ದೇವನೂರು ರಾಜಾಪುರದಲ್ಲಿ ಹುಲಿ ದಾಳಿ : ಹಸು ಬಲಿ

13/10/2020

ಮಡಿಕೇರಿ ಅ.13 : ವಿರಾಜಪೇಟೆ ತಾಲ್ಲೂಕಿನ ಬಾಳೆಲೆ ಹೋಬಳಿಯಲ್ಲಿನ ದೇವನೂರು ಗ್ರಾಮದ ರಾಜಾಪುರದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ಹುಲಿಯೊಂದು ಕೊಂದುಹಾಕಿ ಸಾಕಷ್ಟು ದೂರ ಎಳೆÉದೊಯ್ದಿರುವ ಘಟನೆ ನಡೆದಿದೆ.
ಗ್ರಾಮದ ನಿವಾಸಿ ಮುಕ್ಕಾಟಿರ ಎಂ. ಕುಶಾಲಪ್ಪ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಗಬ್ಬದ ಹಸುವಿನ ಮೇಲೆ ರಾತ್ರಿಯ ವೇಳೆ ಹುಲಿ ದಾಳಿ ನಡೆಸಿ, ಹಸುವನ್ನು ಕೊಂದುಹಾಕಿ ಕಟ್ಟಿಹಾಕಿದ್ದ ಹಗ್ಗ ಮತ್ತು ಕಂಬ ಸಮೇತವಾಗಿ ಕೊಟ್ಟಿಗೆಯಿಂದ ಅಂದಾಜು ನೂರು ಮೀಟರ್ ದೂರಕ್ಕೆ ಎಳೆದೊಯ್ದು, ಹಸುವಿನ ದೇಹದ ಒಂದು ಭಾಗವನ್ನು ತಿಂದು ಹಾಕಿರುವ ಘಟನೆ ನಡೆದಿದೆ.