ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ ಮಡಿಕೇರಿಯ ಹಿಂದೂ ರುದ್ರಭೂಮಿಯಲ್ಲಿ ಶ್ರಮದಾನ

October 10, 2020

ಮಡಿಕೇರಿ ಅ. 10 : ವಿಶ್ವ ಹಿಂದೂ ಪರಿಷದ್ ಬಜರಂಗದಳದ ವತಿಯಿಂದ ಮಡಿಕೇರಿ ನಗರದ ಚೈನ್ ಗೇಟ್ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ಶ್ರಮದಾನ ಮಾಡಲಾಯಿತು.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಒಂದಕ್ಕಿಂತ ಹೆಚ್ಚು ಮರಣ ಪ್ರಕರಣ ಹೆಚ್ಚಾದಲ್ಲಿ ಹಿಂದೂ ರುದ್ರಭೂಮಿಯಲ್ಲಿ ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ಮೃತ ವ್ಯಕ್ತಿಯ ದಹನ ಕಾರ್ಯಕ್ಕೆ ಸುಸಜ್ಜಿತ ಚಿತೆಯನ್ನು ನಿರ್ಮಾಣ ಮಾಡಿದರು.
ಅಲ್ಲದೇ, ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕಾಗಿ ಸೌದೆ ಜೋಡಿಸಿಕೊಳ್ಳಲಾಯಿತು.
ಈ ಸೇವಾ ಕಾರ್ಯದಲ್ಲಿ ಕೆ.ಹೆಚ್. ಚೇತನ್, ಸುರೇಶ್ ಮುತ್ತಪ್ಪ, ರವೀಂದ್ರ, ಗಿರೀಂದ್ರ, ದುರ್ಗೇಶ್, ರಮೇಶ್, ಮಹೇಶ್ ಮೇಸ್ತ್ರಿ, ಚರಣ್, ವಿನಯ್ ಕುಮಾರ್, ಅರುಣ್ ವೆಲ್ಡರ್, ಉಡೋತ್ತಿನ ಕಿಶೋರ್, ಜಯ, ಜೀವನ್, ಪ್ರಸಾದ್, ತಿರುಮಲ ಇದ್ದರು.