ಲೇಖಕ: admin

ಮಡಿಕೇರಿ ಮಾ.6 : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವತಿಯಿಂದ ಮಡಿಕೇರಿ ಅಂಚೆ ಕಛೇರಿಯ ಸಹಕಾರದೊಂದಿಗೆ ಕಾವೇರಿ ಕ್ಷೇತ್ರದ ತೀರ್ಥ ಮತ್ತು ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಆನ್ ಲೈನ್ ಸೇವೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಇಂದು ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ತಲಕಾವೇರಿಯ 100 ಎಂಎಲ್ ತೀರ್ಥ, ತ್ರಿವೇಣಿ ಸಂಗಮ ಭಾಗಮಂಡಲದ ಶ್ರೀ ಭಗಂಡೇಶ್ವರ ದೇಗುಲದ ಪಂಚಕಜ್ಜಾಯ, ಕುಂಕುಮ, ಗಂಧವನ್ನು ಒಳಗೊಂಡ ಪ್ರಸಾದದ ಡಬ್ಬಿಯನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು. ಆಸಕ್ತಿ ಇರುವವರು www.indiapost.com   ವೆಬ್ ಸೈಟ್‍ಗೆ ಲಾಗ್ ಇನ್ ಆಗಿ, 300 ರೂ. ಪಾವತಿಸಿ ಪವಿತ್ರ ಕಾವೇರಿ ಕ್ಷೇತ್ರದ ಪ್ರಸಾದಕ್ಕೆ ಬೇಡಿಕೆಯನ್ನು ಸಲ್ಲಿಸಬಹುದು, ಈ ಆನ್ ಲೈನ್ ಬೇಡಿಕೆಗೆ ಅನುಗುಣವಾಗಿ ಅಂಚೆ ಮೂಲಕ ಪ್ರಸಾದವನ್ನು ಸಂಬಂಧಿಸಿದವರಿಗೆ ತಲುಪಿಸಲಾಗುತ್ತದೆ. ::: ದೇಶವ್ಯಾಪಿ ಲಭ್ಯ ::: ಮಡಿಕೇರಿ ಅಂಚೆ ಕಚೇರಿಯ ಸೂಪರಿಂಟೆಂಡೆ0ಟ್ ರಮೇಶ್ ಬಾಬು, ವೆಬ್ ಸೈಟ್ ಮೂಲಕ ಬರುವ ಬೇಡಿಕೆಗೆ ಅನುಗುಣವಾಗಿ ಪ್ರಸಾದವನ್ನು…

Read More

ಮಡಿಕೇರಿ ಮಾ.6 : ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಾ.8 ರಂದು “ಆರೋಗ್ಯವಂತ ಮಹಿಳೆಯರಿಂದ ಆರೋಗ್ಯಕರ ಭಾರತ” ಎನ್ನುವ ಘೋಷವಾಕ್ಯದೊಂದಿಗೆ ಮಡಿಕೇರಿಯಲ್ಲಿ ಸೈಕ್ಲೋಥಾನ್ ಸೈಕಲ್ ಜಾಥ ನಡೆಯಲಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಗ್ರೀನ್ ಸಿಟಿ ಫೋರಂ ನ ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ, ಜಿಲ್ಲಾಡಳಿತ, ಜಿ.ಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಎನ್‍ಡಿಸಿ ವಿಭಾಗ ಹಾಗೂ ಗ್ರೀನ್ ಸಿಟಿ ಫೋರಂ ಸಹಯೋಗದಲ್ಲಿ ಅಂದು ಬೆಳಿಗ್ಗೆ 7.30 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಸೈಕಲ್ ಜಾಥಾಕ್ಕೆ ಗಣ್ಯರಿಂದ ಚಾಲನೆ ದೊರೆಯಲಿದೆ ಎಂದು ಮಾಹಿತಿ ನೀಡಿದರು. ನಂತರ ಜಾಥಾ ಜನರಲ್ ತಿಮ್ಮಯ್ಯ ವೃತ್ತ, ಸ್ವಾ.ಲೀ ಅಜ್ಜಮಾಡ ದೇವಯ್ಯ ವೃತ್ತ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ರೇಸ್‍ಕೋರ್ಸ್ ರಸ್ತೆ ಮೂಲಕ ಗ್ರೇಟರ್ ರಾಜಸೀಟು ಗೆ ತಲುಪಲಿದೆ. ಜಾಥದಲ್ಲಿ ಮತದಾನದ ಮಹತ್ವ ಮತ್ತು ವಾಯು ಮಾಲಿನ್ಯ ತಡೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು. ಸಾರ್ವಜನಿಕರು ಜಾಗೃತಿ ಜಾಥದಲ್ಲಿ ಭಾಗವಹಿಸಿ ಸಹಕರಿಸುವಂತೆ ಸತ್ಯ…

