ಗಿರಿಜನ ಉಪ ಯೋಜನೆ : ಬಸವನಹಳ್ಳಿಯಲ್ಲಿ ಕುರಿಗಳ ವಿತರಣೆ

August 25, 2020

ಕುಶಾಲನಗರ ಆ.25 : ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆದಾಯ ಗಳಿಸುವ ನಿಟ್ಟಿನಲ್ಲಿ ಜನಸಾಮಾನ್ಯರು ಚಿಂತನೆ ಹರಿಸಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
ಐಟಿಡಿಪಿ ಇಲಾಖೆ ವತಿಯಿಂದ ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಮೂಲಕ ಗಿರಿಜನ ಫಲಾನುಭವಿಗಳಿಗೆ ವಿತರಿಸಿದ ಕುರಿಗಳನ್ನು ಹಸ್ತಾಂತರ ಮಾಡಿದ ಶಾಸಕರು ಮಾತನಾಡಿ, ಐಟಿಡಿಪಿಯ ಗಿರಿಜನ ಉಪ ಯೋಜನೆ ಅಡಿಯಲ್ಲಿ ತಾಲೂಕಿನ 22 ಮಂದಿ ಗಿರಿಜನ ಫಲಾನುಭವಿಗಳಿಗೆ ತಲಾ 32 ಸಾವಿರ ವೆಚ್ಚದಲ್ಲಿ ಒಂದು ಗಂಡು, ಮೂರು ಹೆಣ್ಣು ಕುರಿಗಳನ್ನು ವಿತರಿಸಲಾಗಿದೆ ಎಂದರು.
ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ.ಚಂದ್ರು, ಐಟಿಡಿಪಿ ಇಲಾಖೆ ತಾಲೂಕು ಪ್ರಭಾರ ಅಧಿಕಾರಿ ಶೇಖರ್, ಗಿರಿಜನರ ವಿಸ್ತರಣಾಧಿಕಾರಿ ಧರ್ಮಮ್ಮ, ಲ್ಯಾಂಪ್ಸ್ ಉಪಾಧ್ಯಕ್ಷ ಬಿ.ಎಂ.ಮನು, ನಿರ್ದೇಶಕರು ಇದ್ದರು.

error: Content is protected !!