ಕೊಟ್ಟೂರು ಗ್ರಾಮದಲ್ಲಿ ಕೋವಿಡ್ ಮುನ್ನೆಚ್ಚರಿಕಾ ಕ್ರಮ

13/05/2021

ಮಡಿಕೇರಿ ಮೇ 13 : ಕೋವಿಡ್ ಸೋಂಕು ಕೊಡಗಿನ ಗ್ರಾಮೀಣ ಪ್ರದೇಶವನ್ನು ಬಿಡದೆ ಕಾಡುತ್ತಿರುವುದರಿಂದ ಗ್ರಾ.ಪಂ ಗಳು ಹಾಗೂ ಗ್ರಾಮಸ್ಥರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಕ್ರಿಯರಾಗಿದ್ದಾರೆ.
ಬೇಂಗೂರು ಗ್ರಾ.ಪಂ ವ್ಯಾಪ್ತಿಯ ಕೊಟ್ಟೂರು ವಾರ್ಡ್ ಗೆ ಒಳಪಟ್ಟ ಚೇರಂಬಾಣೆ ಪಟ್ಟಣ ಮತ್ತು ಕೇಕಡ ಬೈಮನ ಕುಟುಂಬಸ್ಥರ ಮನೆಗಳ ಭಾಗದಲ್ಲಿ ಸ್ಯಾನಿಟೈಸ್ ಮಾಡಲಾಯಿತು. ಅಲ್ಲದೆ ಸುತ್ತಮುತ್ತಲ ಪ್ರದೇಶವನ್ನು ಶುಚಿಗೊಳಿಸಲಾಯಿತು.
ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಶ್ರಮದಾನ ನಡೆಸಿದ್ದು ವಿಶೇಷವಾಗಿತ್ತು. ಕುಂದಚೇರಿ ಗ್ರಾ.ಪಂ ಸದಸ್ಯರುಗಳಾದ ಹ್ಯಾರಿಸ್ ಕೆ.ಯು, ಕೆದಂಬಾಡಿ ವಿಷು ಹಾಗೂ ಸ್ಥಳೀಯರು ಕೈಜೋಡಿಸಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದು ಖಡ್ಡಾಯವೆಂದು ಜನಜಾಗೃತಿ ಮೂಡಿಸಿದರು.