ಕುಶಾಲನಗರ ಆ.8 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನರ ಸಹಭಾಗಿತ್ವದಲ್ಲಿ ಸ್ವಾತಂತ್ರ್ಯೋತ್ಸವದ ಸಂದರ್ಭ ರಾಜ್ಯದ ಎಲ್ಲೆಡೆ ಸುಮಾರು 17 ಸಾವಿರ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ತಿಳಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಕ್ರಮ ಇಂದಿನಿಂದ ಆ.8 ರಿಂದ ಒಂದು ವಾರ ತನಕ ನಡೆಯಲಿದೆ. ಮಾನಸಿಕ ನೆಮ್ಮದಿ ಶಾಂತಿಗಾಗಿ ಜನರು ಶ್ರದ್ಧಾ ಕೇಂದ್ರಗಳಿಗೆ ಆಗಮಿಸುತ್ತಿದ್ದು, ಅಂತಹ ಕೇಂದ್ರಗಳು ಗ್ರಾಮದ ಅತಿ ಮುಖ್ಯ ಭಾಗವಾಗಿದ್ದು ಅವುಗಳ ಸ್ವಚ್ಛತೆ ಅತಿ ಅಗತ್ಯವಾಗಿದೆ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ ಹೆಗ್ಗಡೆ ಅವರ ಚಿಂತನೆಯಾಗಿದೆ. ವರ್ಷದಲ್ಲಿ ಎರಡು ಬಾರಿ ಮಕರ ಸಂಕ್ರಾಂತಿ ಮತ್ತು ಸ್ವಾತಂತ್ರ್ಯೋತ್ಸವ ಸಂದರ್ಭ ಸಪ್ತಾಹದ ಮೂಲಕ ಶ್ರದ್ಧಾ ಕೇಂದ್ರಗಳಾದ ದೇವಾಲಯ ಬಸದಿ ಮಸೀದಿ ಚರ್ಚ್ ಗಳ ಮತ್ತು ನದಿ…
ಲೇಖಕ: admin
ಮಡಿಕೇರಿ ಆ.8 NEWS DESK : ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 41ನೇ ರಾಜ್ಯ ಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ಮರ್ಕರ ಟೆಕ್ವಾಂಡೋ ಕ್ಲಬ್‍ನ ವಿದ್ಯಾರ್ಥಿಗಳು ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಕೊಡಗು ವಿದ್ಯಾಲಯ ಶಾಲೆಯ ದಕ್ಷ್, ಹರ್ಷ್ ಕರುಂಬಯ್ಯ ಚಿನ್ನ, ಎನ್.ಕೆ.ಪ್ರಜ್ಞಾ, ಎನ್.ಕೆ.ದಿವಿತ್, ದಾನೀಶ್, ಆಯಾನ್ ಕಾನ್ ಬೆಳ್ಳಿ ಹಾಗೂ ಡಿಶಾಂತ್, ಪಾವನಿ, ಕ್ರಿಶ್, ಸಾದ್ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಸಂತ ಮೈಕಲರ ಶಾಲೆಯ ಆರೂಷ್, ಅನನ್ಯ ಬೆಳ್ಳಿ, ಸಂತ ಜೋಸೆಫರ ಶಾಲೆಯ ಅನಿಯಾ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್‍ನ ಮಾಸ್ಟರ್ ಕುಶಾಲ್ ಕುಮಾರ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದು ಆಯ್ಕೆಯಾದ ವಿದ್ಯಾರ್ಥಿಗಳು ಆ.27 ರಿಂದ 29ರ ವರೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ವತಿಯಿಂದ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ 3ನೇ ಕರ್ನಾಟಕ ಮಿನಿ…
