ಸೋಮವಾರಪೇಟೆ ಮಾ.30 : ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮದ್ಯವ್ಯಸನಿ ಪುಂಡರ ಹಾವಳಿ ಮಿತಿಮೀರಿದ್ದು, ಪೊಲೀಸರು ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜೂನಿಯರ್ ಕಾಲೇಜು ಆವರಣದಲ್ಲಿ ಸಿಂಥೆಟಿಕ್ ಟರ್ಫ್ ಮೈದಾನ, ಪ್ರಾಥಮಿಕ ಶಾಲಾ ಮೈದಾನ, ವಿಶಾಲವಾದ ಕಾಲೇಜು ಇದೆ. ರಾತ್ರಿಯಾಗುತ್ತಿದ್ದಂತೆ ಈ ಪ್ರದೇಶ ಪುಂಡರ ಗಾಂಜಾ ಮತ್ತು ಮದ್ಯ ವ್ಯಸನದÀ ಆವಾಸ ಸ್ಥಾನವಾಗುತ್ತಿದೆ, ಯಾವುದಕ್ಕೂ ಭದ್ರತೆ ಇಲ್ಲದಾಗಿದೆ. ಜೂನಿಯರ್ ಕಾಲೇಜು ಸುತ್ತಮುತ್ತ ಗಾಂಜಾ ವ್ಯಸನಿಗಳ ಹಾವಳಿ ಜಾಸ್ತಿಯಾಗಿದೆ. ಮುಗ್ಧ ಯುವಕರು ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಕೂಡಲೇ ಪೊಲೀಸರು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಈ ಹಿಂದೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಆಗ್ರಹಿಸಿದ್ದರು. ಆ ವ್ಯಾಪ್ತಿಯ ವಾರ್ಡ್ ಸದಸ್ಯೆ ಶೀಲಾ ಡಿಸೋಜ ಅವರು ಕೂಡ, ಗಾಂಜಾ ಮಾರಾಟದ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದರು. ಪ್ರಾರಂಭದಲ್ಲಿ ಪೊಲೀಸರ ರೌಂಡ್ಸ್ ಇರುತ್ತಿತ್ತು. ಈಗ ಪುಂಡರು ರಾತ್ರಿ ಕಾಲೇಜು ಆವರಣದಲ್ಲೇ ಮದ್ಯ ಸೇವನೆ ಮಾಡಿ, ಬಾಟಲ್‌ಗಳನ್ನು ಅಲ್ಲಿಯೇ ಎಸೆದು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆೆ.…
ಲೇಖಕ: admin
ಮಡಿಕೇರಿ ಮಾ.30 : ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದ ಮೂವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ. ಕುಶಾಲನಗರ ನಿವಾಸಿ ಅಕ್ಟರ್.ಹೆಚ್ (29) ಕೇರಳ ಮೂಲದವರಾದ ಮಹಮ್ಮದ್ ರಾಫಿ (28) ಹಾಗೂ ರಿಷಿಕುಮಾರ್.ಟಿ.ಕೆ (34) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿಯಿಂದ 13 ಗ್ರಾಂ ಗಾಂಜಾ ಹಾಗೂ 41 ಗ್ರಾಂ MDMA ನಿಷೇಧಿತ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಿಗೆ ಸೇತುವೆ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ತನಿಖಾ ತಂಡ ದಾಳಿ ನಡೆಸಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್.ಕೆ.ಎಸ್, ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಗಂಗಾಧರಪ್ಪ.ಆರ್.ವಿ, ಕುಶಾಲನಗರ ವೃತ್ತದ ಸಿಪಿಐ ಮಹೇಶ್.ಬಿ.ಜಿ, ಪಿಎಸ್‌ಐ ಪುನೀತ್.ಡಿ.ಎಸ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ದಿನೇಶ್ ಕುಮಾರ್.ಎಂ, ಹಾಗೂ ಸಿಬ್ಬಂದಿಗಳ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಪೊಲೀಸ್ ಅಧಿಕಾರಿ ಹಾಗೂ…
