ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ: 7ನೇ ಹೊಸಕೋಟೆ ಅಂಗನವಾಡಿ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ
22/10/2020

ಸುಂಟಿಕೊಪ್ಪ,ಅ.22: 7ನೇ ಹೊಸಕೋಟೆ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಬಾಲಸ್ವಾಥ್ಯ ಆರೋಗ್ಯ ವತಿಯಿಂದ ಪುಟ್ಟ ಮಕ್ಕಳ ಆರೋಗ್ಯ ತಪಾಸಣೆಯನ್ನು ಗುರುವಾರ ನಡೆಸಲಾಯಿತು.
ಹುಟ್ಟಿದ ಮಕ್ಕಳಿಂದ 6ವರ್ಷದ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ಆರೋಗ್ಯ ಇಲಾಖೆಯ ವೈಧ್ಯರಾದ ಭರತ್ ಅವರು ಮಕ್ಕಳಲ್ಲಿ ಆಪೌಷ್ಠಿಕತೆಯಿಂದ ಬೆಳೆವಣಿಗೆಯಲ್ಲಿ ಕುಂಠಿತವಾಗುತ್ತಿದೆ. ಮಕ್ಕಳಿಗೆ ದೈಹಿಕ ಸದೃಢ ಆರೋಗ್ಯವನ್ನು ಹೊದಿಕೊಳ್ಳುವ ದಿಸೆಯಲ್ಲಿ ಮಕ್ಕಳ ಪೋಷಕರಿಗೆ ಸಂಪೂರ್ಣ ಮಾಹಿತಿ ಹಾಗೂ ಬಾಲಸ್ವಾಥ್ಯ ಆರೋಗ್ಯ ಯೋಜನೆಯಡಿಯಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ವೈದ್ಯಾಧಿಖಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭ 35 ರಿಂದ 40 ಮಕ್ಕಳ ತೂಕ ಮತ್ತು ಎತ್ತರ ಆಳತೆಯನ್ನು ನಡೆಸಿದ ಪೋಷಣೆ ಬೆಳವಣಿಗೆ ಬಗ್ಗೆ ತಾಯಂದಿರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭ ಆರೋಗ್ಯ ಸಹಾಯಕಿ ಸುನೀತಾ, ವೆನಿಲ್ಲ, ಅಂಗನವಾಡಿ ಕಾರ್ಯಕರ್ತೆ ಬಿಂದು,ಸಹಾಯಕಿ ಕೌಶಿ ಮತ್ತಿತರರು ಇದ್ದರು.
