ನಡೆಯಲೇ ಇಲ್ಲ ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯ

01/05/2020

ಮಡಿಕೇರಿ ಮೇ 1 : ಹಾರಂಗಿ ಜಲಾಶಯದಲ್ಲಿ ತುಂಬಿಕೊಂಡಿರುವ ಹೂಳು ತೆಗೆಯುವ ಕಾರ್ಯ ಈ ವರ್ಷವೂ ನಡೆಯಲೇ ಇಲ್ಲ. ಕಾವೇರಿ ನದಿ ತವರು ಜಿಲ್ಲೆ ಕೊಡಗಿನಲ್ಲಿ 2018 ಮತ್ತು 2019 ರಲ್ಲಿ ಸಂಭವಿಸಿದ ಅತಿವೃಷ್ಟಿ ಅನಾಹುತಗಳಿಂದ ಜಲಸ್ಫೋಟ ಉಂಟಾಗಿ ಅನೇಕ ಗ್ರಾಮಗಳು ಕೊಚ್ಚಿ ಹೋಗಿದ್ದವು. ಇದಕ್ಕೆ ಹಾರಂಗಿ ಜಲಾಶಯದ ನೀರಿನ ಒತ್ತಡವೇ ಕಾರಣ ಎಂದು ವಿಶ್ಲೇಷಿಸಲಾಗಿತ್ತು.
ಜಲಾಶಯದ ಹೂಳು ತೆಗೆಯುವ ಕಾರ್ಯಕ್ಕೆ ಯೋಜನೆ ರೂಪಿಸಲಾಗಿತ್ತಾದರೂ ಕೊರೋನಾ ಲಾಕ್ ಡೌನ್ ಎಲ್ಲದಕ್ಕೂ ಅಡ್ಡಿ ಪಡಿಸಿದೆ.