ಲೇಖಕ: admin

ಮಡಿಕೇರಿ ಮಾ.6 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವದ ಅಂಗವಾಗಿ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಸಮಿತಿ, ಸಾಂಸ್ಕೃತಿಕ ಸಮಿತಿ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಾ. 8ರಂದು ಕುಶಾಲನಗರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕುಶಾಲನಗರದ ಎ.ಪಿ.ಸಿ.ಎಂ.ಎಸ್ ಸುವರ್ಣ ಮಹೋತ್ಸವ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಮಡಿಕೇರಿಯ ರೂಪಶ್ರೀ ಸತೀಶ ಅವರು ಉದ್ಘಾಟಿಸಲಿದ್ದಾರೆ. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ‌ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೂಡಿಗೆ ಕ್ರೀಡಾ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ, ಸೋಮವಾರಪೇಟೆ ಅಬಕಾರಿ ನಿರೀಕ್ಷಕರಾದ ಚೈತ್ರಾ, ಕುಶಾಲನಗರದ ಪ್ರಿಯಾಂಕ ಗಂಗಾಧರಪ್ಪ, ಕಾರ್ಯಕ್ರಮ ಸಂಚಾಲಕಿ ವನಿತಾ ಚಂದ್ರಮೋಹನ್ ಉಪಸ್ಥಿತರಿರಲಿದ್ದಾರೆ. ಪಾರಂಪರಿಕ ಆರೋಗ್ಯ ರಕ್ಷಣೆ ವಿಷಯದ ಬಗ್ಗೆ ಶಿವಮೊಗ್ಗದ ನಾಟಿ‌ವೈದ್ಯೆ ಸುಮನಾ ಮಳಲಗದ್ದೆ ಉಪನ್ಯಾಸ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಪತ್ರಕರ್ತರ ಕುಟುಂಬಸ್ತರು, ಭಜನಾ…

Read More

ಮಡಿಕೇರಿ ಮಾ.6 :  ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ  ವತಿಯಿಂದ ಕೌಶಲ್ಯ ಅಭಿವೃದ್ಧಿ ಮತ್ತು ಆದಾಯ ಗಳಿಕೆ ತರಬೇತಿ ಯೋಜನೆಯಡಿ ಚರ್ಮ ಕೈಗಾರಿಕೆಗೆ ಸಂಬಂಧಿಸಿದಂತೆ ಪೊನ್ನಂಪೇಟೆಯ ಶಿವ ಕಾಲೋನಿಯ 30 ಪಲಾನುಭವಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ   ಪ್ರಮಾಣಪತ್ರ, ರೂ.6000 ವಿದ್ಯಾರ್ಥಿವೇತನ ಮತ್ತು ಹೊಲಿಗೆ ಯಂತ್ರವನ್ನು ವಿತರಿಸಿ,  ಶುಭ ಕೋರಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಇಲಾಖಾಧಿಕಾರಿಗಳು ಹಾಜರಿದ್ದರು.

Read More

ಮಡಿಕೇರಿ ಮಾ.6 :  ನರಿಯಂದಡ ಗ್ರಾ.ಪಂ  ವ್ಯಾಪ್ತಿಯಲ್ಲಿ ರೂ. 1 ಕೋಟಿ ಅನುದಾನದಲ್ಲಿ ನಿರ್ಮಾಣವಾದ ವಿವಿಧ ರಸ್ತೆಗಳನ್ನು  ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿದರು. ನಂತರ  ಸ್ಥಳೀಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು. 

