ಲೇಖಕ: admin

ಮಡಿಕೇರಿ ಮಾ.28 :  ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದೊಂದಿಗೆ ಬೆಂಗಳೂರಿನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಗಳಲ್ಲಿ ಒಂದಾದ “ಕಿಕ್ಕ್ ಸ್ಟಾರ್ಟ್” ಫುಟ್ಬಾಲ್ ತಂಡಕ್ಕೆ ಅಮ್ಮತ್ತಿಯ ಫ್ರೌಡ ಶಾಲಾ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಅಂಡರ್ 11 ರಿಂದ 21 ವರೆಗಿನ ವಯೋಮಾನದ ಪುರುಷ ಹಾಗೂ ಮಹಿಳಾ ತಂಡಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕೊಡಗಿನ ವಿವಿಧ ಭಾಗಗಳ 400 ಕ್ಕೂ ಹೆಚ್ಚು ಯುವ ಫುಟ್ಬಾಲ್ ಆಟಗಾರರು ಭಾಗವಹಿಸಿದ್ದರು. ಆಯ್ಕೆ ಪ್ರಕ್ರಿಯೆ ಶಿಬಿರವನ್ನು ಉದ್ಘಾಟಿಸಿದ ಮಾತನಾಡಿದ ಅಂತರಾಷ್ಟ್ರೀಯ ಮಾಜಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಫುಟ್ಬಾಲ್ ಆಟಗಾರರು ಹೆಚ್ಚಾಗಿ ಕಂಡು ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಯುವ ಫುಟ್ಬಾಲ್ ಆಟಗಾರರಿಗೆ ಚಿಕ್ಕ ವಯಸ್ಸಿನಲ್ಲೇ ಪ್ರೋತ್ಸಾಹ ಹಾಗೂ ತರಬೇತಿ ನೀಡುವುದು ಅತ್ಯವಶ್ಯಕವಾಗಿದೆ. ಕೊಡಗು ಜಿಲ್ಲೆ ಕ್ರೀಡಾ ಜಿಲ್ಲೆಯಾಗಿದ್ದರೂ ಸಹಾ ಸೂಕ್ತ ಕ್ರೀಡಾ ವ್ಯವಸ್ಥೆಗಳು ಇಲ್ಲ. ಆದರೂ ಕೂಡ ಜಿಲ್ಲೆಯ ಫುಟ್ಬಾಲ್ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಗಮನಸೆಳೆಯುತ್ತಿದ್ದಾರೆ. ಯುವ ಫುಟ್ಬಾಲ್…

Read More

ಮಡಿಕೇರಿ ಮಾ.28 :  ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಪೊನ್ನಂಪೇಟೆ ಕಛೇರಿಯಲ್ಲಿ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಮತ್ತು ಇತರೆ ದ್ವಿ ಚಕ್ರ  ಹಾಗೂ ತ್ರಿಚಕ್ರ ವಾಹನಗಳನ್ನು  ವಿತರಿಸಲಾಯಿತು. ಶಾಸಕ ಕೆ.ಜಿ.ಬೋಪಯ್ಯ ಫಲಾನುಭವಿಗಳಿಗೆ ವಾಹನದ ಕೀ ಹಸ್ತಾಂತರಿಸಿದರು. ಈ ಸಂದರ್ಭ ಅಧಿಕಾರಿಗಳು ಹಾಜರಿದ್ದರು.  

