ಮಡಿಕೇರಿ ಮಾ.28 : ಕಕ್ಕಬ್ಬೆ ಗ್ರಾ.ಪಂ ವ್ಯಾಪ್ತಿಯಲ್ಲಿ ರೂ. 3.65 ಕೋಟಿ ಅನುದಾನದಲ್ಲಿ ನಿರ್ಮಾಣವಾದ ರಸ್ತೆ ಕಾಮಗಾರಿಯನ್ನು ಹಾಗೂ ಕುಂಜಿಲ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿದರು.
ಲೇಖಕ: admin
ಮಡಿಕೇರಿ ಮಾ.28 : ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದು ರಾಜ್ಯಮಟ್ಟ, ರಾಷ್ಟ್ರ ಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಸಾಬೀತಾಗಿದೆ ಎಂದು ಗೋಣಿಕೊಪ್ಪಲಿನ ಮಹಿಳಾ ಉದ್ಯಮಿ ಎಂ.ಕೆ.ಸಂಧ್ಯಾ ಕಾಮತ್ ನುಡಿದರು. ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೆಣ್ಣು ತಾನು ಸಬಲಳಾಗಬೇಕು ಎನ್ನುವುದರ ಜತೆಗೆ ಅದು ಸಕಾರಾತ್ಮಕವಾಗಿರಬೇಕು ಎನ್ನುವ ಚಿಂತೆಯನ್ನು ಮಾಡಬೇಕಿದೆ. ಗಂಡ-ಹೆಂಡತಿ ಕುಟುಂಬದ ಕಣ್ಣುಗಳಿದ್ದಂತೆ. ಸಬಲರಾಗುವ ನಿಟ್ಟಿನಲ್ಲಿ ಮೇಲು-ಕೀಳು ಭಾವನೆ ಬಾರದಂತೆ ಗಮನಿಸಿಕೊಂಡು ಹೋದಲ್ಲಿ ಕುಟುಂಬ ವ್ಯವಸ್ಥೆಯಲ್ಲಿ ನಾವು ಸಫಲರಾಗಬಹುದು ಮತ್ತು ನೆಮ್ಮದಿಯ ಜೀವನ ಕಾಣಬಹುದು ಎಂದು ಸಲಹೆ ನೀಡಿದರು. ಇಂದು ನಾವು ಹಲವಾರು ಕೌಟುಂಬಿಕ ಸಮಸ್ಯೆಗಳನ್ನು ವೈಮನಸ್ಸುಗಳನ್ನು, ವಿಚ್ಛೇದನಗಳನ್ನು ಕಾಣುತ್ತಿದ್ದೇವೆ. ಸಕಾರಾತ್ಮಕ ಚಿಂತನೆಯಿಂದ ಇವೆಲ್ಲವನ್ನೂ ಮೀರಿ ನಿಂತು ಹೆಣ್ಣು ಸಬಲಳಾಗಿ ಕೌಟುಂಬಿಕ ವ್ಯವಸ್ಥೆಯನ್ನು ಸರಿ ಮಾಡಿಕೊಂಡು ಹೋಗುವ ನಿಟ್ಟಿನಲ್ಲಿ ಚಿಂತನೆಯ ಅಗತ್ಯತೆ ಇದೆ ಎಂದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ರಾಣಿ ಮಾಚಯ್ಯ…
ಮಡಿಕೇರಿ ಮಾ.28 : ಮುಸಲ್ಮಾನರ ಅಭ್ಯುದಯಕ್ಕಾಗಿ ಮೀಸಲಾಗಿರುವ ಮೀಸಲಾತಿಯನ್ನು ಈ ಹಿಂದೆ ಇದ್ದ ರೀತಿಯಲ್ಲೇ ಪ್ರವರ್ಗ 2ಬಿ ಅಡಿಯ ಶೇ.4 ರಷ್ಟು ಯಥಾಸ್ಥಿತಿ ಮುಂದುವರೆಸಬೇಕೆoದು ಕೆಪಿಸಿಸಿ ಸದಸ್ಯ ಹಾಗೂ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಕೆ.ಎ.ಯಾಕುಬ್ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಚುನಾವಣೆ ಸಂದರ್ಭದಲ್ಲಿ ಸರ್ಕಾರ ರಾಜಕೀಯ ದುರುದ್ದೇಶದಿಂದ ಮುಸಲ್ಮಾನರ ಮೀಸಲಾತಿಯನ್ನು ಕಸಿದುಕೊಂಡು ಇತರ ಸಮುದಾಯದವರಿಗೆ ಹಂಚಿಕೆ ಮಾಡಿದೆ ಎಂದು ಆರೋಪಿಸಿದ್ದಾರೆ. ಎಲ್ಲಾ ಸಮುದಾಯದವರಿಗೂ ಅವರರವರ ಬೇಡಿಕೆಗೆ ಅನುಗುಣವಾಗಿ ಕಾನೂನಿನ ಚೌಕಟ್ಟಿನಡಿ ಮೀಸಲಾತಿಯನ್ನು ನೀಡಲು ನಮ್ಮ ವಿರೋಧವಿಲ್ಲ. ಆದರೆ ಕಾನೂನಾತ್ಮಕವಾಗಿ ಜಾರಿಯಲ್ಲಿದ್ದ ಮುಸಲ್ಮಾನರ ಮೀಸಲಾತಿಯನ್ನು ರದ್ದುಗೊಳಿಸಿರುವುದಕ್ಕೆ ವಿರೋಧವಿದೆ. ಈ ರೀತಿಯ ಗೊಂದಲ ಸೃಷ್ಟಿಯಿಂದ ರಾಜಕೀಯ ಲಾಭವಾಗಬಹುದೆನ್ನುವ ಭ್ರಮೆಯಲ್ಲಿ ಸರ್ಕಾರವಿದೆ. ರಾಜ್ಯದ ಜನರು ಪ್ರಜ್ಞಾವಂತರಾಗಿದ್ದು, ಮುಸಲ್ಮಾನ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಸಲ್ಮಾನರ ಮೀಸಲಾತಿಯನ್ನು ಕಿತ್ತು ನಮಗೆ ಕೊಡಿ ಎಂದು ಯಾವ ಸಮುದಾಯದವರೂ ಕೇಳಿಲ್ಲ. ಸರ್ಕಾರ ಕ್ಷÄಲ್ಲಕ ರಾಜಕಾರಣಕ್ಕಾಗಿ ಅತಿ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದೆ.…
ವಿರಾಜಪೇಟೆ ಮಾ.28 : ವಿರಾಜಪೇಟೆಯ ಸಾದಿಕ್ ಆರ್ಟ್ಸ್ ಲಿಂಕ್ ವತಿಯಿಂದ ಹೆಗ್ಗಳ ಗ್ರಾಮದ ಎಡಮಕ್ಕಿಯಲ್ಲಿ ರಾಷ್ಟ್ರಮಟ್ಟದ ಕಲಾ ಉತ್ಸವ ನಡೆಯಿತು. ಈ ಕಲಾ ಉತ್ಸವದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಮಹರಾಷ್ಟ್ರ ಸೇರಿದಂತೆ ಇತರೆಡೆಗಳಿಂದ ಕಲಾವಿದರುಗಳು ಭಾಗವಹಿಸಿದ್ದರು. ಈ ಸಂದರ್ಭ ಹೆಸರಾಂತ ಕಲಾವಿದರುಗಳ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕಲಾವಿದರುಗಳು ಅನೇಕ ಕಲಾಕೃತಿಗಳನ್ನು ಇದೇ ಸಂದರ್ಭ ರಚಿಸಿದರು. ಕಾರ್ಯಕ್ರಮದಲ್ಲಿ ಕಲಾವಿದರುಗಳಾದ ಹರೀಂದ್ರನ್ ಚಲಾದ್, ವಿ.ಪಿ.ನಂದನ್, ಜಾಯ್ ಚಾಕೋ, ಬಾವಾ ಮಾಲ್ದಾರೆ, ಟಿ.ಬಿ. ಪ್ರಸನ್ನ ಕುಮಾರ್, ಸಾದಿಕ್ ಹಂಸ, ಸುರೆಶನ್ ವಿ.ಪಿ., ಶಶಿಧರನ್ ಕೆ. ಇದ್ದರು.