Read More

ವಿರಾಜಪೇಟೆ ಮಾ.6 : ಮಲೆತಿರಿಕೆ ಬೆಟ್ಟದ ಶ್ರೀ ಮುತ್ತಪ್ಪನ್ ಕಾವ್ ದೇವಾಲಯದ 2ನೇ ವಾರ್ಷಿಕ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಮಾ.4 ರಂದು ಆರಂಭವಾದ ತೆರೆ ಮಹೋತ್ಸವದಲ್ಲಿ ಮುಂಜಾನೆ ಗಣಪತಿ ಹೋಮ, ಸಂಜೆ ಶ್ರೀ ಮುತ್ತಪ್ಪನ್ ಮಲೆ ಎರಕ್ಕಂ, ಗುಳಿಗನ್ ವೆಳ್ಳಾಟಂ, ಮುತ್ತಪ್ಪನ್ ದೇವರ ವೆಳ್ಳಾಟಂ ಜರುಗಿತು. ನಂತರ ತೆಲುಗರ ಬೀದಿ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯದಿಂದ ಮುತ್ತಪ್ಪನ್ ಕಾವ್ ದೇಗುಲದ ವರೆಗೆ ದೀಪಾರಾಧನೆಯ ಮೆರೆವಣಿಗೆ ನೆಡೆಯಿತು. ವಸೂರಿಮಾಲ ದೇವರ ಕೋಲವು ಡೆಂಟಲ್ ಕಾಲೇಜು ಬಳಿಯ ನೀರು ಕೊಲ್ಲಿಯಿಂದ ಹೊರಟು ದೇಗುಲ ಪ್ರವೇಶ ಮಾಡಿತು, ರಾತ್ರಿ ಪೊಟ್ಟನ್ ದೇವರ ಕೂಟ್ ಪಾಟು ಪ್ರಾರಂಭಗೊಂಡು ಅಂತ್ಯ ಕಂಡಿತ್ತು. ರಾತ್ರಿ 11 ವಿಷ್ಣುಮೂರ್ತಿ ದೇವರ ತೋಟ್ಟಂ ಪಾಟು, ಮಧ್ಯರಾತ್ರಿ ಗುಳಿಗನ್ ದೈವದ ತೆರೆ ನಡೆಯಿತು. ಮರುದಿನ ಬೆಳಿಗ್ಗೆ ಪೊಟ್ಟನ್ ದೇವರ ಪ್ರವೇಶ ನಡೆದು ಸಂಜೆ ಅಗ್ನಿಪ್ರವೇಶವಾಯಿತು. ರಾತ್ರಿ ವಸೂರಿಮಾಲ ದೇವರ ತೆರೆ, ವಿಷ್ಣುಮೂರ್ತಿ ದೇವರ ತೆರೆ, ವಸೂರಿಮಾಲ ಕುರುತಿ ಪೂಜೆ, ಪೊಟ್ಟನ್ ದೇವರ ಕುಟ್ಟಿ…

Read More

ಮಡಿಕೇರಿ ಮಾ.6 : ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಪ್ರವರ್ಗ-1 ಕ್ಕೆ ಸೇರಿದ ಅಲೆಮಾರಿ/ ಅರೆಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲು ಅರ್ಹ ವಸತಿ ರಹಿತ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾ.15 ಕೊನೆಯ ದಿನವಾಗಿದೆ. ಸಂಬಂಧಿಸಿದ ಅರ್ಜಿಯನ್ನು ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಕಚೇರಿಯಲ್ಲಿ ಹಾಗೂ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ಪಡೆಯಬಹುದು. ವಸತಿ ಸೌಲಭ್ಯದ ಫಲಾಪೇಕ್ಷಿಗಳು ಸರ್ಕಾರದ ಆದೇಶದಂತೆ ಅಲೆಮಾರಿ/ಅರೆಅಲೆಮಾರಿ ಸಮುದಾಯದವರೆಂದು ಗುರುತಿಸಿ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಅರ್ಜಿದಾರರು ಈ ಹಿಂದೆ ಯಾವುದೇ ಯೋಜನೆಗಳಲ್ಲಿ, ವಿವಿಧ ಇಲಾಖೆಗಳು/ ನಿಗಮಗಳಿಂದ ವಸತಿ ಸೌಲಭ್ಯವನ್ನು ಪಡೆದಿರಕೂಡದು. ವಸತಿ ರಹಿತರು ಸ್ವಂತ ನಿವೇಶನ ಹೊಂದಿರಬೇಕು ಹಾಗೂ ನಿವೇಶನವು ಅರ್ಜಿದಾರರಾದ ಮಹಿಳೆ/ ಪುರುಷರ ಹೆಸರಿನಲ್ಲಿ ನೊಂದಣಿಯಾಗಿರಬೇಕು. ಕುಟುಂಬದ ಒಟ್ಟು ವಾರ್ಷಿಕ ವರಮಾನ ರೂ.2 ಲಕ್ಷಗಳ ಮಿತಿಯೊಳಗಿರಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಮ್ಯಾನ್ಸ್ ಕಾಂಪೌಂಡ್…

