ಎಸ್‍ಎಸ್‍ಎಲ್‍ಸಿ ಪರೀಕ್ಷೆ : ಸುಂಟಿಕೊಪ್ಪದಲ್ಲಿ ಸ್ವಚ್ಚತಾ ಕಾರ್ಯ
23/06/2020

ಸುಂಟಿಕೊಪ್ಪ,ಜೂ.23: ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಎಸ್.ಎಸ್.ಎಲ್.ಸಿ ಪರೀಕ್ಷೆ ಹಿನ್ನಲೆಯಲ್ಲಿ ಮಂಗಳವಾರ ಗ್ರಾ.ಪಂ.ವತಿಯಿಂದ ಪೌರಕಾರ್ಮಿಕರು ಸ್ವಚ್ಚತಾ ಕಾರ್ಯ ನಡೆಸಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನಲೆಯಲ್ಲಿ ಕರೋನಾ ಕೊವೀಡ್ ಗ್ರಾಮ ಪಂಚಾಯಿತಿ ವತಿಯಿಂದ 2 ಶಾಲೆಯ ಪರೀಕ್ಷ ಕೇಂದ್ರಗಳ ಪರೀಕ್ಷಾ ಕೊಠಡಿಗಳು,ಪೀಠೋಪಕರಣಗಳನ್ನು ಸ್ಯಾನಿಟೈಸ್ ಮಾಡಿ ಜೌಷಧಿ ಸಿಂಪಡಿಸಲಾಯಿತು. ಉಪಪ್ರಾಂಶುಪಾಲ ಬಾಲಕೃಷ್ಣ ಸಹಶಿಕ್ಷಕರು ಹಾಗೂ ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆಯ ಪ್ರಾಂಶುಪಾಲರಾದ ಸೇಲ್ವರಾಜ್ ಸಹ ಶಿಕ್ಷಕರು ಇದ್ದರು.
