ಪೊಮ್ಮಕ್ಕಡ ಕೊಡವ ಕಾರ್ಯಕ್ರಮ : ಸ್ತ್ರೀಕುಲಕ್ಕೆ ಗೌರವ ನೀಡಿ : ಚಿ.ನಾ.ಸೋಮೇಶ್ ಕರೆ

ಮಡಿಕೇರಿ ಅ.13 : ಹೆಣ್ಣು ಅಭಿವೃದ್ಧಿಯ ಹರಿಕಾರಿಣಿ ಹಾಗೂ ಅವಳಿಗೆ ಸರಿಸಾಟಿ ಯಾರು ಇಲ್ಲ, ಸ್ತ್ರೀಕುಲಕ್ಕೆ ಗೌರವ ನೀಡುವ ಕಾರ್ಯವಾಗಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಚಿ.ನಾ.ಸೋಮೇಶ್ ತಿಳಿಸಿದರು.
ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ವತಿಯಿಂದ ನಡೆದ ಪೊಮ್ಮಕ್ಕಡ ಕೊಡವ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಮಾತಿನಂತೆ ಹೆಣ್ಣು ದೈವ ಸ್ವರೂಪಿಯಾಗಿದ್ದಾಳೆ ಎಂದು ಅವರು ಹೇಳಿದರು. ಸಮಾಜದ ಅಭಿವೃದ್ಧಿಯಲ್ಲಿ ಹೆಣ್ಣು ಮಕ್ಕಳ ಪಾತ್ರ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಿ ಮಾತನಾಡಿದ ಚಿ.ನಾ ಸೋಮೇಶ್ ಅವರು ಕೊಡವ ಹೆಣ್ಣು ಮಕ್ಕಳ ಉಡುಗೆ ತೊಡುಗೆಗಳು ವಿಶ್ವ ವ್ಯಾಪಿಯಾಗಿದ್ದು, ಒಂದು ವಿಶೇಷ ಸ್ಥಾನ ಕಾಪಾಡಿಕೊಂಡು ಬಂದಿದ್ದಾರೆ.
ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಿಂದ ಕೊಡಗು ಪ್ರಪಂಚಾದ್ಯಂತ ಹೆಸರುವಾಸಿಯಾಗಿದ್ದು, ಭಾರತೀಯ ಸೈನ್ಯಕ್ಕೆ ಕೊಡವರ ಕೊಡುಗೆ ಅಪಾರವಾದದ್ದು ಎಂದು ತಿಳಿಸಿದರು.
ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷರಾದ ಬಾಚರಣಿಯಂಡ ರಾಣು ಅಪ್ಪಣ್ಣ ಅವರು ಮಾತನಾಡಿ ಭಾರತ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಗೌರವ ಸ್ಥಾನ ಮಾನಗಳಿವೆ. ಅದನ್ನು, ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಸಾಮಾಜಿಕವಾಗಿ ಬದಲಾವಣೆಯಾದರು ಸಾಂಸ್ಕøತಿಕ ಬದಲಾವಣೆಯಾಗಬಾರದು. ಸಂಸ್ಕøತಿಯನ್ನು ಬೆಳೆಸಿಕೊಂಡು ಹೋಗಬೇಕು. ಪ್ರಸ್ತುತದಲ್ಲಿ ಕೊಡವ ಸಂಸ್ಕøತಿಯನ್ನು ಮರೆಯಬಾರದು ಎಂದರು.
ಕೊಡವ ಸಮಾಜ ಪೆÇಮ್ಮಕ್ಕಡ ಕೂಟದ ಅಧ್ಯಕ್ಷರಾದ ಕನ್ನಂಡ ಕವಿತಾ ಬೊಳ್ಳಪ್ಪ ಅವರು ಕೊಡವ ಸಂಸ್ಕøತಿಯನ್ನು ಉಳಿಸಿ ಬೆಳಸುವಲ್ಲಿ ಹೆಣ್ಣು ಮಕ್ಕಳ ಪಾತ್ರ ಎಂಬ ವಿಷಯದ ಕುರಿತು ವಿಚಾರ ಮಂಡನೆ ಮಾಡಿ ಮಕ್ಕಳಿಗೆ ಸಂಸ್ಕøತಿ ಮತ್ತು ಸಂಸಾರದ ಬಗ್ಗೆ ತಿಳಿಸಬೇಕು.
ಹಬ್ಬಗಳ ಮಹತ್ವ ಮತ್ತು ಶಾಸ್ತ್ರ ಸಾಂಪ್ರದಾಯದ ಬಗ್ಗೆ ಹೆಣ್ಣು ಮಕ್ಕಳಿಗೆ ತಿಳಿಸಬೇಕು. ಹೆಣ್ಣು ಮಕ್ಕಳು ಎಲ್ಲೇ ಹೋಗುವಾಗ ಸಾಂಪ್ರದಾಯಕ ನೀತಿ ಮತ್ತು ಮೂಲ ಪದ್ಧತಿಯನ್ನು ಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು ಮತ್ತು ಇತ್ತೀಚೆಗೆ ವಿವಾಹ ವಿಚ್ಚೇದನ ಅತಿಯಾಗುತ್ತಿದ್ದು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಹಬಾಳ್ವೆಯಿಂದ ಸಂಸಾರ ನಡೆಸಲು ಪೆÇೀಷಕರು ತಿಳಿಹೇಳಬೇಕಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಮಾತಾನಾಡಿ ಹೆಣ್ಣು ಮಕ್ಕಳಿಗೆ ಪುರುಷರμÉ್ಟ ಸಮಾನ ಹಕ್ಕು ಎಂಬುವುದು ಕೊಡವ ಪದ್ಧತಿಯಲ್ಲಿದೆ. ಅದು ನಮ್ಮ ಹೆಮ್ಮೆ ಎಂದು ತಿಳಿಸಿದರು.
ಕನಾಟಕ ಕೊಡವ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ.ಗಿರೀಶ್ ಅವರು ನಿರೂಪಿಸಿ ವಂದಿಸಿದರು. ಸಂಚಾಲಕರಾದ ಬಾಚಮಂಡ ಗೌರಮ್ಮ ಮಾದಮ್ಮಯ್ಯ ಅವರು ಸ್ವಾಗತಿಸಿದರು. ಅಕಾಡಮಿಯ ಸದಸ್ಯರು ಇತರರು ಹಾಜರಿದ್ದರು.