Read More

ಸೋಮವಾರಪೇಟೆ ಮಾ.6 : ಒಕ್ಕಲಿಗರ ಯುವ ವೇದಿಕೆ ಸೋಮವಾರಪೇಟೆs, ಅಮೇಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ, ಕೊಡಗು ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಸಂಯುಕ್ತಶ್ರಯದಲ್ಲಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಕ್ಕಲಿಗರ ಕಪ್-2023 ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ 8 ತಂಡಗಳು  ಕ್ವಾಟರ್ ಫೈನಲ್ ಗೆ ತಲುಪಿದೆ. ಬ್ಯಾಂಕ್ ಆಫ್ ಬರೋಡ ತಂಡ ಮುಂಬೈ ಯುವ ಪಲ್ಟನ್ ತಂಡದ ವಿರುದ್ಧ ಸೆಣಸಲಿದೆ. ಕೆ.ಎಸ್.ಪಿ ಮತ್ತು ಕರ್ನಾಟಕ 11, ಸೌತ್‍ಸೆಂಟ್ರಲ್ ರೈಲ್ವೆ ಮತ್ತು ಎರ್ ಇಂಡಿಯಾ, ಹರ್ಯಾಣ ಎನ್‍ಯುಎಸ್‍ಸಿ ಮತ್ತು ತಮಿಳುನಾಡಿನ ದೊರೈಸಿಗಂ ತಂಡಗಳ ನಡುವೆ ಕ್ಯಾಟರ್ ಫೈನಲ್ ನಡೆಯಲಿದೆ. 4ನೇ ವರ್ಷದ ಪಂದ್ಯಾವಳಿ ಸಾವಿರಾರು ಕಬಡ್ಡಿ ಪ್ರೇಮಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಗ್ರಾಮೀಣ ಭಾಗದಿಂದ ಮಹಿಳೆಯರಾದಿಯಾಗಿ ಸಾವಿರಾರು ಮಂದಿ ಗ್ಯಾಲರಿಯಲ್ಲಿ ಕುಳಿತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರ ಆಟವನ್ನು ಕಣ್ತುಂಬಿಕೊಂಡರು. ಪ್ರೊ ಕಬಡ್ಡಿಯ ಪ್ರತಿಭಾನ್ವಿತ ಆಟಗಾರರಾದ ಸಿದ್ದಾರ್ಥ್ ದೇಸಾಯಿ, ಪ್ರಶಾಂತ್ ರೈ, ಸುಖೇಶ್ ಹೆಗಡೆ, ಸಚಿನ್ ವಿಠಲ್,…

