ಪಟ್ಟೋಲೆ ಪಳಮೆ ಗ್ರಂಥ : ಪ್ರಬಂಧ ಮಂಡನೆಗೆ ಅವಕಾಶ

28/10/2020

ಮಡಿಕೇರಿ ಅ.28 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ನ.21 ರಂದು ಬೆಳಗ್ಗೆ ಪಟ್ಟೋಲೆ ಪಳಮೆ ಕೊಡವ ಗ್ರಂಥದ ಕುರಿತು ವಿಚಾರ ಸಂಕಿರಣವು ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆಯಲಿದೆ.
ಆಸಕ್ತರಿಗೆ ಪಟ್ಟೋಲೆ ಪಳಮೆ ಗ್ರಂಥದಲ್ಲಿ ಅಳವಡಿಸಿರುವ ವಿಷಯದ ಬಗ್ಗೆ ಪ್ರಬಂಧ ಮಂಡನೆಗೆ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಈ ವಿಷಯದ ಬಗ್ಗೆ ಬರೆದು ನ.18 ರೊಳಗೆ ಕಚೇರಿಗೆ ಅಂಚೆ ಅಥವಾ ಇ-ಮೇಲ್ ಮೂಲಕ ಕಳುಹಿಸುವಂತೆ ಕೋರಿದೆ. ಆಯ್ಕೆಯಾದ ಪ್ರಬಂಧವನ್ನು ನ.21 ರಂದು ನಡೆಯುವ ವಿಚಾರ ಸಂಕಿರಣದಲ್ಲಿ 10 ನಿಮಿಷಗಳ ಕಾಲ ಮಂಡನೆಗೆ ಅವಕಾಶ ನೀಡಲಾಗುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಗಿರೀಶ್ ಅವರು ತಿಳಿಸಿದ್ದಾರೆ.