ವಲಸಿಗರಿಗೆ 5 ಕೆ.ಜಿ. ಅಕ್ಕಿ ಹಾಗೂ 1 ಕೆ.ಜಿ. ಕಡಲೆ ಕಾಳು ವಿತರಣೆ

26/05/2020

ಮಡಿಕೇರಿ ಮೇ.26 : ಕೊಡಗು ಜಿಲ್ಲೆಯಲ್ಲಿ ಜೀವನ ನಿರ್ವಹಣೆಗಾಗಿ ಬಂದು ನೆಲೆಸಿರುವ ವಲಸಿಗರಿಗೆ ಮನವಿ. ಆತ್ಮ ನಿರ್ಭರ್ ಭಾರತ್ ಯೋಜನೆ ಅಡಿಯಲ್ಲಿ ವಲಸಿಗರಿಗೆ ಮೇ ಮತ್ತು ಜೂನ್ 2020ರ ಪ್ರತೀ ಮಾಹೆಗೆ 5 ಕೆ.ಜಿ. ಅಕ್ಕಿ ಹಾಗೂ 1 ಕೆ.ಜಿ. ಕಡಲೆ ಕಾಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಹೊರ ರಾಜ್ಯ, ಹೊರ ಜಿಲ್ಲೆ, ಹೊರ ತಾಲ್ಲೂಕಿನಿಂದ ಜೀವನ ನಿರ್ವಹಣೆಗಾಗಿ ಬಂದು ನೆಲೆಸಿರುವ ವಲಸಿಗರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಕೇಂದ್ರ ಸರ್ಕಾರದ ಆದೇಶದಂತೆ ಈ ಯೋಜನೆಯಡಿ ಬರುವ ಫಲಾನುಭವಿಗಳಿಗೆ ರಾಜ್ಯದಲ್ಲಿ ಅಥವಾ ಬೇರಾವುದೇ ರಾಜ್ಯಗಳಲ್ಲಿ ಪಡಿತರ ಚೀಟಿ ಹೊಂದಿರಬಾರದು. ಇದನ್ನು ಪರಿಶೀಲಿಸಿ ಖಾತ್ರಿ ಪಡಿಸಲು ಎಲ್ಲಾ ಫಲಾನುಭವಿಗಳಿಂದಲೂ ಅವರ ಆಧಾರ್ ಸಂಖ್ಯೆಯನ್ನು ಪಡೆದು ಆನ್‍ಲೈನ್ ತಂತ್ರಾಂಶದಲ್ಲಿ ಪರಿಶೀಲಿಸಿ ವಿತರಿಸಲಾಗುತ್ತದೆ. ಹಾಗಾಗಿ ಪ್ರತಿ ಫಲಾನುಭವಿಯು ಆಧಾರ್ ಸಂಖ್ಯೆಯ ಮುಖಾಂತರ ಪರಿಶೀಲಿಸಿ ಅವರ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ. ಬಂದ ನಂತರ, ಈ ಓಟಿಪಿ ಯನ್ನು ದಾಖಲಿಸಿ ಪಡಿತರ ವಿತರಣೆಗೆ ಕ್ರಮವಹಿಸಲಾಗುವುದು ಅಥವಾ ಬಯೋ ಪಡೆಯುವುದರ ಮುಖಾಂತರ ಪಡಿತರ ವಿತರಣೆಗೆ ಕ್ರಮವಹಿಸಲಾಗುವುದು.
ಮೇ, 27 ರಿಂದ ಮೇ, 31 ರವರೆಗೆ 2020ರ ಮೇ ಮಾಹೆಯ ಅಕ್ಕಿ ವಿತರಿಸಲಾಗುವುದು. ಜೂನ್, 01 ರಿಂದ ಜೂನ್, 10 ರವರೆಗೆ ಜೂನ್ ಮಾಹೆಯ ಅಕ್ಕಿ ಮತ್ತು ಮೇ ಮತ್ತು ಜೂನ್ ಮಾಹೆಗಳ ಕಡಲೆಕಾಳನ್ನು ವಿತರಣೆ ಮಾಡಲಾಗುವುದು.
ಕೋವಿಡ್-19 ವೈರಸ್ ಹರಡುವ ಭೀತಿ ಇರುವುದರಿಂದ ಫಲಾನುಭವಿಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನೂಕು ನುಗ್ಗಲಿಗೆ ಅವಕಾಶ ನೀಡದೆ ಆಹಾರ ಧಾನ್ಯಗಳನ್ನು ಪಡೆದುಕೊಳ್ಳಲು ಕೋರಿದೆ.
ಹೆಚ್ಚಿನ ಮಾಹಿತಿಗೆ ತಾಲ್ಲೂಕು ಆಹಾರ ಶಿರಸ್ತೆದಾರರ/ಆಹಾರ ನಿರೀಕ್ಷಕರಾದ ಮಡಿಕೇರಿ ತಾಲ್ಲೂಕಿಗೆ ಜಿ.ಜಿ.ಪ್ರಭುಶಂಕರ್ ಮೊ.ಸಂ.9972364303, ಸೋಮವಾರಪೇಟೆ ತಾಲ್ಲೂಕಿಗೆ ಎಲ್. ಮಂಜುನಾಥ್ 9164272144, ಕೆ.ಸಿ.ರಾಮಚಂದ್ರ 8553869697 ಮತ್ತು ವಿರಾಜಪೇಟೆ ತಾಲ್ಲೂಕಿಗೆ ಎಸ್.ಚಂದ್ರನಾಯಕ 9900598522 ನ್ನು ಸಂಪರ್ಕಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.