ಕಡವಲ ಮರದ ಔಷದೀಯ ಗುಣಗಳು

10/10/2020

ಈ ಸಸ್ಯವು ಆಂಥೊಸಿಫಾಲಸ್ ಇಂಡಿಕಸ್ (Anthocephalus indicus) ಎಂದು ಕರೆಯಲ್ಪಡುವ ಕಡವಲ ಮರವು ಒಂದು ಔಷದೀಯ ಸಸ್ಯಮೂಲಿಕೆ. ಕಡವಲ ಮರದ ಉಗಮ ಇಂದು ನೆನ್ನೆಯದಲ್ಲ.ಇದು ದ್ವಾಪರ ಯುಗದಿಂದ ಇತ್ತು ಎಂದು ಭಾಗವತದ ಕಥನಗಳಿಂದ ತಿಳಿದುಬರುತ್ತದೆ. ಒಮ್ಮೆ ಶ್ರೀ ಕೃಷ್ಣ ಕದಂಬವನದಲ್ಲಿ ಗೋಪಿಕಾಸ್ತ್ರೀಯರೊಡನೆ ವಿಹರಿಸುತ್ತಿದ್ದನಂತೆ, ಮಥುರಾ ಮತ್ತು ಭರತಪುರದ ಮಧ್ಯೆ ಅಂತಹ ಕದಂಬವನದ ಅವಶೇಷಗಳನ್ನು ಈಗಲೂ ಕಾಣಬಹುದಂತೆ. ಶಿವನಿಗೆ ಈ ಮರದ ಹೂ ಶ್ರೇಷ್ಠವೆಂಬುದು ನಂಬಿಕೆಯಿದೆ.

ಕನ್ನಡದಲ್ಲಿ ಇತರ ಹೆಸರುಗಳು : ಅರಿಸಿನತೇಗ, ಕಡವ, ಕಡವಾಳ, ಕಡಹದಮರ, ಕಾಡಬಲಿಗೆ, ಕಡ್ವಾಲ, ಕೊಡೆಯಾಲ, ದಾರುಕದಂಬ, ಹೆಲ್ತಿಗೆ

ಉಪಯೋಗಗಳು :
ಇದರ ತೊಗಟೆಯ ಕಷಾಯವನ್ನು ಕುಡಿಯುವುದರಿಂದ ಜ್ವರ ವಾಸಿಯಾಗುತ್ತದೆ.
ತೊಗಟೆಯ ರಸ ಮತ್ತು ನಿಂಬೆರಸವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಸಮಪ್ರಮಾಣದಲ್ಲಿ ಗಸಗಸೆ ಮತ್ತು ಪತಿಕವನ್ನು ಸೇರಿಸಿ ಅರೆದು ಕಣ್ಕಪ್ಪಿನಂತೆ ಹಚ್ಚುವುದರಿಂದ ಕಣ್ಣಿನ ಉರಿ ವಾಸಿಯಾಗುತ್ತದೆ.
ಹಣ್ಣುಗಳನ್ನು ತಿನ್ನುವುದರಿಂದ ಬಾಯಾರಿಕೆಯಿಂದ ಕೂಡಿದ ಜ್ವರ ವಾಸಿಯಾಗುತ್ತದೆ.
ಹಣ್ಣಿನ ರಸಕ್ಕೆ ಜೀರಿಗೆ ಮತ್ತು ಸಕ್ಕರೆ ಸೇರಿಸಿ ಕುಡಿಸುವುದರಿಂದ ಉದರ ಶೋಲೆಗಳು ವಾಸಿಯಾಗುತ್ತದೆ.
ಕಡವಲಮರದ ಪಂಚಾಂಗ ಚೂರ್ಣವನ್ನು ಗೋಧಿ ಗಂಜಿಯೊಡನೆ ಸೇವಿಸುವುದರಿಂದ ವಾತಾರೋಗಗಳು ಗುಣವಾಗುತ್ತದೆ.
ಕಡವಲಮರದ ಸಮೂಲವನ್ನು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಕೊಂಡು ತುಪ್ಪದೊಡನೆ ಸುಮಾರು ೬ ತಿಂಗಳು ಸೇವಿಸುವುದರಿಂದ ಸರ್ವವ್ಯಾದಿಗಳು ಗುಣವಾಗುತ್ತದೆ.