ಅಯ್ಯಪ್ಪ ದೇವರಕಾಡಿನಲ್ಲಿ ಪರಿಸರ ದಿನಾಚರಣೆ

June 16, 2020

ಮಡಿಕೇರಿ ಜೂ.16 : ಅಭ್ಯತ್‍ಮಂಗಲದ ಜ್ಯೋತಿ ನಗರದ ಭಾರತಾಂಬೆ ಕಲಾ ಮತ್ತು ಕ್ರೀಡಾ ಸಂಘದ ವತಿಯಿಂದ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹಿರಿಯರಾದ ಲಕ್ಷ್ಮೀಗುರುವ ಅವರು ಗಿಡ ನೆಡುವ ಮೂಲಕ ಪರಿಸರ ದಿನಕ್ಕೆ ಚಾಲನೆ ನೀಡಿದರು. ನಂತರ ಅಯ್ಯಪ್ಪ ದೇವರ ಕಾಡಿನಲ್ಲಿ ಗಿಡಗಳನ್ನು ನೆಡಲಾಯಿತು.
ಸಂಘದ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ರತೀಶ್, ದರ್ಶನ್, ವಿನೋದ್, ಮುರಳಿ, ವೆಂಕಟೇಶ್, ಮಾಜಿ ಸೈನಿಕ ಬಿ.ಎಸ್.ತಮ್ಮಯ್ಯ, ಗ್ರಾ.ಪಂ ಸದಸ್ಯರುಗಳಾದ ನಳಿನಿ, ಜಮೀಲ ಹಾಗೂ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಈ ಸಂದರ್ಭ ಹಾಜರಿದ್ದರು.