ವಿಶ್ವಾಸಮತ ಪರೀಕ್ಷೆ ಗೆದ್ದ ಕಾಂಗ್ರೆಸ್

15/08/2020

ಬೆಂಗಳೂರು ಆ.15 : ರೆಬೆಲ್ ನಾಯಕ ಸಚಿನ್ ಪೈಲಟ್ ಅವರ ಬಂಡಾಯದಿಂದ ಅತಂತ್ರ ಸ್ಥಿತಿಗೆ ತಲುಪಿದ್ದ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಕೊನೆಗೂ ವಿಶ್ವಾಸಮತ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬೀಗಿದೆ.
ಶುಕ್ರವಾರ ನಡೆದ ರಾಜಸ್ಥಾನದ ವಿಶೇಷ ಅಧಿವೇಶನದಲ್ಲಿ ಸಿಎಂ ಅಶೋಕ್ ಗೆಹ್ಲೂಟ್ ಸರ್ಕಾರ ವಿಶ್ವಾಸ ಮತ ಯಾಚನೆ ಮಾಡಿದ್ದು, ಈ ವಿಶ್ವಾಸ ಮತಯಾಚನೆಯಲ್ಲಿ ಶಾಸಕರ ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ರಾಜಸ್ಥಾನ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಲ್ ಅವರು ಸರ್ಕಾರದ ಪರ ವಿಶ್ವಾಸ ಮಂಡನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ರಾಜಸ್ಥಾನದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಶಾಸಕರ ಕುದುರೆ ವ್ಯಾಪಾರ ಮಾಡಿ ಸರ್ಕಾರ ಉರುಳಿಸಿ ತನ್ನ ಸರ್ಕಾರ ರಚನೆಗೆ ಮುಂದಾಗಿದೆ. ಮಧ್ಯ ಪ್ರದೇಶ, ಮಣಿಪುರ ಮತ್ತು ಗೋವಾದಲ್ಲಿ ಕೇಂದ್ರ ಸರ್ಕಾರ ಇದೇ ಕೆಲಸ ಮಾಡಿತ್ತು. ರಾಜಸ್ಥಾನದಲ್ಲೂ ಇದೇ ಕಾರ್ಯಕ್ಕೆ ಮುಂದಾಗಿದೆ. ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರ್ಕಾರವನ್ನು ಉರುಳಿಸುವ ಕಾರ್ಯಕ್ಕೆ ಮುಂದಾಗಿದೆ. ಆದರೆ ಈ ಕಾರ್ಯದಲ್ಲಿ ಬಿಜೆಪಿ ಸಫಲವಾಗಿಲ್ಲ. ರಾಜಸ್ಥಾನವನ್ನು ಸೋಲಿಸಲು ಬಂದ ರಾಜ ಅಕ್ಪರ್ ಮೇವಾಡದ ಒಗ್ಗಟ್ಟಿನ ಶಕ್ತಿಯಿಂದಾಗಿ ಮೊದಲ ಬಾರಿಗೆ ಸೋಲಿನ ಕಂಡಿದ್ದ ಎಂದು ಹೇಳಿದರು.