Read More

ಮಡಿಕೇರಿ ಮಾ.6 : ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಮಾ.9 ರಂದು ಎಐಟಿಯುಸಿ ಮತ್ತು ಸಿಪಿಐ ನೇತೃತ್ವದಲ್ಲಿ “ಸೂರಿಗಾಗಿ ಸಮರ” ವಿಧಾನಸೌಧ ಚಲೋ ಬೃಹತ್ ಪ್ರತಿಭಟನೆಗೆ ಕೊಡಗಿನಿಂದಲೂ ಬೆಂಬಲ ಸೂಚಿಸಲಾಗಿವುದು ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, 50 ಲಕ್ಷ ಕುಟುಂಬಗಳ ನಿವೇಶನ ಮತ್ತು ವಸತಿಗಾಗಿ 5 ಲಕ್ಷ ಎಕರೆ ಭೂಮಿ ನೀಡುವಂತೆ ಆಗ್ರಹಿಸಿ ಫೆ.26 ರಂದು ಸಿರಾ ತಾಲೂಕಿನ ತಲಗುಂದು ಗ್ರಾಮದಲ್ಲಿ ಕಾಲ್ನಡಿಗೆ ಜಾಥ ಪ್ರಾರಂಭವಾಗಿದ್ದು, ಮಾ.9 ರಂದು ಬೆಂಗಳೂರಿಗೆ ತಲುಪಲಿದೆ. ಅಂದು ಕೊಡಗಿನಿಂದ ಸುಮಾರು 200 ರಿಂದ 300 ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ನಿವೇಶನಕ್ಕಾಗಿ ಆಗ್ರಹಿಸಿ 2020ರಲ್ಲಿ ಕೋಟಿ ಹೆಜ್ಜೆಯೊಂದಿಗೆ ಬಳ್ಳಾರಿಯಿಂದ ಕಾಲ್ನಾಡಿಗೆ ಜಾಥ ಆರಂಭವಾಗಿತ್ತು. ಆದರೆ ಕೋವಿಡ್ ಹೆಚ್ಚಾದ ಕಾರಣ ಜಾಥವನ್ನು ಮುಂದೂಡಲ್ಪಟ್ಟಿತ್ತು. ನಂತರ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಿಂದ ಜಾಥ ಪ್ರಾರಂಭಗೊಂಡು ಕೊಡಗು ಜಿಲ್ಲೆಯ ನಾನಾ ಗ್ರಾ.ಪಂ ಗಳಿಗೆ ತೆರಳಿ ನಿವೇಶನದ ಅರ್ಜಿಯನ್ನು ನೀಡಲಾಯಿತು. ಅಲ್ಲದೆ ಕೊನೆಯ…

