ಮಡಿಕೇರಿ ಮಾ.31 : ಮಡಿಕೇರಿ ಕೊಡವ ಸಮಾಜದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವೀರಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರ 117ನೇ ಜನ್ಮದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಏರ್‌ಮಾರ್ಷಲ್ ನಂದಾ ಕಾರ್ಯಪ್ಪ ಅವರು ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪುತ್ಥಳಿ ಅನಾವರಣಗೊಳಿಸಿದರು. ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಪದ್ಮಶ್ರೀ ಪ್ರಶಸ್ತಿ ವಿಜೇತೆ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಮುಖರಾದ ಕನ್ನಂಡ ಕವಿತಾ ಬೊಳ್ಳಪ್ಪ, ಪ್ರಾಂಶುಪಾಲರಾದ ಬಿ.ಎಂ.ಸರಸ್ವತಿ, ಆಡಳಿತ ಮಂಡಳಿ ಸದಸ್ಯರು, ಕೊಡವ ಸಮಾಜದ ನಿರ್ದೇಶಕರು, ಶಿಕ್ಷಕವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.
ಲೇಖಕ: admin
ಮಡಿಕೇರಿ ಮಾ.31 : ಮಡಿಕೇರಿಯ ಅಶ್ವಿನಿ ಆಸ್ಪತ್ರೆಯ ಸ್ಥಾಪಕ ಸದಸ್ಯ ಹಾಗೂ ಅಶ್ವಿನಿ ಆಸ್ಪತ್ರೆಯ ನಿರ್ಮಾಣಕ್ಕೆ ಪ್ರಮುಖ ರೂವಾರಿಯಾಗಿದ್ದ ದಿ.ಬೇ.ಸು. ಶೇಷಾದ್ರಿಯವರು ಇತ್ತೀಚೆಗೆ ದೈವಾಧೀನಾರಾದ್ದರು. ಅವರ ಒಡನಾಡಿಗಳು, ಸಹಕಾರಿಗಳು ಮತ್ತು ಅಶ್ವಿನಿ ಆಸ್ಪತ್ರೆಯ ಶ್ರೇಯೋಭಿವೃದ್ಧಿಗೆ ಕೈ ಜೋಡಿಸಿದ ಮಿತ್ರರೆಲ್ಲರೂ ಸೇರಿ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಇಂದು ಶಾಂತಿ ಪೂಜೆ ನಡೆಸಿದರು. ನಂತರ ನಡೆದ ಸಂತಾಪ ಸೂಚಕ ಸಭೆಯಲ್ಲಿ ನೆಲ್ಲಮಕ್ಕಡ ಶಂಭು, ಮಚ್ಚಾರಂಡ ಮಣಿ ಕಾರ್ಯಪ್ಪ, ಮಂಡೀರ ದೇವಿ ಪೂಣಚ್ಚ, ಡಿ.ಹೆಚ್. ತಮ್ಮಪ್ಪ, ಡಿ. ನರಸಿಂಹ, ಟಿ.ಕೆ. ತಿಮ್ಮಪ್ಪ ಮಾತನಾಡಿ ದಿ. ಶೇಷಾದ್ರಿಯವರೊಂದಿಗಿನ ಒಡನಾಟ ಮತ್ತು ಅವರು ಅಶ್ವಿನಿ ಆಸ್ಪತ್ರೆಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ನಂತರ ಶಾಂತಿ ಮಂತ್ರ ಪಠಣದೊಂದಿಗೆ ಸಂತಾಪ ಸೂಚಕ ಸಭೆ ಮುಕ್ತಾಯವಾಯಿತು.
