ಕುಶಾಲನಗರದಲ್ಲಿ ಕೊರೋನಾ ವಾರಿಯರ್ಸ್‌ ಸೇವೆಯ ನೆನಪಿಗಾಗಿ ಗಿಡ ನೆಡುವ ಕಾರ್ಯಕ್ರಮ

25/05/2020

ಮಡಿಕೇರಿ ಮೇ 25 : ಕುಶಾಲನಗರದಲ್ಲಿ ಜಿಲ್ಲಾಡಳಿತ, ಪೊಲೀಸ್ ಮತ್ತು ಆರೋಗ್ಯ ಇಲಾಖೆಗಳ ಕೊರೊನ ವಾರಿಯರ್ಸ್‌ ಸೇವೆಯ ನೆನಪಿಗಾಗಿ ಕಾವೇರಿ ಪರಿಸರ ರಕ್ಷಣಾ ಬಳಗದಿಂದ ಮೂರು ವಿಧದ ಗಿಡಗಳನ್ನು ನೆಡಲಾಯಿತು. ಸರಳ ಕಾರ್ಯಕ್ರಮದಲ್ಲಿ ಹಾಜರಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಪರಿಸರ ಬಳಗದ ಪ್ರಮುಖ ಎಂ.ಎನ್.ಚಂದ್ರಮೋಹನ್ ಪರಿಸರ ರಕ್ಷಣೆಯೊಂದಿಗೆ ಕಾವೇರಿ ನದಿಯ ಪಾವಿತ್ರ್ಯತೆ ಕಾಪಾಡಬೇಕೆಂದರು. ಕೊರೊನ ವಾರಿಯರ್ಸ್‌ ಸೇವೆಯನ್ನು ಶ್ಲಾಘಿಸಿದರು.