Read More

ಮಡಿಕೇರಿ ಮಾ.28 :  ಖಾಸಗಿ ಆಸ್ಪತ್ರೆಗಳು ಕೂಡ ತುತು೯ ವೈದ್ಯಕೀಯ ಸೇವೆಯನ್ನು ಎಲ್ಲರಿಗೂ ಉಚಿತವಾಗಿ ನೀಡಬೇಕೆಂದು  ರಾಜಸ್ತಾನ ಸಕಾ೯ರವು ಹೊರಡಿಸಿರುವ ಆದೇಶಕ್ಕೆ ಆಕ್ಷೇಪ ವ್ಯಕ್ತವಾಗಿದೆ.  ಖಾಸಗಿ ಆಸ್ಪತ್ರೆಗಳ ಅಸ್ತಿತ್ವಕ್ಕೆ ಮಾರಕವಾಗಿರುವ ಕಾನೂನನ್ನು ಹಿಂಪಡೆಯುವಂತೆ  ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕ ಒತ್ತಾಯಿಸಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಘದ ಪ್ರಮುಖರು ರಾಜಸ್ತಾನ ಸಕಾ೯ರವು ಇತ್ತೀಚೆಗೆ ಕಾನೂನು ಹೊರಡಿಸಿ ಖಾಸಗಿ ಆಸ್ಪತ್ರೆಗಳು ಕೂಡ ತುತು೯ ವೈದ್ಯಕೀಯ ಸೇವೆಯನ್ನು ಸಕಾ೯ರಿ ಆಸ್ಪತ್ರೆಗಳಂತೆ ಉಚಿತವಾಗಿ ರೋಗಿಗಳಿಗೆ ನೀಡಬೇಕೆಂದು ಸೂಚಿಸಿದೆ. ಇದರಿಂದ ಖಾಸಗಿ ಆಸ್ಪತ್ರೆಗಳ ಅಸ್ತಿತ್ವಕ್ಕೇ ಧಕ್ಕೆ ಬಂದಂತಾಗಿದೆ.  ಯಾವುದೆಲ್ಲಾ ತುತು೯  ಆರೋಗ್ಯ ಸೇವೆಯಡಿ ಬರುತ್ತದೆ ಎಂಬ ಸ್ಪಷ್ಟತೆಯೂ ಇಲ್ಲವಾಗಿದೆ. ಹೀಗಿರುವಾಗ ಖಾಸಗಿ ಆಸ್ಪತ್ರೆಗಳ ಸ್ಥಾಪನೆಯ ಉದ್ದೇಶವೇ   ಈ ಕಾಯಿದೆಯಿಂದ  ವಿಫಲವಾಗಲಿದೆ.  ರಾಜ್ಯ ಸಕಾ೯ರವೊಂದು ಈ ರೀತಿಯ ಕಾಯಿದೆ ಮೂಲಕ ಖಾಸಗಿ ಆಸ್ಪತ್ರೆಗಳ ಮೇಲೆ ಹಿಡಿತ ಸ್ಥಾಪಿಸಲು ಮುಂದಾಗಿರುವುದು ದುರದೖಷ್ಟಕರ. ಖಾಸಗಿ ಆಸ್ಪತ್ರೆಗಳ ಆರೋಗ್ಯಕರ ವ್ಯವಸ್ಥೆಯೇ ಇದರಿಂದ  ಸಮಸ್ಯೆಗೊಳಪಡಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ…

Read More

ಮಡಿಕೇರಿ ಮಾ.28 : ಪ್ರಕೃತಿ ಪ್ರಿಯರ ಅಚ್ಚುಮೆಚ್ಚಿನ ಪ್ರವಾಸಿತಾಣ ಮಡಿಕೇರಿಯ ಅಬ್ಬಿ ಜಲಪಾತ ವ್ಯಾಪ್ತಿಯಲ್ಲಿ ಪ್ರವಾಸಿಗರ ಹಾಗೂ ವಾಹನ ಚಾಲಕರುಗಳ ಸುರಕ್ಷತೆಯ ದೃಷ್ಟಿಯಿಂದ ಉಪ ಪೊಲೀಸ್ ಠಾಣೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಕೊಡಗು ರಕ್ಷಣಾ ವೇದಿಕೆ ಒತ್ತಾಯಿಸಿದೆ. ಕೊರವೇ ಅಧ್ಯಕ್ಷ ಅಚ್ಚಾಂಡೀರ ಪವನ್ ಪೆಮ್ಮಯ್ಯ ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರನ್ನು ಭೇಟಿಯಾದ ಸಂಘಟನೆಯ ಪದಾಧಿಕಾರಿಗಳು ಹಾಗೂ ಮಡಿಕೇರಿ ನಗರ ಆಟೋ ಚಾಲಕರು ಉಪ ಪೊಲೀಸ್ ಠಾಣೆಯ ಅನಿವಾರ್ಯತೆಯ ಕುರಿತು ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ಅಬ್ಬಿಫಾಲ್ಸ್ ವ್ಯಾಪ್ತಿಯಲ್ಲಿ ನಗರ ಆಟೋ ಚಾಲಕರ ಮೇಲೆ ದುಷ್ಕರ್ಮಿಗಳು ವಿನಾಕಾರಣ ಹಲ್ಲೆ ಮಾಡುತ್ತಿರುವ ಮತ್ತು ಕೊಲೆ ಬೆದರಿಕೆಯೊಡ್ಡುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಆಟೋ ಚಾಲಕರು ಅಬ್ಬಿಫಾಲ್ಸ್ ಗೆ ಬಾಡಿಗೆ ತೆರಳಲು ಆತಂಕಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಸಿಗರ ಸುರಕ್ಷತೆಯೂ ಇಲ್ಲಿ ಅಗತ್ಯವಾಗಿದೆ ಎಂದು ಪವನ್ ಪೆಮ್ಮಯ್ಯ ಗಮನ ಸೆಳೆದರು. ಆಟೋ ಚಾಲಕರಿಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ ಅವರು, ಉಪ ಪೊಲೀಸ್ ಠಾಣೆ ವ್ಯವಸ್ಥೆಯಿಂದ ಅನೇಕ…

