ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ : ಇಬ್ಬರು ಆರೋಪಿಗಳ ಬಂಧನ

ವಿರಾಜಪೇಟೆ:ಜೂ:13: ಇತ್ತೀಚೆಗೆ ಕೊಡಗಿನಲ್ಲಿ ಬೃಹತ್ ಪ್ರಮಾಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಗಾರರನ್ನು ಬಂಧಿಸುವಲ್ಲಿ ವಿರಾಜಪೇಟೆ ನಗರ ಪೊಲೀಸು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ವಿರಾಜಪೇಟೆ ತಾಲ್ಲೂಕುವಿನ ಪ್ರಥಮ ಪೆರುಂಬಾಡಿ ಗ್ರಾಮದ ನಿವಾಸಿ ಸಿದ್ದೀಕ್ ಎಂಬುವವರ ಪುತ್ರ ಶಂಷುದ್ದೀನ್ ಎಸ್. ಮತ್ತು ಗುಂಡಿಕೇರೆ ನಿವಾಸಿ ಹಸೈನಾರ್ ಎಂಬುವವರ ಪುತ್ರ ಕೆ.ಎಂ ಶಫೀಕ್ ಬಂಧಿತ ಆರೋಪಿಗಳು, ಪ್ರಕರಣದ ಪ್ರಥಮ ಆರೋಪಿ ಶಂಷುದ್ದೀನ್ ಎಂಬುವವನು ಈ ಹಿಂದೆ ಅಕ್ರಮ ಗಾಂಜಾ ಮಾರಾಟ ಪ್ರಕರಣದಲ್ಲಿ ಆರೋಪಿಯಾಗಿದ್ದು ಹಲವು ಪ್ರಕರಣಗಳು ಇತನ ಮೇಲೆ ದಾಖಲಾಗಿ ಜೈಲು ವಾಸ ಅನುಭವಿಸಿ ಕೆಲವು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡು ಹಿಂದಿರುಗಿದ್ದ. ಇತನು ದಿನಾಂಕ 10-06-2020 ರಂದು ಮೈಸೂರಿನಿಂದ ಗಾಂಜಾವನ್ನು ತಂದಿದ್ದು ನಂತರದಲ್ಲಿ ಬೇಡಿಕೆಯಂತೆ ಮಾರಾಟ ಮಾಡಲು ಯತ್ನಿಸಿದ್ದಾನೆ ಇತನೋಂದಿಗೆ ದ್ವಿತೀಯ ಆರೋಪಿ ಶಫೀಕ್ ಎಂಬುವವನು ಸಹ ಜೈಲು ವಾಸ ಅನುಭವಿಸಿದ್ದಾನೆ.
ಗಾಂಜಾ ಮಾರಾಟ ಮಾರಾಟ ಮಾಡಲು ಪೆರುಂಬಾಡಿಯಿಂದ ನಗರಕ್ಕೆ ತಮ್ಮ ದ್ವಿಚಕ್ರ ವಾಹನ ಸಂಖ್ಯೆ ಕೆಎ-40ಯು-9615 ಮತ್ತು ಕೆಎಲ್-58ಡಿ-7768 ರಲ್ಲಿ ಇಬ್ಬರು ಅರೋಪಿಗಳು ಅಗಮಿಸಿತ್ತಿರುವ ವೇಳೆಯಲ್ಲಿ ಖಚಿತ ಮಾಹಿತಿ ಮೇರೆಗೆ ಮೀನುಪೇಟೆ ಕೀರ್ತಿ ಹೋಟೆಲ್ ಬಳಿ ವಾಹನಗಳ ತಪಾಸಣೆ ಮಾಡಿದಾಗ ಚೀಲದಲ್ಲಿ ಗಾಂಜಾವಿರುವುದು ಬೆಳೆಕಿಗೆ ಬಂದಿದೆ. ಶಂಷುದ್ದೀನ್ ಬಳಿಯಿಂದ 486 ಗ್ರಾಂ, ಮತ್ತು ಶಫೀಕ್ ಬಳಿಯಿದ್ದ 366 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಒಟ್ಟು 852 ಗ್ರಾಂ ಗಾಂಜಾ 30,000 ರೂಪಾಯಿ ಮೌಲ್ಯದಾಗಿದೆ ಎಂದು ಅಂದಾಜಿಸಲಾಗಿದೆ. ಅರೋಪಿಗಳ ಮೇಲೆ 20(ಬಿ) ಎನ್.ಡಿ.ಪಿ.ಎಸ್ ಕಾಯ್ದೆ ಅನ್ವಯ ವಿರಾಜಪೇಟೆ ನಗರ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನಾಯಾಂಗ ಬಂಧನಕ್ಕೆ ಹಾಜರುಪಡಿಸಲಾಗಿದೆ.
ವಿರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಜಯಕುಮಾರ್ ಅವರ ಮಾರ್ಗಧರ್ಶನದಲ್ಲಿ ವೃತ್ತ ನೀರಿಕ್ಷಕರಾದ ಕ್ಯಾತೆಗೌಡ, ನಗರ ಠಾಣಾಧಿಕಾರಿ ಹೆಚ್.ಎಸ್ ಭೋಜಪ್ಪ, ಎ.ಎಸ್.ಐ. ನಂಜಪ್ಪ, ರಾಮಪ್ಪ, ಲೊಕೇಶ್, ಗೀರಿಶ್, ಮುನೀರ್, ಮುಸ್ತಫ, ಸಂತೋಷ್, ಚಂದ್ರಶೇಖರ್ ಮತ್ತು ಚಾಲಕ ಯೋಗೆಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