Read More

ನಾಪೋಕ್ಲು  ಮಾ.6 :  ನಾಪೋಕ್ಲು ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹೊದವಾಡ ಓಯಸಿಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ 19ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಗಣ್ಯರು ಚಾಲನೆ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ ಕಳೆದ 19ವರ್ಷದಿಂದ ಮುಸ್ಲಿಂ ಸಮುದಾಯದ ಜನಾಂಗವನ್ನು ಒಗ್ಗೂಡಿಸಲು ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರೋದು ಶ್ಲಾಘನೀಯ ಎಂದರು. ಕ್ರೀಡಾಕೂಟವನ್ನು ಆಯೋಜಿಸುವುದು ಮುಖ್ಯವಲ್ಲ ಆದರೆ ಅದನ್ನು ಕೊನೆಯವರೆಗೆ ಶಿಸ್ತಿನಿಂದ ಮುನ್ನಡೆಸುವುದು ಬಹಳ ಮುಖ್ಯ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರೀಡಾಕೂಟ ಮುನ್ನಡೆಯಲಿ ಎಂದು ಶುಭಹಾರೈಸಿದರು. ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ  ಶಿವಣ್ಣ ಮಾತನಾಡಿ, ಕ್ರೀಡೆ ಎಂಬುದು ಮನುಷ್ಯ ಜೀವನದ ಒಂದು ಭಾಗ. ಕ್ರೀಡೆಯಿಂದ ಮನುಷ್ಯ ಸದೃಢರಾಗಬಹುದು, ಕ್ರೀಡೆಯಲ್ಲಿ ಯಾವುದೇ ಧರ್ಮವನ್ನು ಕಾಣಲು ಸಾಧ್ಯವಿಲ್ಲ, ಕ್ರೀಡೆಯಲ್ಲಿ ಸೋತಾಗ ಕುಗ್ಗುವ ಮತ್ತು ಗೆದ್ದಾಗ ಹಿಗ್ಗುವ ಮನೋಭಾವನೆಯನ್ನು ಇಟ್ಟುಕೊಳ್ಳದೆ ಸೋಲೇ ಗೆಲುವಿನ ಮೆಟ್ಟಿಲು ಎಂಬ…

Read More

ಮಡಿಕೇರಿ ಮಾ.6 :  ಮೇಕೇರಿಯ ಸ್ವಾಗತ ಯುವಕ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶ್ರೀ ಗೌರಿಶಂಕರ ದೇವಾಲಯದ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿ  ಮುಂದಿನ ವರ್ಷಕ್ಕೆ ಕನಿಷ್ಠ 6 ಕಾರ್ಯಕ್ರಮಗಳನ್ನು ಯೋಜನಾಬದ್ಧವಾಗಿ ನಡೆಸಲು  ತೀರ್ಮಾನಿಸಿತು. ನೂತನ ಅಧ್ಯಕ್ಷರಾಗಿ ಟಿ.ಎನ್. ಉಮೇಶ್ ,ಉಪಾಧ್ಯಕ್ಷರಾಗಿ ದೀಪಕ್ ಸಿಂಗ್ , ಕಾರ್ಯದರ್ಶಿಯಾಗಿ ಪವನ್ ಕುಮಾರ್ , ಸಹ ಕಾರ್ಯದರ್ಶಿಯಾಗಿ ಕೆ.ಎಸ್.ರಾಜೇಶ್ , ಖಜಾಂಚಿಯಾಗಿ ಭವನ್ ಕುಮಾರ್ , ಸಹ ಖಜಾಂಚಿಯಾಗಿ ಅರ್ಪಿತ್  ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷರಾದ ವಿಜು ಹರೀಶ್ ಹಾಗೂ ನಿಕಟಪೂರ್ವ ಖಜಾಂಚಿ ಬಿ.ಎಸ್.ಅಶೋಕ್ ಸೇರಿದಂತೆ ಹಾಜರಿದ್ದ ಯುವಕ ಸಂಘದ ಸರ್ವ ಸದಸ್ಯರುಗಳು ನೂತನ ಪದಾಧಿಕಾರಿಗಳಿಗೆ  ಶುಭ ಹಾರೈಸಿದರು. ಅಲ್ಲದೆ ರಕ್ತದಾನ ಶಿಬಿರ ನಡೆಸಲು ಸಹಕರಿಸಿದ ಸರ್ವರ ಕೊಡುಗೆಯನ್ನು ಸಭೆಯಲ್ಲಿ ಸ್ಮರಿಸಲಾಯಿತು. 