ಮಡಿಕೇರಿ ಮಾ.30 : ವಿಧಾನಸಭಾ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಜಿಲ್ಲೆಯಲ್ಲಿನ ಹೋಂ ಸ್ಟೇ, ರೆಸಾರ್ಟ್‍ಗಳಲ್ಲಿ ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲಿಸುವ ನಿಟ್ಟಿನಲ್ಲಿ ಅನುಸರಿಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು ಎಂದರು. ಮತದಾನದ 48 ಗಂಟೆ ಮುಂಚಿತವಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅವರು ಹಲವು ಸಲಹೆ ನೀಡಿದರು. ನಿಶ್ಚಿತಾರ್ಥ, ಮದುವೆ, ನಾಮಕರಣ ಮತ್ತಿತರ ಖಾಸಗಿ ಸಮಾರಂಭಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ರಾಜಕೀಯ ಪ್ರೇರಿತವಾಗಿರಬಾರದು. ಯಾವುದೇ ಪಕ್ಷದ ಪ್ರಚಾರಕ್ಕೆ ವೇದಿಕೆಯಾಗಬಾರದು ಎಂದರು. ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷರಾದ ಬಿ.ಆರ್.ನಾಗೇಂದ್ರ ಪ್ರಸಾದ್ ಅವರು ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲಿಸಲಾಗುವುದು ಎಂದು ತಿಳಿಸಿದರು. ಉಪಾಧ್ಯಕ್ಷರಾದ ಜಾಹೀರ್ ಅಹಮ್ಮದ್, ಕಾರ್ಯದರ್ಶಿ ನಾಜೀರ್ ಅಹಮ್ಮದ್, ಖಜಾಂಜಿ ಕೆ.ಕೆ.ಭಾಸ್ಕರ್, ಹೋಂ ಸ್ಟೇ ಅಸೋಷಿಯೇಷನ್ ಕಾರ್ಯದರ್ಶಿ…
ಮಡಿಕೇರಿ ಮಾ.30 : ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಮಾರ್ಚ್ 31 ರಿಂದ ಆರಂಭವಾಗಲಿದ್ದು, ಜಿಲ್ಲೆಯಲ್ಲಿ 170 ಶಾಲೆಗಳ 6,587 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಸಿ.ರಂಗಧಾಮಯ್ಯ ಅವರು ತಿಳಿಸಿದ್ದಾರೆ. ಮಡಿಕೇರಿ ತಾಲ್ಲೂಕಿನ 43 ಶಾಲೆಗಳ 1,886, ಸೋಮವಾರಪೇಟೆ ತಾಲ್ಲೂಕಿನ 70 ಶಾಲೆಗಳ 2,611 ವಿದ್ಯಾರ್ಥಿಗಳು, ವಿರಾಜಪೇಟೆ ತಾಲ್ಲೂಕಿನ 57 ಶಾಲೆಯ 2,090 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 2022-23 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 10 ನೇ ತರಗತಿ ಪರೀಕ್ಷೆಗೆ ತಾಲ್ಲೂಕುವಾರು ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ವಿವರ ಇಂತಿದೆ. ಮಡಿಕೇರಿ ತಾಲ್ಲೂಕಿನ 43 ಶಾಲೆಗಳ 1886 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 922 ಹುಡುಗಿಯರು, 897 ಹುಡುಗರು, ಖಾಸಗಿಯಾಗಿ ಒಟ್ಟು 67 ವಿದ್ಯಾರ್ಥಿಗಳು, ಅದರಲ್ಲಿ 46 ಹುಡುಗಿಯರು, 21 ಹುಡುಗರು ಪರೀಕ್ಷೆ ಬರೆಯಲಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ 70 ಶಾಲೆಗಳ 2611 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 1311 ಹುಡುಗಿಯರು, 1157 ಹುಡುಗರು, ಖಾಸಗಿಯಾಗಿ ಒಟ್ಟು 143…
ಮಡಿಕೇರಿ ಮಾ.30: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಯಾವುದೇ ಚುನಾವಣಾ ಸಂಬಂಧಿತ ಪ್ರಕ್ರಿಯೆ ಮತ್ತು ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.