Read More

ಮಡಿಕೇರಿ ಮಾ.6 : ಕಂಡಕರೆಯ ಗಾಂಧಿ ಯುವಕ ಸಂಘದ ನೂತನ ಜರ್ಸಿ ಬಿಡುಗಡೆ ಮಾಡಲಾಯಿತು. ಕೂರ್ಗ್ ಹಂಟರ್ಸ್ ಪೊನ್ನತ್ಮೊಟ್ಟೆ ಆಯೋಜಿಸಿದ ಹೊನಲು ಬೆಳಕಿನ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ  ನೂತನ‌ ಜರ್ಸಿಯನ್ನು ಚೆಟ್ಟಳ್ಳಿ ಪೊಲೀಸ್ ಉಪಠಾಣಾಧಿಕಾರಿ ಮಂಜುನಾಥ್ ಅನಾವರಣ ಗೊಳಿಸಿದರು. ಈ ಸಂದರ್ಭ ಪ್ರಮುಖರಾದ ಉಮೇಶ್, ಜೆಡಿಎಸ್ ಯುವ ಮುಖಂಡ ರಜಾಕ್, ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ತೀರ್ಪುಗಾರರಾದ ಧೀರಜ್ ರೈ, ಉನೈಸ್ ಗರಗಂದೂರು,ಕೂರ್ಗ್ ಹಂಟರ್ಸ್ ಯುವಕ‌ ಸಂಘದ ಉಪಾಧ್ಯಕ್ಷ ಮಜೀದ್,ಕೋಶಾಧಿಕಾರಿ ಶಫೀಕ್, ನಾರಾಯಣ ಆಸ್ಪತ್ರೆ ಆಂಬ್ಯುಲೆನ್ಸ್ ವ್ಯವಸ್ಥಾಪಕರಾದ ಚಂದ್ರಶೇಖರ್, ಗಾಂಧಿ ಯುವಕ ಸಂಘದ ಅಧ್ಯಕ್ಷ ಪಿ.ಎಂ.ಷರೀಫ್,  ಸದಸ್ಯರಾದ ಕೆ.ಎಂ.ಉನೈಸ್  ಹಾಜರಿದ್ದರು.

Read More

ನಾಪೋಕ್ಲು ಮಾ.6 : ಕಕ್ಕಬ್ಬೆ ವ್ಯಾಪ್ತಿಯ ಇಗ್ಗುತ್ತಪ್ಪ ಬೆಟ್ಟದಲ್ಲಿ ಕಾಣಿಸಿಕೊಂಡು ವ್ಯಾಪಕವಾಗಿ ಹಬ್ಬಿದ್ದ ಕಡ್ಗಿಚ್ಚನ್ನು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತಹಬದಿಗೆ ತಂದರು. ಮಲ್ಮ ಬೆಟ್ಟ ಶ್ರೇಣಿಯಲ್ಲಿ ಉರಿಯುತ್ತಿದ್ದ ಬೆಂಕಿ ರಾತ್ರಿ ಹೊತ್ತಿಗೆ ಸುತ್ತ ಮುತ್ತಲ ಪ್ರದೇಶಗಳಿಗೆ ಹರಡಿದ್ದು, ನೂರಾರು ಏಕ್ರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಭಾಗಮಂಡಲ ವಲಯ ಅರಣ್ಯಾಧಿಕಾರಿ ಇಲಾಖೆ ಸಿಬ್ಬಂದಿಯೊಂದಿಗೆ ಬೆಂಕಿ ನಂದಿಸಲು ಶ್ರಮಿದ್ದು, ಭಾನುವಾರ ಬೆಂಕಿ ನಿಯಂತ್ರಣಕ್ಕೆ ಬಂತು. ಭಾಗಮಂಡಲ ವಲಯ ಅರಣ್ಯಾಧಿಕಾರಿ ಟಿ.ಯ0.ರವೀಂದ್ರ ಮತ್ತು ಸಿಬ್ಬಂದಿಗಳು ಶ್ರಮಿಸಿದರು. ವಾಟೆಕಾಡು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿನ ನಿವಾಸಿ ಮುಕ್ಕಾಟಿರ ವಿನು ಬೆಳ್ಯಪ್ಪ ಅವರ ಅಡಿಕೆ ತೋಟ ಹಾಗೂ ಕಾಫಿ ತೋಟ ಬೆಂಕಿಗೆ ಆಹುತಿಯಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಲಾಯಿತು. ವರದಿ : ದುಗ್ಗಳ ಸದಾನಂದ

