ದಸರಾ ಸಿಹಿ ಸ್ಪೆಷಲ್ : ಗಸಗಸೆ ಪಾಯಸ

ಬೇಕಾದ ಸಾಮಾಗ್ರಿಗಳು: ಗಸಗಸೆ – 1 ಕಪ್ ಅಕ್ಕಿ, 1 ತೆಂಗಿನಕಾಯಿ – 5 ಏಲಕ್ಕಿ , ಸ್ವಲ್ಪ ಗೊಡಂಬಿ ಹಾಗೂ ಒಣ ದ್ರಾಕ್ಷಿ, ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ – (ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು).
ತಯಾರಿಸುವ ವಿಧಾನ: ಬಾಣಲೆಯಲ್ಲಿ 1 ಕಪ್ ಗಸಗಸೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಅಕ್ಕಿಯನ್ನು (ಕನಿಷ್ಠ 2 ಗಂಟೆಗಳ ಕಾಲ)ನೀರಿನಲ್ಲಿ ನೆನಸಿರಿ. ತೆಂಗಿನಕಾಯಿಯನ್ನು ಪೂರ್ತಿ ತುರಿದು ಮಿಕ್ಸಿಗೆ ಹಾಕಿ ತೆಂಗಿನ ಹಾಲನ್ನು ಶೇಖರಿಸಿಟ್ಟುಕೊಳ್ಳಿ. ಹುರಿದ ಗಸಗಸೆ, ಪುಡಿಮಾಡಿದ ಏಲಕ್ಕಿ, ತೆಂಗಿನ ಹಾಲು, ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಅಗತ್ಯವಿದ್ದಷ್ಟು ನೀರನ್ನು ಹಾಕಿಕೊಳ್ಳಿ ರುಬ್ಬಿದ ಮಿಶ್ರಣವನ್ನು ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಕುದಿಸುತ್ತಿರಿ. ಬೆಲ್ಲದ ನೀರನ್ನು ಮಿಶ್ರಣಕ್ಕೆ ಬೆರೆಸಿರಿ. ಆಗಾಗ ಕೆದುಕುತ್ತಿರಿ. (ಏಲಕ್ಕಿಪುಡಿಯನ್ನು ಬಳಸದಿದ್ದರೆ ಎಸಳುಗಳನ್ನು ಹಾಗೆ ಬೇಕಾದರೂ ಹಾಕಬಹುದು) ಪಾಯಸಕ್ಕೆ ಪರಿಮಳ ಬರಲು 2 ಲವಂಗವನ್ನು ಹಾಕಬಹುದು. ಗೋಡಂಬಿ, ದ್ರಾಕ್ಷಿ ಸೇರಿಸಿ ಇನ್ನಷ್ಟು ಸಿಹಿ ಹೆಚ್ಚಿಸಬಹುದು.