ಮಡಿಕೇರಿ ಮಾ.30 : ಕೊಡಗು ಜಿಲ್ಲೆಯಲ್ಲಿ ಮಾರ್ಚ್, 31 ರಿಂದ ಏಪ್ರಿಲ್, 15 ರವರೆಗೆ ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಯಾವುದೇ ಅವ್ಯವಹಾರಗಳಿಲ್ಲದಂತೆ ಸುಗಮವಾಗಿ ನಡೆಸುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ಪರೀಕ್ಷಾ ಕೇಂದ್ರ ಸೇರಿದಂತೆ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಆದೇಶ ಹೊರಡಿಸಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳ ವಿವರ:- ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತ ಮೈಕಲ್ಲರ ಪ್ರೌಢ ಶಾಲೆ, ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆ, ಚೇರಂಬಾಣೆ ಅರುಣಾ ಪದವಿ ಪೂರ್ವ ಕಾಲೇಜು, ಮೂರ್ನಾಡು, ಸಿದ್ದಾಪುರ, ಸಂಪಾಜೆ ಪ್ರೌಢಶಾಲೆ, ಸಂತ ಜೋಸೆಫರ ಪ್ರೌಢ ಶಾಲೆ, ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಓ.ಎಲ್.ವಿ. ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕುಶಾಲನಗರ ಫಾತಿಮಾ ಕಾನ್ವೆಂಟ್ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು, ಶನಿವಾರಸಂತೆ ಪದವಿ ಪೂರ್ವ…
ಬೆಂಗಳೂರು: ಉದ್ಭವಃ ವತಿಯಿಂದ ಏಪ್ರಿಲ್ 9ರಂದು ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯ ವರೆಗೆ ಒಂದು ದಿನದ ಉದ್ಭವಃ ಉತ್ಸವ ಹಮ್ಮಿಕೊಳ್ಳಲಾಗಿದೆ. ಕೆಂಗೇರಿ ಸಮೀಪದ ರಾಮೋನಹಳ್ಳಿ ಮುದ್ದಯ್ಯನಪಾಳ್ಯದ ಉದ್ಭವಃ ಕ್ಯಾಂಪಸ್‍ನಲ್ಲಿ ಈ ಉತ್ಸವ ನಡೆಯಲಿದೆ. ಪೋಷಕರು, ಮಕ್ಕಳು ಮತ್ತು ಇಡೀ ಕುಟುಂಬಕ್ಕೆ ಹಳ್ಳಿಗಾಡಿನ ಹಳ್ಳಿ ಆಟಗಳು ಮತ್ತು ಸಾಂಪ್ರದಾಯಿಕ ಕಲಾ ಕೆಲಸದ ಅನುಭವಗಳ ಆಚರಣೆ ಉತ್ಸವದ ವಿಶೇಷತೆಯಾಗಿದೆ. ಉತ್ಸವವು ನಗರದ ಜೀವನದ ಜಂಜಾಟದಿಂದ ದೂರವಿರುವ ಮಕ್ಕಳ ಸಂವೇದನಾ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಸರಳ ಆಟಗಳ ಸಂತೋಷವನ್ನು ಮರಳಿ ತರುವ ಗುರಿಯನ್ನು ಹೊಂದಿದೆ. ಏಪ್ರಿಲ್ 2ರ ಮೊದಲು ನೋಂದಾಯಿಸಬೇಕು, ನಾಲ್ಕು ವರ್ಷಗಳಿಗಿಂತ ಕೆಳಗಿನ ಮಕ್ಕಳಿಗೆ ಉಚಿತ.. ವಿವರಗಳಿಗೆ: 7892557881 