Read More

ನಾಪೋಕ್ಲು ಮಾ.6: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ನಾಪೋಕ್ಲು ಸಮೀಪದ ಬೊಳಿಬಾಣೆ ಎಂಬಲ್ಲಿ ನಡೆದಿದೆ. ಪಾದಚಾರಿಯೊಬ್ಬರು ಅಡ್ಡ ಬಂದ ಪರಿಣಾಮ ಕೊಳಕೇರಿ ಗ್ರಾಮದ ಕಾರು ಪಾಲ್ಟಿಯಾಗಿದ್ದು,  ಅದೃಷ್ಟವಶಾತ್ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ವರದಿ : ದುಗ್ಗಳ ಸದಾನಂದ

Read More

ಮಡಿಕೇರಿ ಮಾ.6 :  ಎಸ್‍ವೈಎಸ್ ಸುಂಟಿಕೊಪ್ಪ ಸರ್ಕಲ್ ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸುಂಟಿಕೊಪ್ಪ ಮುನವ್ವಿರುಲ್ ಇಸ್ಲಾಂ ಮದ್ರಸದಲ್ಲಿ ನಡೆದ  ಎಸ್‍ವೈಎಸ್ ಸುಂಟಿಕೊಪ್ಪ ಸರ್ಕಲ್  ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ  ಸಿದ್ದೀಕ್ ಝುಹ್ರಿ ಗದ್ದೇಹಳ್ಳ,  ಕಾರ್ಯದರ್ಶಿಯಾಗಿ  ಶಕೀರ್ ಮಾಸ್ಟರ್ ಪೊನ್ನತ್ ಮೊಟ್ಟೆ, ಕೋಶಾಧಿಕಾರಿಯಾಗಿ ಸುಲೈಮಾನ್ ಸಖಾಫಿ ಗರಗಂದೂರು, ಉಪಾಧ್ಯಕ್ಷರಾಗಿ ಸೈದಲವಿ ಸುಂಟಿಕೊಪ್ಪ ದಅವಾ ಕಾರ್ಯದರ್ಶಿ ಯಾಗಿ ರಫೀಕ್ ಲತೀಫಿ ಸುಂಟಿಕೊಪ್ಪ,  ಸಾಂತ್ವನ ಕಾರ್ಯದರ್ಶಿಯಾಗಿ ರಝಾಕ್ ಗದ್ದೆ ಹಳ್ಳ, ಸೋಶಿಯಲ್ ಕಾರ್ಯದರ್ಶಿಯಾಗಿ  ಅಬ್ದುಲ್ಲಾ ಗರಗಂದೂರು ನೇಮಕಗೊಂಡಿದ್ದಾರೆ. ಸಮಿತಿ ಸದಸ್ಯರುಗಳಾಗಿ ಅಝೀಝ್ ಫಾರೂಖಿ ಫೊನ್ನತ್ ಮೊಟ್ಟೆ, ರಫೀಕ್ ಸುಂಟಿಕೊಪ್ಪ, ಮುಜೀಬ್ ಗೆದ್ದೆಹಳ್ಳ, ಶೌಕತ್ ಫೊನ್ನತ್ ಮೊಟ್ಟೆ, ಶಾಹುಲ್ ಅಮೀದ್ ಸುಂಟಿಕೊಪ್ಪ, ರಝಾಕ್ ಸಅದಿ ಗೆದ್ದೇಹಳ್ಳ, ಅಬ್ದುಲ್ ಖಾದರ್ ಗರಗಂದೂರು, ಮುಸ್ತಫಾ ಫೊನ್ನತ್ ಮೊಟ್ಟೆ, ಸಿದ್ದೀಕ್ ಫೊನ್ನತ್ ಮೊಟ್ಟೆ, ಹಾರಿಸ್ ಫೊನ್ನತ್ ಮೊಟ್ಟೆ, ಅಶ್ರಫ್ ಬೊಯಿಕೇರಿ, ಶಿಹಾಬ್ ಮಂಜಿಕರೆ, ರಝಾಕ್ ಕಂಬಿಬಾಣೆ, ಅಶ್ರಫ್ ಗರಗಂದೂರು, ಹಮೀದ್ ಗದ್ದೇಹಳ್ಳ, ಅಬೂಬಕ್ಕರ್ ಕೊಡಗರಹಳ್ಳಿ ಮೊದಲಾದವರನ್ನು ಆಯ್ಕೆ…

