ಪೊಲೀಸ್ ಸಿಬ್ಬಂದಿಗಳು ತಮ್ಮ ಆರೋಗ್ಯದ ಕಡೆ ಗಮನ ಕೊಡಿ

14/05/2021

ಸೋಮವಾರಪೇಟೆ ಮೇ 14 : ಕೊರೊನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಊಟ ವಿತರಿಸಿದರು.
ಕೊರೊನಾ ನಿಗ್ರಹದ ಲಾಕ್ ಡೌನ್ ಸಂದರ್ಭ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳ ಕಾರ್ಯ ಶ್ಲಾಘಿಸಿದ ಶಾಸಕರು ಪೊಲೀಸರು ಹಾಲು, ರಾತ್ರಿಯೆನ್ನದೆ, ಬಿಸಿಲು ಮಳೆಯೆನ್ನದೆ ಚೆಕ್ ಪೋಸ್ಟ್ ಮುಂತಾದೆಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಾವುಗಳು ಕೂಡ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.
ಈ ಸಂದರ್ಭ ಆಹಾರದ ಪ್ರಾಯೋಜಕರಾದ ಜಗತ್, ವೃತ್ತನಿರೀಕ್ಷಕ ಮಹೇಶ್, ಸಬ್ ಇನ್ಸ್ಪೆಕ್ಟರ್ ಶ್ರೀಧರ್ , ಪಟ್ಟಣಪಂಚಾಯ್ತಿ ಸದಸ್ಯ ಸೋಮೇಶ್ ಹಾಗೂ ಮುಂತಾದವರು ಹಾಜರಿದ್ದರು.