ಮಡಿಕೇರಿ ಆ.8 NEWS DESK : ಆಶಾ ಕಿರಣ ಕಲಾ ಟ್ರಸ್ಟ್ ವತಿಯಿಂದ ನೀಡಲಾದ ಆಹಾರದ ಕಿಟ್ ಅನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸಂತ್ರಸ್ತರಿಗೆ ವಿತರಿಸಲಾಯಿತು. ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಸೋಮವಾರಪೇಟೆ ತಾಲೂಕಿನಲ್ಲಿ ಮನೆ ಕಳೆದುಕೊಂಡ ಹಾಗೂ ಹಾನಿಗೊಳಗಾದ ಮನೆಗಳ ಕುಟುಂಬಸ್ಥರಿಗೆ ವೇದಿಕೆಯ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ವಿತರಿಸಿದರು. ಈ ಸಂದರ್ಭ ಮಾತನಾಡಿದ ಫ್ರಾನ್ಸಿಸ್ ಡಿಸೋಜ ಜಿಲ್ಲೆಯಲ್ಲಿ ಮಳೆಯಿಂದ ಹಲವು ಮನೆಗಳು ಹಾನಿಯಾಗಿರುವ ಬಗ್ಗೆ ಆಶಾ ಕಿರಣ ಕಲಾ ಟ್ರಸ್ಟ್ ಅಧ್ಯಕ್ಷರಾದ ಮಾಲತಿ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಪಂದಿಸಿದ ಅವರು ಸುಮಾರು 27 ಕುಟುಂಬಸ್ಥರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದು, ಅದನ್ನು ವೇದಿಕೆಯ ಮೂಲಕ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು. ಅಲ್ಲದೇ ಮನವಿ ತಕ್ಷಣ ಸ್ಪಂದಿಸಿದಕ್ಕೆ ಧನ್ಯವಾದ ಅರ್ಪಿಸಿದರು. ಈ ಸಂದರ್ಭ ವೇದಿಕೆಯ ಪ್ರಮುಖರಾದ ಧೀವನ್ ಡಿಸೋಜಾ, ನಂದಿಗುದ್ದ ಗ್ರಾಮದ ವೇದ, ಚನ್ನಾಪುರ ಗ್ರಾಮದ ರತಿಶ್ ಪೂಜಾರಿ, ಬಿಟಿಕಟ್ಟೆ ಗ್ರಾಮದ ಟಿ.ಆರ್.ರಾಮಚಂದ್ರ ಹಾಗೂ ವಿಶ್ವ, ಪ್ರಸನ್ನ, ನಾಗರಾಜ್ ಇತರರು ಹಾಜರಿದ್ದರು.
ಮಡಿಕೇರಿ ಆ.8 NEWS DESK : ಸಂಸ್ಕೃತಿ ಸಿರಿ ಬಳಗ ಟ್ರಸ್ಟ್, ಕೊಡಗು ಮತ್ತು ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಕೊಡಗು ಘಟಕದ ಸಂಯುಕ್ತಾಶ್ರಯದಲ್ಲಿ ಆ.15 ರಂದು ಮಡಿಕೇರಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಕವಿಗೋಷ್ಠಿ ಹಾಗೂ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ನಡೆಯಲಿದೆ ಎಂದು ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಈರಮಂಡ ಹರಿಣಿ ವಿಜಯ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪೋಲಿಸ್ ಮೈತ್ರಿ ಭವನದಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಉಚಿತ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ನಡೆಯಲಿದೆ. ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್‍ರಾಜ್ ಧ್ವಜಾರೋಹಣ ನೆರವೇರಿಸಿ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಕವಿಗೋಷ್ಠಿ ಮತ್ತು ದೇಶಭಕ್ತಿ ಗಾಯನ ಸ್ಪರ್ಧೆಯನ್ನು ವಿಶೇಷ ಆಹ್ವಾನಿತರು ಹಾಗೂ ತೀರ್ಪುಗಾರರಾದ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಕನ್ನಡ ಸರಿಗಮಪ ಖ್ಯಾತಿಯ ಅನ್ವಿತ್ ಕುಮಾರ್ ಉದ್ಘಾಟಿಸಲಿದ್ದಾರೆ ಎಂದರು. 77ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಮ್ಮ ದೇಶದ ಆಂತರಿಕ ಭದ್ರತೆ ನಿರ್ವಹಿಸುತ್ತಿರುವ…