ಹಿಂದೂ ಸಂಸ್ಕೃತಿಯಲ್ಲಿ ಕರ್ಪೂರಕ್ಕೆ ಎಲ್ಲಿಲ್ಲದ ಸ್ಥಾನಮಾನವಿದೆ. ಯಾವುದೇ ಶುಭಕಾರ್ಯವಿರಲಿ ಅಥವಾ ಪೂಜೆಗಳಿರಲಿ ಕರ್ಪೂರ ಇರಲೇಬೇಕು. ಆದರೆ ಇಷ್ಟಕ್ಕೆ ಕರ್ಪೂರದ ಬಳಕೆ ಮುಗಿಯುವುದಿಲ್ಲ. ಏಕೆಂದರೆ ಆರೋಗ್ಯದ ದೃಷ್ಟಿಯಿಂದಲೂ ಕರ್ಪೂರ ಬಲು ಉಪಕಾರಿ. ಕರ್ಪೂರದಲ್ಲಿ ಎರಡು ವಿಧ. ಒಂದು ಸೇವನೆಗೆ ಯೋಗ್ಯವಾದ ಕರ್ಪೂರ ಇನ್ನೊಂದು ತಯಾರು ಮಾಡಲ್ಪಟ್ಟ ಕರ್ಪೂರ. ಕರ್ಪೂರದ ಮರದ ಕಾಂಡದಿಂದ ತಯಾರಿಸ್ಪಡುವುದು ಒಂದು ರೀತಿಯ ಕರ್ಪೂರವಾದರೆ ಇನ್ನೊಂದನ್ನು ಟರ್ಪೆಂಟೈನ್ ತೈಲದಿಂದ ತಯಾರಿಸಲಾಗುತ್ತದೆ. ಕರ್ಪೂರದಲ್ಲಿ ಪ್ರತಿಜೀವಕ ಮತ್ತು ಆಂಟಿಫಂಗಲ್ ಗುಣಗಳಿವೆ. ಈ ಕಾರಣಕ್ಕಾಗಿ, ಇದು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಕರ್ಪೂರ ಮತ್ತು ಕರ್ಪೂರ ಎಣ್ಣೆ ಎರಡೂ ಬಹಳ ಉಪಯುಕ್ತ ವಸ್ತುಗಳು. ಸಾಮಾನ್ಯವಾಗಿ ನರಗಳ ಉಳುಕುವಿಕೆ. ಉರಿ ಬಾವು ಮತ್ತು ವಾತಗ್ರಸ್ತ ನೋವುಗಳಿಗೆ ಲೇಪಿ ಸಲು ಇದನ್ನು ಉಪಯೋಗಿಸುತ್ತಾರೆ. ಅತಿಸಾರದಂಥ ರೋಗ ಗಳಲ್ಲಿ ಶಮನಕಾರಿ ಯಾಗಿ ಹೃದಯವನ್ನು ಉತ್ತೇಜನಗೊಳಿಸುವಲ್ಲಿ ಉತ್ತೇಜನಕಾರಿ ಯಾಗಿ ಇದರ ಉಪಯೋಗವಿದೆ. ಸೌಮ್ಯ ನಂಜುನಿರೋಧಕ ಹಾಗೂ ಸುಗಂಧಗುಣಯುಕ್ತವಾದ್ದರಿಂದ ಇದನ್ನು ಸೌಂದರ್ಯವರ್ಧಕ ವನ್ನಾಗಿಯೂ ಬಳಸುತ್ತಾರೆ. ಪೂಜಾಸಮಾರಂಭದಲ್ಲಿ ದೇವರ ಮುಂದೆ…
ಮಡಿಕೇರಿ ಮಾ.31 : ಭವಿಷ್ಯದಲ್ಲಿ ಕೊಡಗು ಜಿಲ್ಲೆಯ ಫುಟ್ಬಾಲ್ ಆಟಗಾರರು ಕರ್ನಾಟಕ ಹಾಗೂ ಭಾರತ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಕಿಕ್ಕ್ ಸ್ಟಾರ್ಟ್ ಫುಟ್ಬಾಲ್ ಕ್ಲಬ್ ಸಂಸ್ಥಾಪಕ ಹಾಗೂ ಸಿ.ಇ.ಓ ಲಕ್ಷ್ಮಣ್ ಭಟ್ರೈ ಅಭಿಪ್ರಾಯಪಟ್ಟರು. ಅಮ್ಮತ್ತಿಯ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಫುಟ್ಬಾಲ್ ವೇಗವಾಗಿ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಜಿಲ್ಲೆಯ ಯುವ ಫುಟ್ಬಾಲ್ ಆಟಗಾರರಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡುವ ಅವಶ್ಯಕತೆ ಇದ್ದು, ಆ ನಿಟ್ಟಿನಲ್ಲಿ ಕಿಕ್ಕ್ ಸ್ಟಾರ್ಟ್ ಫುಟ್ಬಾಲ್ ಕ್ಲಬ್ ಇದೇ ಮೊದಲ ಬಾರಿಗೆ ಆಯ್ಕೆ ಶಿಬಿರ ನಡೆಸಿದ್ದು, ನಿರೀಕ್ಷೆಗೂ ಮೀರಿ ಯುವ ಆಟಗಾರರು ಭಾಗವಹಿಸಿದ್ದಾರೆ ಎಂದರು. ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಜಿಲ್ಲೆಯ ಫುಟ್ಬಾಲ್ ಬೆಳವಣಿಗೆಗೆ ಸತತವಾದ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಲಕ್ಷ್ಮಣ್ ಭಟ್ರೈ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮಹಾಪೋಷಕ ಮೋಹನ್ ಅಯ್ಯಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಫುಟ್ಬಾಲ್ ಬೆಳವಣಿಗೆಗೆ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವಿಶೇಷ…
ನಾಪೋಕ್ಲು ಮಾ.31 : ರಾಮನವಮಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀ ರಾಮ ಬಳಗದ ವತಿಯಿಂದ ನಾಪೋಕ್ಲುವಿನ ರಾಮಮಂದಿರದಲ್ಲಿ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಸುಳ್ಯದ ಭಜನಾ ತಂಡದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಕಳೆದ 45 ವರ್ಷಗಳಿಂದ ರಾಮ ಬಳಗದ ಸದಸ್ಯರು, ಸ್ಥಳೀಯರು ಸೇರಿ ರಾಮನವಮಿಯನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಗಣಪತಿ ಆರಾಧನೆಯ ಬಳಿಕ ಮಧ್ಯಾಹ್ನ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಅರ್ಚಕ ರವಿ ಉಡುಪ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಅಧಿಕ ಸಂಖ್ಯೆಯ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೂರ್ನಾಡು ವಿವೇಕ ಜಾಗೃತ ಬಳಗದಿಂದ ಪುಸ್ತಕ ಮಾರಾಟ ವ್ಯವಸ್ಥೆ ಮಾಡಲಾಗಿತ್ತು. ವರದಿ : ದುಗ್ಗಳ ಸದಾನಂದ
ನಾಪೋಕ್ಲು ಮಾ.31 : ಬಲ್ಲಮಾವಟಿ ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಅಂದಿಬೆಳಕು, ಪಟ್ಟಣಿ, ದೇವಿಜಳಕ ನಾಗಪೂಜೆ, ಶುದ್ದಕಲಶ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ಜರುಗಿತು. ಉತ್ಸವದ ಅಂಗವಾಗಿ ಗ್ರಾಮದ ಮಾದೇಯಂಡ ಚೋಂದಕ್ಕಿ ಭೀಮಯ್ಯ ಮತ್ತು ಮಕ್ಕಳಿಂದ ಅನ್ನಸಂತರ್ಪಣೆ ನೆರವೇರಿತು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ನೆರವಂಡ ಸಿ.ಭೀಮಯ್ಯ, ತಕ್ಕಮುಖ್ಯಸ್ಥರು ಹಾಗೂ ಆಡಳಿತಮಂಡಳಿ ಸದಸ್ಯರು ಪಾಲ್ಗೊಂಡಿದ್ದ. ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ
