ಬೈಚನಹಳ್ಳಿ ಅಂಗನವಾಡಿ ಶಿಕ್ಷಕಿ ಶಾರದ ಅವರಿಗೆ ಬೀಳ್ಕೊಡುಗೆ

October 14, 2020

ಮಡಿಕೇರಿ ಅ.14 : ವಯೋ ನಿವೃತ್ತಿ ಹೊಂದಿದ ಬೈಚನಹಳ್ಳಿ ಅಂಗನವಾಡಿ ಶಿಕ್ಷಕಿ ಶಾರದ ಅವರನ್ನು ಬೀಳ್ಕೊಡಲಾಯಿತು.
ಬೈಚನಹಳ್ಳಿಯ ಗೆಳೆಯರ ಬಳಗದ ಅಶ್ರಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಶಾಲನಗರ ಪಪಂ ಸದಸ್ಯರಾದ ಎಂ.ಬಿ.ಸುರೇಶ್, ಅಮೃತ್‍ರಾಜ್, ಜಯವರ್ಧನ್, ಜಯಲಕ್ಷ್ಮಿ, ಬಿ.ಎಲ್.ಜಗದೀಶ್, ಡಿ.ಕೆ.ತಿಮ್ಮಪ್ಪ, ನಗರ ಬಿಜೆಪಿ ಅಧ್ಯಕ್ಷ ವಿ.ಎನ್.ಉಮಾಶಂಕರ್, ಕಿರಿಯ ಆರೋಗ್ಯ ಸಹಾಯಕಿ ಸುಶೀಲಾ, ಗೆಳೆಯರ ಬಳಗದ ಅಧ್ಯಕ್ಷ ಶ್ರೀಕಾಂತ್, ಶಿವುಕುಮಾರ್, ವಿನೀತ್ ಮತ್ತಿತರರು ಇದ್ದರು. ಇದೇ ಸಂದರ್ಭ ಶಾರದ ಅವರನ್ನು ಅಂಗನವಾಡಿ ಮತ್ತು ಅಶಾ ಕಾರ್ಯಕರ್ತೆಯರು ಸನ್ಮಾನಿಸಿ ಗೌರವಿಸಿದರು.

error: Content is protected !!