ಮಡಿಕೇರಿ ಆ.8 NEWS DESK : ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಐ ಮತ್ತು ಎಂಎಲ್ ವಿಭಾಗದ ವತಿಯಿಂದ ಕಾರ್ಗಿಲ್ ವಿಜಯ ದಿವಸವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಇಂಜಿನಿಯರ್‍ಗಳು ರಕ್ಷಣಾ ಇಲಾಖೆಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತಾರೆ ಎಂದು ಇಸ್ರೇಲ್ ದೇಶದ ಉದಾಹರಣೆಯೊಂದಿಗೆ ವಿವರಿಸಿದರು. ಅಲ್ಲದೆ ಹೇಗೆ ರಕ್ಷಣಾ ಇಲಾಖೆಯು ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ ಎಂಬುದನ್ನು ತಿಳಿಸಿದರು. ಇಂದಿನ ಯುವ ಇಂಜಿನಿಯರ್ ಗಳು ಕೃತಕ ಬುದ್ದಿಮತ್ತೆಯನ್ನು ಬಳಸಿ ಹೊಸ ಅವಿಷ್ಕಾರಗಳನ್ನು ನಡೆಸಿ ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬೇಕೆಂದು ಕಿವಿ ಮಾತನ್ನು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದ ಕೊಡವ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರಾಕೇಶ್ ಪೂವಯ್ಯ ಮಾತನಾಡಿ, ದೇಶದ ಭದ್ರತೆಗೆ ಸೈನಿಕರ ಪಾತ್ರವು ಬಹು ಮುಖ್ಯವಾಗಿದೆ. ರಕ್ಷಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಪಾತ್ರ, ವಿದ್ಯಾರ್ಥಿಗಳು ಕೃತಕ ಬುದ್ದಿಮತ್ತೆಯನ್ನು ಬಳಸಿ ದೇಶದ ರಕ್ಷಣಾ…
ಕೊಡ್ಲಿಪೇಟೆ ಆ.8 NEWS DESK : ಸಮಾಜದಲ್ಲಿ ಇಂದು ನಡೆಯುತ್ತಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ತಲ್ಲಣಗಳಿಗೆ ವಚನ ಸಾಹಿತ್ಯ ದಿವ್ಯ ಔಷಧಿಯಾಗಿದೆ. ನಾಡಿನ ಸಂಸ್ಕೃತಿಗಳ ಅಧಃಪತನಕ್ಕೆ ಅನಕ್ಷರಸ್ಥರಿಗಿಂತ ಅಕ್ಷರಸ್ಥರ ಬೇಜವಬ್ದಾರಿಯ ವರ್ತನೆಗಳೇ ಕಾರಣ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ವಿಷಾದಿಸಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಕೊಡ್ಲಿಪೇಟೆಯಲ್ಲಿನ ಡಾ.ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಗುರು ಪಂಚಾಕ್ಷರ ಶಿವಾಚಾರ್ಯರ ದತ್ತಿ “ಶರಣ ಸಂಸ್ಕೃತಿ ಪ್ರಸಾರ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿಂದು ಘಟಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಹನ್ನೆರಡನೇ ಶತಮಾನದ ವಚನಕಾರರು ನೀಡಿದ ಸಾಮಾಜಿಕ ಸಂದೇಶಗಳು ಪರಿಹಾರವಾಗಿವೆ. ಬಸವೇಶ್ವರರಾದಿಯಾಗಿ ವಚನಕಾರರು ನಡೆ ನುಡಿಗಳೆರಡನ್ನು ಒಂದಾಗಿಸಿ ಕಾಯಕವೇ ಕೈಲಾಸ, ಎನಗಿಂತ ಕಿರಿಯರಿಲ್ಲ. ಶಿವ ಶರಶರಣರಿಗಿಂತ ಹಿರಿಯರಿಲ್ಲ ಲೋಕದ ಡೊಂಕನ್ನು ನೀವೇಕೆ ತಿದ್ದುವಿರಿ.. ನಿಮ್ಮನ್ನು ನೀವು ತಿದ್ದಿಕೊಂಡು ನೋಡಿ. ಸಮಾಜವೇ ಬದಲಾಗಿರುತ್ತದೆ ಎಂದು ಸಾರಿದರು. ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ…
