ಬೆಣ್ಣೆದೋಸೆ ಹೊಟೇಲ್ ಅಗ್ನಿಗಾಹುತಿ

October 20, 2020

ಬೆಂಗಳೂರು ಅ.20 : ಬೆಂಗಳೂರು ನಗರ ಬಸವನಗುಡಿ ಸಮೀಪದ ನೆಟ್ಕಲ್ಲಪ್ಪ ಸರ್ಕಲ್ ನಲ್ಲಿರುವ ದಾವಣಗೆರೆ ಬೆಣ್ಣೆದೋಸೆ ಹೊಟೇಲ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಹೋಟೆಲ್ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ಈ ವೇಳೆ ಹೊಟೇಲ್ ನಲ್ಲಿದ್ದವರು ಹೊರಗೆ ಓಡಿ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಷಯ ಅರಿತು ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳ ಬೆಂಕಿ ನಂದಿಸಿತು.
ಶಾರ್ಟ್ ಸಕ್ರ್ಯೂಟ್ ಅಥವಾ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಬಸವನಗುಡಿ ಪೆÇೀಲೀಸರು ಪರಿಶೀಲನೆ ನಡೆಸಿದರು.

error: Content is protected !!