Read More

ಮಡಿಕೇರಿ ಮಾ.28 :  ಹಾಕತ್ತೂರು ಗ್ರಾ.ಪಂ ವ್ಯಾಪ್ತಿಯಲ್ಲಿ ರೂ 1.81ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಿದರು. ಇದೇ ಸಂದರ್ಭ ಕಗ್ಗೊಡ್ಲು ಗ್ರಾಮದ ಶಾಲೆಯಿಂದ ಕಡಗದಾಳು ಸಂಪರ್ಕ ರಸ್ತೆ ಗೆ  ಶಂಕುಸ್ಥಾಪನೆ ನೆರವೇರಿಸಿದರು.

Read More

ಮಡಿಕೇರಿ ಮಾ.28 :  ಗೋಣಿಕೊಪ್ಪ ಗ್ರಾ.ಪಂ  ಬೈಪಾಸ್ ರಸ್ತೆಯಿಂದ ಕೀರೆಹೊಳೆ ಮೂಲಕ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲು ತಲಾ ರೂ. 20 ಲಕ್ಷದಂತೆ 2 ಸೇತುವೆ ಮಂಜೂರಾಗಿದ್ದು, ಶಾಸಕ ಕೆ.ಜಿ.ಬೋಪಯ್ಯ ಸೇತುವೆ  ಉದ್ಘಾಟನೆ ಮತ್ತು ಭೂಮಿ ಪೂಜೆ ನೆರವೇರಿತು. ಗ್ರಾಮ ಪಂಚಾಯಿತಿ ಸದಸ್ಯರು ಮತ್ತು  ಗ್ರಾಮಸ್ಥರು ಹಾಜರಿದ್ದರು.

Read More

ಮಡಿಕೇರಿ ಮಾ.28 : ಮಾಯಮುಡಿ ಗ್ರಾ.ಪಂ ಯ ಚೆನ್ನಂಗೊಲ್ಲಿ ಪೈಸಾರಿಗೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಯನ್ನು ರೂ.12.30ಲಕ್ಷ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸಲಾಗಿದ್ದು,  ನೂತನ ರಸ್ತೆಯನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿದರು. ಈ ಸಂದರ್ಭ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

Read More

ಮಡಿಕೇರಿ ಮಾ.28 : ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಗೋವಾದಲ್ಲಿ ನಡೆದ ಯೋನೆಕ್ಸ್ ಸನ್ ರೈಸ್ 45ನೇ ಇಂಡಿಯನ್ ಶಿಪ್‍ನಲ್ಲಿ ಕೊಡಗಿನ ತಾತಪಂಡ ಜ್ಯೋತಿ ಸೋಮಯ್ಯ ಸಾಧನೆ ಮಾಡಿದ್ದು, ವಿಶ್ವ ಚಾಂಪಿಯನ್ ಶಿಪ್‍ಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. 55+ ವಿಭಾಗದಲ್ಲಿ ಸಿಂಗಲ್ಸ್‍ನಲ್ಲಿ ಜ್ಯೋತಿ ಸೋಮಯ್ಯ ಅವರು ರನ್ನರ್ ಅಪ್ ಆಗಿ ಬೆಳ್ಳಿ ಪದಕ ಹಾಗೂ ಡಬಲ್ಸ್‍ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಈ ಸಾಧನೆಯೊಂದಿಗೆ ಇವರು ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಬಿ.ಡಬ್ಲ್ಯು.ಎಫ್ ವಿಶ್ವ ಚಾಂಪಿಯನ್ ಶಿಪ್ 2023ಕ್ಕೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಜ್ಯೋತಿ ಅವರು ಸಿಂಗಲ್ಸ್‍ನಲ್ಲಿ ಫೈನಲ್‍ನಲ್ಲಿ ಪ್ರಬಲ ಪ್ರತಿಸ್ಪರ್ಧಿ ವಿರುದ್ಧ ಆಡಿದ್ದು, ಅಲ್ಪ ಪಾಯಿಂಟ್‍ನಿಂದ ಸೋಲು ಅನುಭವಿಸಿದರೂ, ಈ ಸಾಧನೆ ತೃಪ್ತಿ ತಂದಿದೆ ಎಂದಿದ್ದಾರೆ.