ಮಡಿಕೇರಿ ಮಾ.31 : ಹಾಲೇರಿ ನಾಡಿನ ಕಡಂದಾಳು, ಕಾಂಡನಕೊಲ್ಲಿ, ಕೊಪ್ಪತ್ತೂರು, ಹಾಲೇರಿ ಹಾಗೂ ಹೆಮ್ಮತ್ತಾಳು ಗ್ರಾಮಸ್ಥರು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಹಾಲೇರಿ ಶ್ರೀ ಭದ್ರಕಾಳೇಶ್ವರಿ ದೇವಿಯ ಉತ್ಸವು ಅಂಗವಾಗಿ ಏ.1 ರಿಂದ ಇರ್‌ಬೊಳಕ್ ಕೊಂಬಾಟ್ ನಡೆಯಲಿದೆ. ಏ.1 ರಂದು ಮಧ್ಯಾಹ್ನ 2.30 ಗಂಟೆಗೆ ಕಾಳೆ ಓಡಿಸುವುದು, ಏ.2 ರಂದು ಹಾಲೇರಿ ಶ್ರೀ ಭದ್ರಕಾಳೇಶ್ವರಿ ದೇವಿಯ ದೊಡ್ಡ ಹಬ್ಬ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಆಂಗೋಲದೊಂದಿಗೆ ನಾಡುಹತ್ತುವುದರಿಂದ ಪ್ರಾರಂಭಗೊಂಡು ಬೆಳಿಗ್ಗೆ 11.30ಕ್ಕೆ ಕೊಂಬಾಟ್, ಎತ್ತಾಟ್, ಬಿಲ್ಲಾಟ್ ಕುಣಿತಗಳು ಜರುಗಲಿದೆ. ನಂತರ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1.30 ಗಂಟೆಗೆ ಭಂಡಾರ ಹಾಕುವುದು, ನಂತರ ಬೊಳಕಾಟ್ ದೇವರು ಹೊರಗೆ ಬರುವುದು, ಬಾಳೆಸೊರೆ ಎಸೆಯುವುದು, ಕಾಯಿಗೆ ಗುಂಡು ಹೊಡೆಯುವುದು, ಕಾಳೆ ಸುತ್ತು ಬರಲಿದೆ. ಏ.3 ರಂದು ಮಧ್ಯಾಹ್ನ 2 ಗಂಟೆಗೆ ಪ್ರಾರಂಭಗೊಂಡು ಮೂರು ತರಹದ ಕುಣಿತ ನೆರವೇರಲಿದೆ. ನಂತರ ಭಂಡಾರ ಹಾಕುವುದು, ಬಾಳೆಸೂರೆ, ಕೊಂಬು ಒಪ್ಪಿಸುವುದು ಇತ್ಯಾದಿ ಕಾರ್ಯಕ್ರಮಗಳು ಜರುಗಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ…
ಮಡಿಕೇರಿ ಮಾ.31 : ಕೊಡಗಿನ ಪುರಾತನ ದೇವಾಲಯಗಳಲ್ಲೊಂದಾದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ 14 ದೇವಾನು ದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರೆಯು ಏ.5 ರಿಂದ ಏ.8ರ ವರೆಗೆ ನಡೆಯಲಿದೆ. ದೇವಾಲಯದ ತಂತ್ರಿಗಳಾದ ಕೇರಳದ ಪಯ್ಯನ್ನೂರಿನ ಬ್ರಹ್ಮಶ್ರೀ ಕುನ್ನತ್ತಿಲ್ಲತ್ತ್ ಮುರಳಿಕೃಷ್ಣನ್ ನಂಬೂದರಿ ಹಾಗೂ ಪರಿಶಿನಿಕಡವು ಶ್ರೀ ಮುತ್ತಪ್ಪ ಕ್ಷೇತ್ರದ ಆಚಾರಪಟ್ಟ ಮಡೆಯಚ್ಚನ್ ಬ್ಲಾತೂರ್ ಚಂದ್ರನ್ ಮಡೆಯಚ್ಚನ್ ನಾಲ್ಕುದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳು ಜರುಗಲಿದೆ. ಏ.5 ರಂದು ಸಂಜೆ 6.30 ರಿಂದ ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಪೂಜೆ, ವಾಸ್ತು ಕಲಶಾಭಿಷೇಕ, ವಾಸ್ತು ಬಲಿ, ವಾಸ್ತು ಪುಣ್ಯಾಹ, ಮಹಾ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಏ.6 ರಂದು ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಹೋಮ, 9 ಗಂಟೆಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಅಷ್ಟಾಭಿಷೇಕ, 10 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, 11…