ಅಥವಾ 7892914963ಗೆ ಸಂಪರ್ಕಿಸಬಹುದು. ಎಲ್ಲ ವಯೋಮಾನದವರಿಗೆ ವಿಶಿಷ್ಟ ಕಾರ್ಯಕ್ರಮಗಳು ಇರುತ್ತವೆ. ನಿಸರ್ಗದ ಮಡಿಲಲ್ಲಿ ಮಕ್ಕಳಿಗೆ ಮೋಜಿನ ಆಟಗಳು ಇರುತ್ತವೆ. ಸಾಂಪ್ರದಾಯಿಕ ಆಟಗಳು, ಕೆಸರು ಗದ್ದೆ, ಗೋವುಗಳ ಜತೆ ಒಡನಾಟ, ಗೊಂಬೆಯಾಟ, ನೈಸರ್ಗಿಕ ಕೆರೆಯಲ್ಲಿ ಜಲಕ್ರೀಡೆಗಳು ಇರುತ್ತವೆ. ವಯಸ್ಕರಿಗೆ ಮಳಿಗೆಗಳು ಮತ್ತು ಕಾರ್ಯಾಗಾರಗಳಿದ್ದು, ಇದಕ್ಕೆ…
ಮಡಿಕೇರಿ ಮಾ.30 : ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಕೊಡಗು ಶಾಖೆ, ತಾಲ್ಲೂಕು ಒಕ್ಕಲಿಗರ ಸಂಘ ಸೋಮವಾರಪೇಟೆ, ನಗರ ಒಕ್ಕಲಿಗರ ಸಂಘ ಸೋಮವಾರಪೇಟೆ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ “ಅಂಧ ವಿಶೇಷಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ವಸತಿಯುತ ಶಿಬಿರ”ದ ಸಮಾರೋಪ ಸಮಾರಂಭ ನಡೆಯಿತು. ಸೋಮವಾರಪೇಟೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಕೆ.ಜಿ.ವಿಮಲ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಪ್ರತೀ ಕಾರ್ಯಕ್ರಮಗಳಿಗೂ ಭಾಗವಹಿಸಿದ್ದು, ಸಂಸ್ಥೆಯು ಕೊಡಗು ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇದೀಗ ಸೋಮವಾರಪೇಟೆಯಲ್ಲಿ ಅಂಧ ವಿಶೇಷಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ಶಿಬಿರ ವಿಶೇಷ ಚೇತನರಿಗೆ ಸಹಕಾರಿಯಾಗಲಿದೆ ಎಂದರು. ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಮೋಹನ್ ರಾಮ್ ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಸ್ಥೆಯ ವತಿಯಿಂದ ವಿಶೇಷಚೇತನರಿಗೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ಕೆಲಸವಾಗಿದ್ದು, ಇಂತಹ ಕೆಲಸಗಳಿಂದ ಅಂಧ ವಿಶೇಷಚೇತನರ ಬಾಳಿನಲ್ಲಿ ಬೆಳಕನ್ನು…