ಮಡಿಕೇರಿ ಮಾ.28 : ಮುಸಲ್ಮಾನರಿಗಾಗಿ ಮೀಸಲಿದ್ದ ಪ್ರವರ್ಗ 2ಬಿ ಅಡಿಯ ಶೇ.4 ರಷ್ಟು ಮೀಸಲಾತಿಯನ್ನು ರದ್ದು ಪಡಿಸಿರುವ ಸರ್ಕಾರದ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಸೋಮವಾರಪೇಟೆ ತಾ.ಪಂ ಮಾಜಿ ಸದಸ್ಯ ಕೆ.ಐ.ರಫೀಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಮುಸಲ್ಮಾನರಿಗಾಗಿ ಇದ್ದ ಮೀಸಲಾತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಸೌಹಾರ್ಧತೆಯ ನಾಡಿನಲ್ಲಿ ಒಡೆದು ಆಳುವ ನೀತಿ ಜಾರಿಗೆ ಬರುತ್ತಿರುವುದು ದುರಂತ. ಸಂವಿಧಾನದ ಆಶಯದಂತೆ ಆಡಳಿತ ನಡೆಸುತ್ತೇವೆ ಎಂದು ಭರವಸೆ ನೀಡಿದವರು ಹಿಂದುಳಿದ ಜನಾಂಗವಾಗಿರುವ ಮುಸಲ್ಮಾನರ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಅನ್ಯಾಯ ಮಾಡಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಬಹುತೇಕರು ಬಡವರಾಗಿದ್ದು, ಶೈಕ್ಷಣಿಕವಾಗಿ ಬೆಳವಣಿಗೆ ಕಾಣಬೇಕು ಎನ್ನುವ ಗುರಿ ಹೊಂದಿದ್ದಾರೆ. ಉನ್ನತ ಶಿಕ್ಷಣ ದೊರೆತರೆ ಉದ್ಯೋಗವೂ ಸಿಗಲಿದೆ. ಬಡ ಮುಸ್ಲಿಂ ವರ್ಗ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಶೇ.4 ರಷ್ಟು ಮೀಸಲಾತಿ ಹೆಚ್ಚು ಸಹಕಾರಿಯಾಗಿತ್ತು. ಆದರೆ ಮೀಸಲಾತಿಯನ್ನು ಕಸಿದುಕೊಳ್ಳುವ ಮೂಲಕ ಸರ್ಕಾರ ಮುಸಲ್ಮಾನರನ್ನು ವಿವಿಧ…
ವಿರಾಜಪೇಟೆ ಮಾ.28 : ನಲ್ವತ್ತೋಕ್ಲು(ಚೋಕಂಡಹಳ್ಳಿ) ಮೊಯಿದ್ದೀನ್ ಜುಮಾ ಮಸೀದಿಥಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ದುದ್ದಿಯಂಡ ಹೆಚ್.ಸೂಫಿ ಹಾಜಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಮಸೀದಿ ಆವರಣದಲ್ಲಿ ನಡೆದ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಸಾಲಿಗೂ ಸೂಫಿ ಹಾಜಿ ಅವರನ್ನೇ ಮುಂದುವರಿಸಲು ನಿರ್ಧರಿಸಿದ ಸದಸ್ಯರು, ಅವರನ್ನು ಅವಿರೋಧವಾಗಿ ಆಯ್ಕೆಮಾಡಿದರು. ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಡಿ.ಎಫ್. ಅಶ್ರಫ್ ಅಲಿ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಎಂ. ಯೂಸುಫ್, ಸಹ ಕಾರ್ಯದರ್ಶಿಯಾಗಿ ಪಿ.ಎ. ಬಷೀರ್ ಆಯ್ಕೆಗೊಂಡಿದ್ದಾರೆ. ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಿ.ಹೆಚ್. ಸಮದ್, ಕೆ.ಎಂ. ಫಸಿ, ಪಿ.ಎ. ಮಜೀದ್, ಕೆ.ಎಂ. ಹ್ಯಾರಿಸ್, ಡಿ.ಎಂ. ಸಿರಾಜ್, ಕೆ.ಎಂ. ಸಾಬಾನ್, ಎಂ.ಎ. ಶಫೀಕ್ ಮತ್ತು ಟಿ.ಎಂ. ಹಾಷಿಮ್ ನೇಮಕಗೊಂಡಿದ್ದಾರೆ.