Read More

ಮಡಿಕೇರಿ ಮಾ.28 : ಕೊಡಗು ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಸ್ಮಶಾನ ಭೂಮಿ ಅಗತ್ಯ ಇದ್ದಲ್ಲಿ ಕೂಡಲೇ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರ್ ಕಚೇರಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ತಿಳಿಸಿದ್ದಾರೆ. ಹಾಗೆಯೇ ಸ್ಮಶಾನ ಭೂಮಿ ಒತ್ತುವರಿಯಾಗಿದ್ದಲ್ಲಿ ಸಂಬಂಧಪಟ್ಟ ತಾಲ್ಲೂಕು ಕಚೇರಿಗೆ ಮಾಹಿತಿ ನೀಡಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಹೇಳಿದ್ದಾರೆ. ಜಿಲ್ಲೆಯ ಹಲವು ಗ್ರಾಮಗಳಿಗೆ ಈಗಾಗಲೇ ಸ್ಮಶಾನ ಭೂಮಿ ಕಾಯ್ದಿರಿಸಲಾಗಿದೆ. ಯಾವುದಾದರೂ ಗ್ರಾಮಕ್ಕೆ ಸ್ಮಶಾನ ಭೂಮಿ ಒದಗಿಸಲು ಬಾಕಿ ಇದ್ದಲ್ಲಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸುವಂತಾಗಬೇಕು. ಈಗಾಗಲೇ ಜಾಗ ಕಾಯ್ದಿರಿಸಿದ ಗ್ರಾಮಗಳ ಸ್ಮಶಾನ ಭೂಮಿಯ ಪಹಣಿ ಸೇರಿದಂತೆ ಇತರೆ ದಾಖಲೆಗಳು ಲಭ್ಯವಿದ್ದು, ಜಮೀನು ಲಭ್ಯವಿರುವ ಕಡೆ ಸ್ಮಶಾನಕ್ಕೆ ಜಮೀನು ಕಾಯ್ದ್ದಿರಿಸಲಾಗುತ್ತದೆ ಎಂದರು. ರಾಜ್ಯ ಉಚ್ಛ ನ್ಯಾಯಾಲಯವು ಮಾ.16 ರಂದು ನಡೆದ ವಿಚಾರಣೆಯಲ್ಲಿ ರಾಜ್ಯದಲ್ಲಿನ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ಮಶಾನ ಭೂಮಿಯ ಅಗತ್ಯತೆ ಬಗ್ಗೆ ರಾಜ್ಯದ ಎಲ್ಲಾ ಗ್ರಾಮದಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಸ್ಮಶಾನ ಭೂಮಿಯ ಅವಶ್ಯಕತೆ ಬಗ್ಗೆ…

Read More

ಮಡಿಕೇರಿ ಮಾ.28 : ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್ ಅವರು ಕುಶಾಲನಗರಕ್ಕೆ ಭೇಟಿ ನೀಡಿ ಮುಂಬರುವ ಚುನಾವಣೆ ಸಂದರ್ಭದ ಭದ್ರತಾ ವ್ಯವಸ್ಥೆಗಳ ಬಗ್ಗೆ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಅಧಿಕಾರಿಗಳ ಜೊತೆಗೆ ಚರ್ಚಿಸಿದರು. ಕುಶಾಲನಗರ ಡಿವೈಎಸ್‍ಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್.ವಿ.ಗಂಗಾಧರಪ್ಪ, ಶನಿವಾರಸಂತೆ ಸೋಮವಾರಪೇಟೆ, ಕುಶಾಲನಗರ, ಸುಂಟಿಕೊಪ್ಪ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಕುಶಾಲನಗರಕ್ಕೆ ಆಗಮಿಸಿದ ಐಜಿಪಿ ಅವರಿಗೆ ಇದೇ ಸಂದರ್ಭ ಗೌರವ ರಕ್ಷೆ ನೀಡಲಾಯಿತು.

Read More