ರುಚಿಕರವಾದ ಟೊಮೆಟೊ ಪಾಸ್ತಾ ತಯಾರಿಸುವ ವಿಧಾನ

15/10/2020

ಬೇಕಾಗುವ ಸಾಮಾಗ್ರಿಗಳು: ಪಾಸ್ತಾ 1 ಪ್ಯಾಕೆಟ್, ಬೆಳ್ಳುಳ್ಳಿ 7-8 ಎಸಳು, ಈರುಳ್ಳಿ 1, ದುಂಡು ಮೆಣಸಿನ ಕಾಯಿ 1, ಟೊಮೆಟೊ 2, ಹಸಿಮೆಣಸಿನ ಕಾಯಿ 2-3 (ಖಾರಕ್ಕೆ ತಕ್ಕಷ್ಟು), ಟೊಮೆಟೊ ಪೇಸ್ಟ್ ಅರ್ಧ ಕಪ್, ಪುದೀನಾ ಪೇಸ್ಟ್ 1 ಚಮಚ, ಕೆಂಪು ಮೆಣಸಿನ ಪುಡಿ ಅರ್ಧ ಚಮಚ, ಕರಿಮೆಣಸಿನ ಪುಡಿ 1 ಚಮಚ, ಸಕ್ಕರೆ 1 ಚಮಚ, ನೀರು, ಉಪ್ಪು, ಎಣ್ಣೆ.

ತಯಾರಿಸುವ ವಿಧಾನ: ಪಾಸ್ತಾವನ್ನು ತೊಳೆದು ಅದಕ್ಕೆ ನೀರು ಹಾಗೂ ಸ್ವಲ್ಪ ಉಪ್ಪು ಹಾಕಿ ಬೇಯಿಸಿ. ಬೇಯಿಸುವಾಗ 2 ಹನಿ ಎಣ್ಣೆ ಹಾಕಿ ಆಗ ಪಾಸ್ತಾ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಬೆಂದ ಪಾಸ್ತಾದ ನೀರು ಬಸಿದು ಒಂದು ಪಾತ್ರೆಯಲ್ಲಿ ಹಾಕಿಡಿ.

ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಕಾದ ನಂತರ ಅದಕ್ಕೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣವವರೆಗೆ ಹುರಿಯಿರಿ. ನಂತರ ದುಂಡು ಮೆಣಸಿನಕಾಯಿ ಹಾಕಿ ಅದು ಬೇಯುವವರೆಗೆ ಹುರಿಯಿರಿ.

ಈಗ ಹಸಿಮೆಣಸಿನಕಾಯಿ, ರುಚಿಗೆ ತಕ್ಕ ಉಪ್ಪು, ಸಕ್ಕರೆ, ಕರಿಮೆಣಸಿನ ಪುಡಿ ಹಾಗೂ ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಹುರಿಯಬೇಕು. ನಂತರ ಟೊಮೆಟೊ ಪೇಸ್ಟ್ ಹಾಕಿ 2 ನಿಮಿಷ ಕುದಿಸಿ ನಂತರ ಅದಕ್ಕೆ ಸಕ್ಕರೆ ಹಾಗೂ ಪುದೀನಾ ಪೇಸ್ಟ್ ಒಂದು ಚಮಚ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಬೇಕು.

ಈ ಮಿಶ್ರಣ ಗಟ್ಟಿಯಾದ ಗ್ರೇವಿ ರೀತಿಯಾದ ಮೇಲೆ ಅದಕ್ಕೆ ಬೇಯಿಸಿದ ಪಾಸ್ತಾವನ್ನು ಹಾಕಿ 2 ನಿಮಿಷ ಸೌಟ್ ನಿಂದ ತಿರುಗಿಸುತ್ತಾ ಬಿಸಿ ಮಾಡಿ ಉರಿಯಿಂದ ಇಳಿಸಿದರೆ ರುಚಿಕರವಾದ ಟೊಮೆಟೊ ಪಾಸ್ತಾ ರೆಡಿ.