ಮಂಡ್ಯ ಲೋಕಸಭೆ ಚುನಾವಣೆಯ ಕೃತಿ “ಮತಭಿಕ್ಷೆ” ಶೀಘ್ರ ಬಿಡುಗಡೆ

13/10/2020

ಮಡಿಕೇರಿ ಅ. 13 : 2019ರಲ್ಲಿ ನಡೆದ ಮಂಡ್ಯ ಲೋಕಸಭೆಯ ರೋಚಕ ಚುನಾವಣೆ ಕುರಿತು ಪುಸ್ತಕ ಮತಭಿಕ್ಷೆ, ದಿ ಅನ್‍ಟೋಲ್ಡ್ ಸ್ಟೋರಿ’’ಎಂಬ ನೂತನ ಕೃತಿ ಶೀಘ್ರ ಬಿಡುಗಡೆಯಾಗಲಿದೆ.

ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಈ ಕೃತಿಯನ್ನು ಬರೆದಿದ್ದಾರೆ. ಇದು ಅವರ 25ನೇ ಕೃತಿ. ಇಲ್ಲಿವರೆಗೆ ನಡೆದ ಚುನಾವಣೆಗಳಲ್ಲಿ 2019ರಲ್ಲಿ ನಡೆದ ಮಂಡ್ಯಲೋಕಸಭಾ ಚುನಾವಣೆ ವಿಭಿನ್ನವಾಗಿತ್ತು. ಇಡಿ ದೇಶದ ಗಮನ ಸೆಳೆದಿತ್ತು. ಈ ಚುನಾವಣೆಯ ಒಳನೋಟಗಳನ್ನು ಕೃತಿಯಲ್ಲಿ ತೆರೆದಿಡಲಾಗಿದೆ. ರಾಜಕೀಯ ವಿಶ್ಲೇಷಣೆಯಿಲ್ಲದೆ, ಯಾವ ಪಕ್ಷ, ನಾಯಕರ ಪರ ಅಥವಾ ವಿರೋಧ ಇಲ್ಲದೆ ಅಂದಿನ ಹೇಳಲಾಗದ ಸತ್ಯಗಳನ್ನು ಹೊರಗೆಡವಿದ್ದಾರೆ.

ಎಲ್ಲಿದ್ದೀಯಪ್ಪಾ?’’, “ಟೂರಿಂಗ್ ಟಾಕೀಸ್’’, ಕಳ್ಳೆತ್ತು’,ಜೋಡೆತ್ತು’’ ಮುಂತಾದ ಪದಪುಂಜಗಳೊಂದಿಗೆ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿಯೊಬ್ಬರ ಪುತ್ರನನ್ನು ಏಕಾಂಗಿ’’ ಮಹಿಳೆ ಸೋಲಿಸಿರುವುದು ಇತಿಹಾಸ. ಅಂದಿನ ಹಲವು ಘಟನೆಗಳು ಮರೆತುಹೋಗದೆ ಇತಿಹಾಸದಲ್ಲಿ ದಾಖಲಾಗಬೇಕು. ಪತ್ರಿಕೋದ್ಯಮ ಹಾಗೂ ಹಾಗೂ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಇದೊಂದು ಅಧ್ಯಯನ ಗ್ರಂಥವಾಗಬೇಕು ಎನ್ನುವ ಉದ್ದೇಶದಿಂದ ರಚಿಸಲಾಗಿದೆ.

ಹಲವು ಸ್ವಾರಸ್ಯಕರ ಪ್ರಸಂಗಗಳೊಂದಿಗೆ ವಿಭಿನ್ನ ಶೈಲಿಯಲ್ಲಿ ಅಂದಿನ ಘಟನೆಗಳನ್ನು ಕಟ್ಟಿಕೊಡಲಾಗಿದೆ. ಮಾನಸ ಅವರ ಖ್ಯಾತತನು ಮನು’’ ಪ್ರಕಶನ ಈ ಕೃತಿಯನ್ನು ಹೊರತಂದಿದೆ. ಮೈಸೂರಿನಲ್ಲಿ ಮುಂದಿನ ವಾರ ನಡೆಯುವ ಕಾರ್ಯಕ್ರಮದಲ್ಲಿ ಈ ಕೃತಿ ಬಿಡುಗಡೆಯಾಗಲಿದೆ.