ಮಡಿಕೇರಿ ಮಾ.31 : ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ವತಿಯಿಂದ ರಾಮನವಮಿ ಪ್ರಯುಕ್ತ ಶ್ರೀ ರಾಮಚಂದ್ರ ವಿಜಯೋತ್ಸವ ರಥಯಾತ್ರೆ ಶ್ರದ್ಧಾಭಕ್ತಿಯಿಂದ ನಡೆಯಿತು. ಉತ್ಸವ ಮೂರ್ತಿಗಳನ್ನು ಭವ್ಯ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ರಥಯಾತ್ರೆ ಆರಂಭವಾಯಿತು. ಸಂಕೀರ್ತನೆಯೊಂದಿಗೆ ರಾಮಕೃಷ್ಣನನ್ನು ಜಪಿಸುತ್ತಾ ಭಕ್ತರು ರಥವನ್ನು ಎಳೆದರು. ಇಸ್ಕಾನ್ ಮಂದಿರದ ಬಳಿಯಿಂದ ಆರಂಭವಾದ ರಥಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ದಾರಿಯುದ್ದಕ್ಕೂ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ರಥಯಾತ್ರೆಯ ನಂತರ ನಗರದ ಗಾಂಧಿ ಮೈದಾನದಲ್ಲಿ ರಾತ್ರಿ ಶ್ರೀ ರಾಮಚಂದ್ರ ಕಥೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸುಂಟಿಕೊಪ್ಪ, ಮಾ.30: ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಕೋದಂಡ ರಾಮ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ರಾಮನವಮಿಯನ್ನು ಆಚರಿಸಲಾಯಿತು. ಕೊದಂಡ ರಾಮ ಮಂದಿರದಲ್ಲಿ ಬೆಳಿಗ್ಗೆ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ಸ್ವಾಮಿಗೆ ಬೆಳ್ಳಿಯ ಕವಚವನ್ನು ಅಳವಡಿಸಿ ವಿವಿಧ ರೀತಿಯ ಹೂವುಗಳಿಂದ ಅಲಂಕರಿಸಿ ಪೂಜಾ ಕೈಂಕಾರ್ಯವನ್ನು ದೇವಾಲಯದ ಮುಖ್ಯ ಅರ್ಚಕ ದರ್ಶನ್ ಭಾರಿತ್ತಾಯ ಅವರ ನೇತೃತ್ವದಲ್ಲಿ ನೆರವೇರಿಸಿದರು. ನಂತರ ರಾಮನಿಗೆ ಪಂಚಾಮೃತ ಅಭಿಷೇಕ, ರಾಮತಾರಕ ಹೋಮ ನಡೆದು ಮದ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಿಸಲಾಯಿತು. ನಂತರ ನೆರೆದಿದ್ದ ಭಕ್ತರಿಗೆ ಪಾನಕ, ಕೋಸಂಬರಿ, ಪಾಯಸ ವಿತರಿಸಲಾಯಿತು. ದಿನದ ಪೂಜಾ ವಿಧಿ ವಿಧಾನಗಳನ್ನು ಅರ್ಚಕರುಗಳಾದ ಹರಿಪ್ರಸಾದ್ ಕೆದ್ಲಾಯ, ಗಣೇಶ್ ಉಪಾಧ್ಯಯ, ಮಂಜುನಾಥ್ ಭಟ್, ಮನೋಜ್ ಭಟ್, ನಿಖಿಲ್ ಭಟ್ ನೆರವೇರಿಸಿದರು. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಮೇಶ್ ಪಿಳ್ಳೆ, ಉಪಾಧ್ಯಕ್ಷ ಈಶ್ವರ, ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಘ್ನೇಶ್, ಪ್ರಧಾನ ಕಾರ್ಯದರ್ಶಿ ವಾಸುದೇವ್, ಗೌರಿ ಗಣೇಶೋತ್ಸವ ಸಮಿತಿ ನಿಕಟ ಪೂರ್ವ…