ಬೆಂಗಳೂರು ಆ.8 NEWS DESK : ಅಂಬೇಡ್ಕರ್ ರವರು ಎಂದೆಂದಿಗೂ ಪ್ರಸ್ತುತ. ಈ ಬಾರಿಯ ಫಲಪುಷ್ಪ ಪ್ರದರ್ಶನ ಜನರು ಸಂವಿಧಾನಗಳ ಆಶಯಗಳನ್ನರಿಯಲು ಅಪೂರ್ವ ಅವಕಾಶ ಒದಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ 216ನೇ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಯಾವುದೇ ಜಾತಿ, ಧರ್ಮ,ಭಾಷೆ, ಪ್ರದೇಶಗಳಿಗೆ ಸೇರಿದ ಎಲ್ಲ ಜನರಿಗೂ ಸಮಾನ ಅವಕಾಶಗಳು ದೊರೆಯಬೇಕು. ಜನರಿಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ದೊರೆತಾಗ ಮಾತ್ರ ರಾಜಕೀಯ ಸ್ವಾತಂತ್ರ್ಯ ಗಳಿಸಲು ಸಾಧ್ಯ ಎಂಬುದರಲ್ಲಿ ನಂಬಿಕೆಯಿರಿಸಿದ್ದರು. ಅಂಬೇಡ್ಕರ್ ರವರ ಬಾಲ್ಯದಿಂದ ತಮ್ಮ ಜೀವಿತಾವಧಿಯಲ್ಲಿನ ಪ್ರಮುಖ ಸಾಧನೆಗಳನ್ನು ವಿವಿಧ ರೂಪದಲ್ಲಿ ಪ್ರದರ್ಶನದಲ್ಲಿ ಬಿಂಬಿಸಲಾಗಿದ್ದು, ಜನರು ಅವರ ಆಶಯಗಳ ಬಗ್ಗೆ ಅರಿಯಬಹುದಾಗಿದೆ. ಜನರು ಸಂವಿಧಾನದ ಬಗ್ಗೆ ಅರಿವು ಪಡೆದಾಗ ಮಾತ್ರ ಸಂವಿಧಾನದ ರೀತ್ಯ ನಡೆದುಕೊಳ್ಳಲು ಸಾಧ್ಯ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ರವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ.ಅಂಬೇಡ್ಕರ್ ರವರು ಎಂದೆಂದಿಗೂ ಪ್ರಸ್ತುತ ಎಂದರು. ಆ.19 ವರೆಗೆ ಲಾಲ್…
ಮಡಿಕೇರಿ ಆ.8 NEWS DESK : ಬಾಳೆಲೆ ವಿಜಯಲಕ್ಷ್ಮಿ ಪ್ರೌಢ ಶಾಲೆ, ಕಾಕೂರು ಜೆಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಕಳತ್ ಮಾಡ್ ಪ್ರೌಢಶಾಲೆಯಲ್ಲಿ ವಿಶ್ವ ಶಾಂತಿಗಾಗಿ ಲೇಖನಿ ಅಭಿಯಾನ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಶೇಕರ್ ಮಾತನಾಡಿ ಲೇಖನಿಯ ಮಹತ್ವವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಲೇಖನಿ ಖಡ್ಗ ಕ್ಕಿಂತ ಹರಿತವಾದದ್ದು, ಲೇಖನಿ ಹಿಡಿಯಿರಿ ವಿಶ್ವ ಮಾನವರಾಗಿ, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ, ವಿಶ್ವ ಶಾಂತಿ, ಲೇಖನಿ ಹಿಡಿಯಿರಿ ವಿಶ್ವ ಮಾನವರಾಗಿ, ಸಮಾಜದಲ್ಲಿ ತತ್ವ – ಸಿದ್ದಾಂತವನ್ನು ಬೆಂಬಲಿಸಬೇಕು, ಶಿಕ್ಷಣ ಪ್ರತಿಯೊಬ್ಬರು ಪಡೆಯಬೇಕು, ಪ್ರತಿಯೊರ್ವ ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕು, ಲೇಖನಿ ಮೂಲಕ ಮಾನವೀಯ ಸಂದೇಶ, ಲೇಖನಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸಮಾಜವನ್ನು ಶಾಂತಿ ಮಾರ್ಗದ ಕಡೆಗೆ ನಡೆಸುತ್ತದೆ, ಲೇಖನಿ ಹಿಡಿದು ಶಿಕ್ಷಕರಾಗಬಹುದು, ಡಾಕ್ಟರ್ ರಾಗಬಹುದು, ವಿಜ್ಞಾನಿ ಯಾಗಬಹುದು, ರೈತರಾಗಬಹುದು, ಯುದ್ಧ ಬೇಡ, ಶಾಂತಿ ಬೇಕು, ಲೇಖನಿಯನ್ನು ಗೌರವಿಸಿ, ಲೇಖನಿ ಹಿಡಿಯಿರಿ ಮೌಡ್ಯ ಮುಕ್ತ ಸಮಾಜ ನಿರ್ಮಾಣ ಮಾಡೋಣ, ಶಿಕ್ಷಣ ಪ್ರತಿಯೊಬ್ಬರ ಹಕ್ಕು ಸಮಾಜದಲ್ಲಿ…