ಮಡಿಕೇರಿ ಮಾ.28 : ಹಾಕಿ ಇಂಡಿಯಾ ವತಿಯಿಂದ ತಮಿಳುನಾಡಿನ ರಾಮನಾಥಪುರದಲ್ಲಿ ಜರುಗಿದ ಪ್ರಥಮ ಜೂನಿಯರ್ ಮೆನ್ ಹಾಗೂ ಜೂನಿಯರ್ ವುಮೆನ್ ದಕ್ಷಿಣ ವಲಯ ಹಾಕಿ ಚಾಂಪಿಯನ್ ಶಿಪ್‍ನಲ್ಲಿ ಹಾಕಿ ಕರ್ನಾಟಕ ಜೂನಿಯರ್ ಮಹಿಳಾ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಫೈನಲ್‍ನಲ್ಲಿ ಮುಗ್ಗರಿಸಿದ ಪುರುಷರ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಹಾಕಿ ಕರ್ನಾಟಕ ಪುರುಷರ ತಂಡದಲ್ಲಿ ಕೊಡಗಿನ 9 ಕ್ರೀಡಾಪಟುಗಳು ಹಾಗೂ ಜೂನಿಯರ್ ಮಹಿಳಾ ತಂಡದಲ್ಲಿ ಕೂಡಗಿನ 11 ಆಟಗಾರ್ತಿಯರು ತಂಡವನ್ನು ಪ್ರತಿನಿಧಿಸಿರುವುದು ವಿಶೇಷವಾಗಿದ್ದು, ಜಿಲ್ಲೆಗೆ ಹಿರಿಮೆಯಾಗಿದೆ. ಜೂನಿಯರ್ ಮಹಿಳಾ ತಂಡ ಫೈನಲ್‍ನಲ್ಲಿ 3-1 ಗೋಲಿನಿಂದ ತಮಿಳುನಾಡು ತಂಡವನ್ನು ಸೋಲಿಸಿತು. ಕರ್ನಾಟಕ ಪರ ನಾಯಕಿ ಯಮುನಾ, ಕೊಡಗಿನವರಾದ ಮಾಳೇಟಿರ ದಿಶಾ ಪೊನ್ನಮ್ಮ ಹಾಗೂ ಎಂ.ದಿಶಾ ಗೋಲು ಗಳಿಸಿದರು. ತಂಡದಲ್ಲಿ ಕೊಡಗಿನವರಾದ ಮಡಿಕೇರಿ ಹಾಗೂ ಕೂಡಿಗೆ ಶಾಲೆಯ ಪುಣ್ಯ, ದೀಪಿಕಾ, ಎಂ.ದಿಶಾ, ಪಿ.ಡಿ.ಬೊಳ್ಳಮ್ಮ, ಪಿ.ಡಿ.ಶ್ರಾವ್ಯ, ದಿಶಾ ಪೊನ್ನಮ್ಮ, ಪಿ.ಎಸ್.ನಿಧಿ ನೀಲಮ್ಮ, ಮನೀಷ್ ಪೊನ್ನಮ್ಮ, ಅಕ್ಷತಾ, ಯಾಹಿನಿ ಹಾಗೂ ದೇವಿಕಾ ಪಾಲ್ಗೊಂಡಿದ್ದರು. ಆರಂಭದ ಎಲ್ಲಾ…
ಮಡಿಕೇರಿ ಮಾ.28 : ವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಡಿಕೇರಿ ನಗರದ ಹೊಸ ಬಡವಾಣೆಯಲ್ಲಿ ನಡೆದಿದೆ. ರವೀಂದ್ರ ಎಂಬುವವರ ಪುತ್ರಿ ಭೂಮಿಕಾ(28) ಮೃತ ಮಹಿಳೆ. ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಇವರಿಗೆ 11 ತಿಂಗಳ ಹೆಣ್ಣು ಮಗುವಿದೆ. ಮೃತರು ಪತಿ ಹಾಗೂ ಮಗುವನ್ನು ಅಗಲಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ ಮಾ.28 : ಸಿದ್ದಾಪುರ ಗುಹ್ಯ ಗ್ರಾಮದ ಜಮೀಲಾ ಅವರ ಅಂಗಳದಲ್ಲಿದ್ದ 5 ಅಡಿ ಉದ್ದದ ನಾಗರ ಹಾವನ್ನು ಉರಗ ಪ್ರೇಮಿ ಸುರೇಶ್ ಪೂಜಾರಿ ರಕ್ಷಿಸಿ ಮಾಲ್ದಾರೆ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಹಾವುಗಳನ್ನು ಕಂಡರೆ ಕೊಲ್ಲದೆ ಈ ಸಂಖ್ಯೆಗೆ 8277131863 ಕರೆ ಮಾಡುವಂತೆ ಸುರೇಶ್ ಮನವಿ ಮಾಡಿದ್ದಾರೆ.
ನಾಪೋಕ್ಲು ಮಾ.28 : ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎನ್ ಎಸ್ ಯು ಐ ಕೊಡಗು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪಿ.ಎಂ.ಅಬ್ದುಲ್ ರಾಶಿದ್ ನೇಮಕವಾಗಿದ್ದಾರೆ. ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್ ಎಸ್ ಯು ಐ ) ದ ರಾಜ್ಯಪ್ರಧಾನ ಕಾರ್ಯದರ್ಶಿ ಹಾಗೂ ಅಯ್ಯಂಗೇರಿ ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ಅಬ್ದುಲ್ ರಾಶಿದ್ ಅವರನ್ನು ಎನ್ ಎಸ್ ಯು ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಅವರು ಕೊಡಗು ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಮಾಡಿ ಆದೇಶ ಹೊರಡಿಸಿದ್ದಾರೆ. ವರದಿ :ಝಕರಿಯ ನಾಪೋಕ್ಲು






