ನಗರಸಭೆಯ ಮಾಜಿ ಸದಸ್ಯ ಬಿ.ಎ.ರಾಮಯ್ಯ ನಿಧನಕ್ಕೆ ಸಂತಾಪ

28/10/2020

ಮಡಿಕೇರಿ ಅ.28 : ಮಡಿಕೇರಿ ನಗರಸಭೆಯ ಮಾಜಿ ಸದಸ್ಯ ಬಿ.ಎ.ರಾಮಯ್ಯ(79) ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ ಮಡಿಕೇರಿಯ ತಮ್ಮ ನಿವಾಸದಲ್ಲಿ ಮೃತಪಟ್ಟರು. ಮೃತರು ಓರ್ವ ಪುತ್ರಿಯನ್ನು ಅಗಲಿದ್ದಾರೆ.
::: ಸಂತಾಪ :::
ಸರ್ವೋದಯ ಸಮಿತಿಯ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಹಾಗೂ ಪದಾಧಿಕಾರಿಗಳು ರಾಮಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಮಿತಿಯಲ್ಲಿ ಮಾಜಿ ಕೋಶಾಧಿಕಾರಿ ಹಾಗೂ ಹಿರಿಯ ಸದಸ್ಯರಾಗಿ ಅಪಾರ ಸೇವೆ ಸಲ್ಲಿಸಿರುವ ರಾಮಯ್ಯ ಅವರ ಅಗಲಿಕೆ ಸಮಿತಿಗೆ ನಷ್ಟವನ್ನುಂಟು ಮಾಡಿದೆ ಎಂದು ಕುಶಾಲಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.