ಮಡಿಕೇರಿ ಆ.8 NEWS DESK : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 2024-25 ನೇ ಸಾಲಿಗೆ ಇಲಾಖೆಯ ಬ್ಯಾಟರಿಚಾಲಿತ ಗಾಲಿಕುರ್ಚಿ, 10ನೇ ತರಗತಿ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಮರು ಪಾವತಿಸುವ ಯೋಜನೆ, ವಿಕಲಚೇತನ ವ್ಯಕ್ತಿಗಳನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗಳಿಗೆ ಪ್ರೋತ್ಸಾಹ ಧನ ಯೋಜನೆಗಳಡಿ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ.15 ಕೊನೆಯ ದಿನವಾಗಿದೆ. ಈ ಕಚೇರಿಗೆ ಅಥವಾ ಆಯಾಯ ತಾಲ್ಲೂಕಿನ ಗ್ರಾಮ ಪಂಚಾಯಿತಿಯಲ್ಲಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲೆಯ ಗ್ರಾಮ ಪಂಚಾಯತ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಆರ್‍ಡಬ್ಲ್ಯು ಹಾಗೂ ತಾಲ್ಲೂಕು ಪಂಚಾಯತ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್‍ಡಬ್ಲ್ಯುಗಳಾದ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನವರು ಹರೀಶ್ ಟಿ.ಆರ್. ಮೊ.ಸಂ. 8861428931, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನವರು ಪ್ರಥನ್ ಕುಮಾರ್ ಸಿ.ಬಿ ಮೊ.ಸಂ-9900883654 ಹಾಗೂ ಮಡಿಕೇರಿ ತಾಲ್ಲೂಕಿನವರು ರಾಜೇಶ್ ಮೊ.ಸಂ–8073192914 ಸಂಖ್ಯೆಗಳನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ.08272-295829 ನ್ನು ಕಚೇರಿ ವೇಳೆಯಲ್ಲಿ…
ಸುಂಟಿಕೊಪ್ಪ ಆ.8 NEWS DESK : ಸುಂಟಿಕೊಪ್ಪ ವಾಹನ ಚಾಲಕರ ಸಂಘದ 2024-25ನೇ ಸಾಲಿನ ಅಧ್ಯಕ್ಷರಾಗಿ ಕೆ.ವಿ.ಕಿಟ್ಟಣ್ಣ ರೈ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಐ.ರಿಜ್ವಾನ್ ಆಯ್ಕೆಯಾಗಿದ್ದಾರೆ. ಸಂಘದ ಸಾರ್ವಜನಿಕ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಬ್ದುಲ್ಲ (ಅವುಲಕುಟ್ಟಿ), ಸಹಕಾರ್ಯದರ್ಶಿ ಪಿ.ಎಸ್.ರೀನು, ಖಜಾಂಚಿಯಾಗಿ ಅನೀಶ್, ಸಂಘಟನಾ ಕಾರ್ಯದರ್ಶಿಯಾಗಿ ಮುನೀರ್ ಕಂಬಿಬಾಣೆ, ಸಲಹಾ ಸಮಿತಿಗೆ ಸಿ.ಎ.ಬಸಪ್ಪ, ರಾಜ, ವಿನೀಶ್‍ಡಿಸೋಜ, ಇಸ್ಮಾಹಿಲ್(ಕಾಕ್ಕು), ಕೆ.ರವಿ, ಅತೀಕ್, ಸಂದೀಫ್, ಸುರೇಸ, ಅಸೀಸ್, ಅಸ್ಕರ್, ಸೈನುದ್ದೀನ್, ಶಕ್ತಿವೇಲು, ಮೋನು ಅವರನ್ನು ನೇಮಕ ಮಾಡಲಾಯಿತು. ಇದೇ ಸಂದರ್ಭ ಚಾಲಕ ಸಿ.ಎ.ಬಸಪ್ಪ ಅವರನ್ನು ನೂತನ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.






