ನೃತ್ಯ ಕಲಾವಿದೆ ಶೋಭಾ ನಾಯ್ಡು ನಿಧನ

October 15, 2020

ಹೈದರಾಬಾದ್ ಅ.15 : ಖ್ಯಾತ ಕೂಚುಪುಡಿ ನೃತ್ಯ ಕಲಾವಿದೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶೋಭಾ ನಾಯ್ಡು ಅವರು ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ನಿಧನರಾದರು, ಅಲ್ಲಿ ಅವರು ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
1956 ರಲ್ಲಿ ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿ ಜನಿಸಿದ್ದ ಶೋಭಾ ನಾಯ್ಡು ಕೂಚುಪುಡಿ ನೃತ್ಯದ ತರಬೇತಿಯನ್ನು ವೇಂಪತಿ ಚಿನ್ನ ಸತ್ಯಂ ಅವರಿಂದ ಪಡೆದರು.
ಶೋಭಾ ಅವರಿಗೆ 1991 ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2001 ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಗೌರವ ಮದ್ರಾಸ್‍ನ ಶ್ರೀ ಕೃಷ್ಣ ಗಣ ಸಭೆಯಿಂದ “ನೃತ್ಯ ಚೂಡಾಮಣಿ” ಪ್ರಶಸ್ತಿ ಸಂದಿದೆ. ಅವರು ಹೈದರಾಬಾದ್‍ನ 40 ವರ್ಷಪರಂಪರೆ ಇರುವ ಕೂಚುಪುಡಿ ಆರ್ಟ್ ಅಕಾಡೆಮಿಗೆ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಭಾರತ ಮತ್ತು ವಿದೇಶಗಳ 1,500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.