ಥಾನವನ್ನು ಶರಫುದ್ದೀನ್ ವಿರಾಜಪೇಟೆ, ತೃತೀಯ ಸ್ಥಾನವನ್ನು ಶಬ್ರೀನ ವಿರಾಜಪೇಟೆ ಹಾಗೂ ನೌಷಾದ್ ಕಟ್ಟತ್ತಾರ್ ಪಡೆದಿದ್ದರು.
ಸುಮಯ್ಯ ಕೃಷ್ಣಾಪುರ ಹಾಗೂ ಜದೀರ್ ಪಾಲಿಪೆಟ್ಟ ಪ್ರೋತ್ಸಾಹಕರ ಬಹುಮಾನವನ್ನು ಪಡೆದಿದ್ದಾರೆ ಎಂದು ಸುಹೈಬ್ ಫೈಝಿ ತಿಳಿಸಿದ್ದಾರೆ.