ಮಡಿಕೇರಿ ಮಾ.30 : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಾ ಕೋಶ , ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್.ಎಸ್.ಎಸ್ ಘಟಕದ ವತಿಯಿಂದ ಯುವಜನತೆಯಲ್ಲಿ ಹೆಚ್.ಐ.ವಿ. / ಏಡ್ಸ್ ಜಾಗೃತಿ ‘ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಆಪ್ತ ಸಮಾಲೋಚನಾ ಕೇಂದ್ರದ ಸಮಾಲೋಚಕ ಕೆ.ಟಿ.ಚಿಟ್ಟಿಯಪ್ಪ ಮಾತನಾಡಿ, ಇಂದಿನ ಯುವ ಜನತೆಯು ರಕ್ತದಾನದ ಮಹತ್ವವನ್ನು ಅರ್ಥೈಸಿಕೊಂಡು ಇದರ ಬಗೆಗಿನ ಅಪನಂಬಿಕೆಗಳನ್ನು ಬಿಟ್ಟು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದರು. ಯೌವನದ ಕ್ಷಣಿಕ ಸುಖಕ್ಕಾಗಿ ಹೆಚ್.ಐ.ವಿ. / ಏಡ್ಸ್ ನಂತಹ ಮಹಾಮಾರಿಯನ್ನು ಮೈಮೇಲೆ ಎಳೆದು ಕೊಳ್ಳದೇ , ಶಿಸ್ತು ಬದ್ಧತೆ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಸಿ.ದಯಾನಂದ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುಣ – ನಡತೆಗಳೊಂದಿಗೆ ರಕ್ತದಾನ, ಹೆಚ್.ಎ.ವಿ. /ಏಡ್ಸ್ ಸಾಂಕ್ರಾಮಿಕತೆಯ ವಿಚಾರಗಳನ್ನು ತಿಳಿದು ಸಮಾಜದಲ್ಲಿ ಅದರ ಬಗ್ಗೆ ಅರಿವು ಮೂಡಿಸಲು ಕರೆ…
ಕಣಿವೆ ಮಾ.30 : ಕಣಿವೆ ಗ್ರಾಮದ ಕಾವೇರಿ ನದಿ ದಂಡೆಯಲ್ಲಿನ ಶ್ರೀ ರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಕಣಿವೆ, ಹುಲುಸೆ ಹಾಗೂ ಹಕ್ಕೆ ಗ್ರಾಮಗಳ ಪ್ರತಿ ಮನೆಗಳ ಮುಂದೆ ಭಕ್ತ ಜನರು ತಳಿರು ತೋರಣಗಳನ್ನು ಕಟ್ಟಿದರೆ, ಹೊಸ ಉಡುಗೆ ತೊಟ್ಟ ಭಕ್ತ ಮಹಿಳೆಯರು ತಮ್ಮ ತಮ್ಮ ಮನೆ ಮುಂಬದಿ ರಂಗೋಲಿ ಹಚ್ಚಿ ಸಂಭ್ರಮಿಸಿದರು. ಮುಂಜಾನೆಯಿಂದಲೇ ದೇವಾಲಯದ ಗರ್ಭ ಗುಡಿಯಲ್ಲಿ ಪ್ರತಿಷ್ಠಾಪಿತ ಶಿವ ಲಿಂಗಕ್ಕೆ ವಿವಿಧ ಬಗೆಯ ಅಭಿಷೇಕಗಳನ್ನು ನೆರವೇರಿಸಿ, ಬಗೆ ಬಗೆಯ ಪುಷ್ಪಗಳಿಂದ ಅಲಂಕೃತಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಹಾಮಂಗಳಾರತಿ ನೆರವೇರಿತು. ಹಾಗೆಯೇ ರಥೋತ್ಸವದಲ್ಲಿ ಪ್ರತಿಷ್ಠಾಪಿಸುವ ಶ್ರೀರಾಮನ ಕಂಚಿನ ವಿಗ್ರಹಕ್ಕೆ ಕೇಸರಿ ಪೇಟವನ್ನು ಕಟ್ಟಿ ಅಲಂಕೃತಗೊಳಿಸಿದ ಬಗೆ ನೋಡುಗ ಭಕ್ತರ ಗಮನ ಸೆಳೆಯಿತು. ಬೆಂಗಳೂರು ಮೂಲಕದ ನರಹರಿ ಭಟ್ ನೇತೃತ್ವದ ಅರ್ಚಕರ ತಂಡದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ನೆರೆಯ ಹೆಬ್ಬಾಲೆ ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಸಾಂಪ್ರದಾಯಿಕವಾಗಿ ಕಾಶಿಯಿಂದ ಅಂಚೆಯಲ್ಲಿ ಬರುವ ಪವಿತ್ರ ಗಂಗಾಜಲವನ್ನು…






