ಜಿಲ್ಲೆಯ 14 ಚೆಕ್ ಪೋಸ್ಟ್‍ಗಳಲ್ಲಿ 46 ಸಿಸಿ ಕ್ಯಾಮೆರಾ ಕಣ್ಗಾವಲು
04/05/2020

ಮಡಿಕೇರಿ ಮೇ 4 : ಜಿಲ್ಲೆಯ 14 ಚೆಕ್ ಪೋಸ್ಟ್‍ಗಳಲ್ಲಿ 46 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ತಿಳಿಸಿದ್ದಾರೆ.
ಕೊರೋನಾ ಸೋಂಕು ಲಾಕ್ ಡೌನ್ ಸಡಿಲಿಕೆಯಾಗಿದ್ದರೂ ಚೆಕ್ ಪೋಸ್ಟ್‍ಗಳಲ್ಲಿ ವೆಬ್ ಸ್ಕ್ರೀನಿಂಗ್ ನ್ನು ಮುಂದುವರಿಸಲಾಗಿದೆ. ಚೆಕ್ ಪೋಸ್ಟ್ ಮೂಲಕ ಕೊಡಗನ್ನು ಪ್ರವೇಸಿಸುವವರ ಪರಿಶೀಲನೆಗೆ ವೆಬ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.