Read More

ಸೋಮವಾರಪೇಟೆ ಮಾ.6 : ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೊಡಗಿನ ಮೂವರಿಗೆ ಬನವಾಸಿ ಕನ್ನಡಿಗ 2023 ರಾಜ್ಯ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ನಾಗರಭಾವಿಯಲ್ಲಿರುವ ಜ್ಞಾನಸೌಧ ಸಭಾಂಗಣದಲ್ಲಿ  ನಡೆದ ಬನವಾಸಿ ಕನ್ನಡಿಗ ಕನ್ನಡಮಯ ಟ್ರಸ್ಟಿನ 6ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ಮಾಡಿದ ಕೊಡಗಿನ  ಸೋಮವಾರಪೇಟೆಯ ಸಾಮಾಜಿಕ ಕಾರ್ಯಕರ್ತೆ ಎಂ.ಎ.ರುಬೀನಾ, ಮಡಿಕೇರಿಯ ಪವನ್ ಪೆಮ್ಮಯ್ಯ ಮತ್ತು ಕುಶಾಲನಗರದ ಚಂದ್ರು ಗೆ  ಖ್ಯಾತ ಚಲನಚಿತ್ರ ನಿರ್ದೇಶಕ  ಟಿ.ಎಸ್.ನಾಗಾಭರಣ್  ಬನವಾಸಿ ಕನ್ನಡಿಗ 2023 ರಾಜ್ಯ ಪ್ರಶಸ್ತಿಯನ್ನು  ಪ್ರದಾನ ಮಾಡಿದರು. ಈ ಸಂದರ್ಭ   ಚಲನಚಿತ್ರ ನಿರ್ದೇಶಕ ಎಸ್.ಮಹೇಂದರ್, ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಅಧ್ಯಕ್ಷರು ಶಿವಕುಮಾರ್ ನಾಗರನವಿಲೆ, ನಮ್ಮ ಕೊಡಗು ತಂಡದ ಅಧ್ಯಕ್ಷರು ನೌಷಾದ್ ಜನ್ನತ್ ಮತ್ತು ಬನವಾಸಿ ಕನ್ನಡಿಗ ಟ್ರಸ್ಟಿನ ಕಿರಣ್ ಮತ್ತು ಕಿರಣ್ ಮಯಿ ಮತ್ತಿತರು ಗಣ್ಯರು ಹಾಜರಿದ್ದರು.

