ಕಾರ್ಮಿಕ ಅಧಿಕಾರಿಯಾಗಿ ಅನಿಲ್ ಬಗಟಿ ಅಧಿಕಾರ ಸ್ವೀಕಾರ

16/06/2020

ಮಡಿಕೇರಿ ಜೂ.16 : ಜಿಲ್ಲೆಗೆ ನೂತನ ಕಾರ್ಮಿಕ ಅಧಿಕಾರಿಯಾಗಿ ಅನಿಲ್ ಬಗಟಿ ಅವರು ಸೋಮವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಈ ಹಿಂದೆ ಬೆಳಗಾವಿಯಲ್ಲಿ 6 ವರ್ಷಗಳು ಮತ್ತು ಹಾಸನ ಜಿಲ್ಲೆಯ ಬೇಲೂರಿನಲ್ಲಿ 6 ತಿಂಗಳು ಹಿರಿಯ ಕಾರ್ಮಿಕ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಬದಾಮಿ, ವಿಜಯಪುರ ಮತ್ತು ಜಮಖಂಡಿಯಲ್ಲಿ ಒಟ್ಟು 11 ವರ್ಷಗಳ ಕಾಲ ಕಾರ್ಮಿಕ ನಿರೀಕ್ಷಕರಾಗಿ ಅನಿಲ್ ಬಗಟಿ ಅವರು ಕಾರ್ಯ ನಿರ್ವಹಿಸಿದ್ದಾರೆ.