Read More

ಮಡಿಕೇರಿ ಮಾ.4 : ಕೊಡಗು ಜಿಲ್ಲೆಯಲ್ಲಿ ಸಾವಿರಾರು ವರ್ಷಗಳಿಂದ ನಮ್ಮ ಹಿರಿಯರು ಭಾಷಾ ಸಾಮರಸ್ಯ ಕಾಪಾಡಿಕೊಂಡು ಬಂದಿದ್ದಾರೆ, ಅದನ್ನು ಉಳಿಸಿಕೊಂಡು ಹೋಗಬೇಕು. ಕನ್ನಡ ಭಾಷೆಯನ್ನು ಪ್ರೀತಿಸಬೇಕು, ಗೌರವಿಸಬೇಕು ಜೊತೆಗೆ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ. ಗೋಣಿಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ 16 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಡಾ.ಐ.ಮಾ.ಮುತ್ತಣ್ಣ ವೇದಿಕೆಯಲ್ಲಿ ಮಾತನಾಡಿದ ಅವರು ಕೊಡಗಿನ ವಿಶಿಷ್ಟ ಸಂಸ್ಕೃತಿ ಎಲ್ಲೆಡೆ ಪಸರಿಸಲಿ ಎಂದರು. ಕೊಡಗಿನ ಗೌರಮ್ಮ, ಪಂಜೆ ಮಂಗೇಶರಾಯರು ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಇಂಥಹ ಹಿರಿಯ ಚೇತನಗಳನ್ನು ನೆನಪಿಸಿಕೊಳ್ಳುವ ಮೂಲಕ ಜಿಲ್ಲೆಯ ಸಾಹಿತ್ಯ ಸಂಸ್ಕೃತಿ ಬೆಳವಣಿಗೆಗೆ ಮುಂದಾಗಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಈಚಿಗೆ ಮುಗಿದ ವಿಧಾನಸಭಾ ಅಧಿವೇಷನದಲ್ಲಿ ಸರ್ಕಾರದ ಸುತ್ತೋಲೆಗಳು ಕನ್ನಡದಲ್ಲೆ ಇರಬೇಕು ಎಂಬ ಮಸೂದೆ ಹೊರಡಿಸಲಾಗಿದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸುವ ಕೆಲಸ ಆಗಬೇಕು ಎಂದು ಹೇಳಿದರು.…

Read More

ಮಡಿಕೇರಿ ಮಾ.4 : ಸರ್ವೋಚ್ಛ ನಾಯಾಲಯದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅವರು ಕುಶಾಲನಗರ ಮತ್ತು ವಿರಾಜಪೇಟೆಯಲ್ಲಿ ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಸೋಮವಾರಪೇಟೆಯಲ್ಲಿ ವಕೀಲರ ಭವನ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಶನಿವಾರ ನೆರವೇರಿಸಿದರು. ಕುಶಾಲನಗರದಲ್ಲಿ ಮಾತನಾಡಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರು ಪ್ರತಿಯೊಬ್ಬರಿಗೂ ನ್ಯಾಯ ನಿಲುಕುವಂತಿರಬೇಕು. ಆ ನಿಟ್ಟಿನಲ್ಲಿ ಕುಶಾಲನಗರದ ಮುಖ್ಯ ಕೇಂದ್ರದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡುತ್ತಿರುವುದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು. ಪ್ರಜಾಪ್ರಭುತ್ವದಲ್ಲಿ ನ್ಯಾಯವು ಎಲ್ಲರಿಗೂ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಉತ್ತಮ ಕಟ್ಟಡ ನಿರ್ಮಾಣವಾಗಲಿ ಎಂದು ಅವರು ಆಶಿಸಿದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅವರು ಮಾತನಾಡಿ ತಾಲ್ಲೂಕು ಕೇಂದ್ರಗಳಲ್ಲಿ ನ್ಯಾಯಾಲಯ ಕಟ್ಟಡಗಳು ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ಅನುಕೂಲ ಆಗಲಿದೆ ಎಂದರು. ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಎಂ.ಭೃoಗೇಶ್ ಅವರು ಮಾತನಾಡಿ ಸ್ವಂತ ಕಟ್ಟಡ ನಿರ್ಮಾಣ ಆಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕುಶಾಲನಗರದ ವಕೀಲರ ಸಂಘದ ಅಧ್ಯಕ್ಷರಾದ…

Read More