ಮುನಿಸಿಕೊಂಡ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಮ್ಮಯ್ಯ

17/10/2020

ಮಡಿಕೇರಿ ಅ.17 : ಕಾವೇರಿ ಕ್ಷೇತ್ರದಲ್ಲಿ ನಿರ್ಬಂಧಗಳನ್ನು ಸಮರ್ಪಕವಾಗಿ ಅನುಸರಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ತಲಕಾವೇರಿ, ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ತೀರ್ಥೋದ್ಭವಕ್ಕೂ ಮೊದಲು ಹೊರ ನಡೆದ ಪ್ರಸಂಗ ನಡೆಯಿತು.
ಕೋವಿಡ್ ಪರೀಕ್ಷೆ ಮಾಡಿದವರಿಗೆ ಮಾತ್ರ ಕ್ಷೇತ್ರದೊಳಕ್ಕೆ ಪ್ರವೇಶ ಎಂದು ನಿರ್ಧಾರ ಕೈಗೊಂಡು ಕೊನೇ ಕ್ಷಣದಲ್ಲಿ ಎಲ್ಲರನ್ನೂ ಒಳ ಬಿಡಲಾಗಿದೆ ಎಂದು ತಮ್ಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹೀಗೆ ಎಲ್ಲರನ್ನೂ ಕ್ಷೇತ್ರದೊಳಕ್ಕೆ ಬಿಡುವುದಿದ್ದರೆ ಬೇರೆಯವರೂ ಕ್ಷೇತ್ರಕ್ಕೆ ಬರಬಹುದಿತ್ತಲ್ಲ. ಕೋವಿಡ್ ಪರೀಕ್ಷೆ ಕೈಗೊಂಡವರು ಮಾತ್ರ ಬನ್ನಿ ಎಂದು ತೀರ್ಮಾನ ಕೈಗೊಂಡು ನಂತರ ಕೊನೇ ಕ್ಷಣದಲ್ಲಿ ಎಲ್ಲರಿಗೂ ಕ್ಷೇತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರೆ ಕ್ಷೇತ್ರಕ್ಕೆ ಬರಲು ಅಸಾಧ್ಯವಾದ ಭಕ್ತರಿಗೆ ಏನೆಂದು ಉತ್ತರಿಸುವುದೆಂದು ಅವರು ಪ್ರಶ್ನಿಸಿದರು.