Read More

ಮಡಿಕೇರಿ ಮಾ.6 : ಭ್ರಷ್ಟಾಚಾರ ಮುಕ್ತ ಕರ್ನಾಟಕ ಹೋರಾಟದ ಭಾಗವಾಗಿ ಮಾ.9 ರಂದು ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಕರ್ನಾಟಕ ಬಂದ್ ಗೆ ಕೆಪಿಸಿಸಿ ಕರೆ ನೀಡಿದೆ. ಕೊಡಗಿನಲ್ಲೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಸಾರ್ವಜನಿಕರು ಸಹಕಾರ ನೀಡಬೇಕು ಮತ್ತು ಸ್ವಯಂ ಪ್ರೇರಿತ ಬಂದ್ ಮೂಲಕ ಬೆಂಬಲ ಸೂಚಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಮನವಿ ಮಾಡಿದೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹಾಗೂ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಬಂದ್ ಗೆ ಕರೆ ನೀಡಿದರು. ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸ್ವಯಂ ಪ್ರೇರಿತರಾಗಿ ಬಂದ್ ಮಾಡಲು ಮನವಿ ಮಾಡುತ್ತೇವೆ, ಯಾರ ಮೇಲೂ ಒತ್ತಡ ಹೇರುವುದಿಲ್ಲ. ಪ್ರತಿಭಟನೆ ಅಥವಾ ರಸ್ತೆ ತಡೆ ಮಾಡುವುದಿಲ್ಲ, ರಾಜ್ಯದಲ್ಲಿ ಮಿತಿ ಮೀರಿರುವ ಭ್ರಷ್ಟಾಚಾರದ ವಿರುದ್ಧ ಜನರು ಕೂಡ ಜಾಗೃತರಾಗಿದ್ದು, ಬಂದ್ ಗೆ ಬೆಂಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚನ್ನಗಿರಿ ಕ್ಷೇತ್ರದ ಬಿಜೆಪಿ…

Read More

ಮಡಿಕೇರಿ ಮಾ.6 :  ಕೊಡಗು ಜಿ.ಪಂ, ವಿರಾಜಪೇಟೆ ತಾ.ಪಂ, ನಿಟ್ಟೂರು ಗ್ರಾ.ಪಂ ಮತ್ತು  ಸಂಜೀವಿನಿ ಒಕ್ಕೂಟದ ವತಿಯಿಂದ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ 14 ಸ್ತ್ರೀ ಶಕ್ತಿ ಸಂಘಗಳ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು ಮನೆಯಲ್ಲಿ ತಯಾರಿಸಿದ ಉತ್ಪನ್ನಗಳ ಮಾರಾಟ ಮೇಳ ನಡೆಯಿತು. ನಿಟ್ಟೂರು ಗ್ರಾಮದ ಮೇಚಂಡ ಕಿಶು ಮಾಚಯ್ಯ  ಅವರ ಗದ್ದೆಯಲ್ಲಿ  ನಡೆದ ಮೇಳಕ್ಕೆ  ಗ್ರಾ.ಪಂ  ಅಧ್ಯಕ್ಷ  ಕಾಟಿಮಾಡ ಶರೀನ್ ಮುತ್ತಣ್ಣ  ಮೇಳವನ್ನು ಉದ್ಘಾಟಿಸಿದರು.  ನಂತರ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ದೇಶದ ಆರ್ಥಿಕ ವ್ಯವಸ್ಥೆಗೆ ಶಕ್ತಿ ತಂಬುಲು ಕರೆ ನೀಡಿದರು. ಗ್ರಾ.ಪಂ  ಸದಸ್ಯೆ ಪಡಿಞರಂಡ ಕವಿತಾ ಪ್ರಭು ಕುಮಾರ್ ಮಾತನಾಡಿ,  ವಿವಿಧ ಮಳಿಗೆಗಳನ್ನು ನಮ್ಮ ಗ್ರಾಮದ ಮಹಿಳಾ ಸಂಘಟನೆಯ ಮಹಿಳೆಯರು ಅಚ್ಚುಕಟ್ಟಾಗಿ ಜೋಡಿಸಿ ತಾವು ಕೈ ತೋಟದಲ್ಲಿ ಬೆಳೆದ ತರಕಾರಿ ಮತ್ತು ತಾವೇ ಮನೆಯಲ್ಲಿ ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಇಟ್ಟಿರುವುದು ಹೆಮ್ಮೆ  ವಿಚಾರ. ಗ್ರಾಮಸ್ಥರು  ವಿವಿಧ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಹಿಳಾ ಸಂಘಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.…

Read More