ಲಯನ್ ನಂಜಪ್ಪರಿಗೆ ಭಾವಪೂರ್ಣ ಶ್ರದ್ಧಾಂಜಲಿ

01/11/2020

ಮಡಿಕೇರಿ ನ.1 : ಇತ್ತೀಚೆಗೆ ಮೃತಪಟ್ಟ ಲಯನ್ಸ್ ಸಂಸ್ಥೆಯ ಪ್ರಮುಖ ಲಯನ್ ಬಾಚಿನಾಡಂಡ ನಂಜಪ್ಪ ಅವರಿಗೆ ಮಡಿಕೇರಿ ಲಯನ್ಸ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಗರದ ಲಯನ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಆಕ್ಯುಪೇಶನಲ್ ಟ್ರೈನಿಂಗ್ ಸೆಂಟರ್ ಟ್ರಸ್ಟ್ ಅಧ್ಯಕ್ಷ ನವೀನ್ ಅಂಬೇಕಲ್ ಪುಷ್ಪ ನಮನ ಸಲ್ಲಿಸಿ ನಂಜಪ್ಪ ಅವರು ಸಂಸ್ಥೆಗೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಉಪಾಧ್ಯಕ್ಷ ಲಯನ್ ನಿರಂಜನ್ ಎಂ.ಎ, ಕಾರ್ಯದರ್ಶಿ ಲಯನ್ ಮಧುಕರ್ ಕೆ, ಮಡಿಕೇರಿ ಲಯನ್ಸ್ ಸಂಸ್ಥೆ ಅಧ್ಯಕ್ಷರಾದ ಲಯನ್ ಅನಿತಾ ಸೋಮಣ್ಣ, ಕಾರ್ಯದರ್ಶಿ ಲಯನ್ ಕವಿತಾ ಬೊಳ್ಳಪ್ಪ, ಪ್ರಮುಖರಾದ ಸೋಮಣ್ಣ, ಮೋಹನದಾಸ್, ಬೇಬಿ ಮ್ಯಾಥ್ಯು, ದಾಮೋದರ್, ಮಧುಕರ್, ಕಮಲಾ ಮುರುಗೇಶ್, ಮೋಹನ್ ಕುಮಾರ್ ಮತ್ತಿತರರು ನಂಜಪ್ಪ ಅವರ ಗುಣಗಾನ ಮಾಡಿ, ಆತ್ಮಕ್ಕೆ ಶಾಂತಿ ಕೋರಿದರು.
ಲಯನ್ಸ್ ಕಟ್ಟಡದ ವಿಸ್ತøತ ಭಾಗಕ್ಕೆ ಬಾಚಿನಾಡಂಡ ನಂಜಪ್ಪ ಸಭಾಂಗಣ ಎಂದು ನಾಮಕರಣ ಮಾಡಲು ಸಭೆ ನಿರ್ಣಯ ಕೈಗೊಂಡಿತು.