ಕೊರೋನಾ ವೈರಸ್‌ನಿಂದ ಮೃತರಾದವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವುದಾಗಿ ಸೇವಾ ಭಾರತಿ ಭರವಸೆ

07/07/2020

ಮಡಿಕೇರಿ ಜು. 7 : ಕೋವಿಡ್ – 19 ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪಾಸಿಟಿವ್ ಪ್ರಕರಣದಲ್ಲಿ ಮೃತರಾದಲ್ಲಿ ಸೇವಾ ಭಾರತಿ ಸ್ವಯಂಸೇವಕರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವುದಾಗಿ ಪ್ರಮುಖರು ಭರವಸೆಯನ್ನು ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ -19 ಪಾಸಿಟಿವ್ ಪ್ರಕರಣಗಳಲ್ಲಿ ಮೃತರಾದವರ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಸಭೆ ನಡೆಯಿತು.

ಸೇವಾ ಭಾರತಿ ತಂಡ ಇಡೀ ಸಮಾಜದ ರಕ್ಷಣೆ, ಸಂಕಷ್ಟಕ್ಕೆ ಸದಾ ಸ್ಪಂದಿಸುವ ಗುಣವನ್ನು ಮೈಗೂಡಿಸಿಕೊಂಡಿದೆ. ಸಂಸ್ಥೆಯ ಉಪಾಧ್ಯಕ್ಷ ಕೆ.ಕೆ.ಮಹೇಶ್ ಕುಮಾರ್, ಪ್ರಮುಖರಾದ ಚೇತನ್, ವಿನಯ್, ಚರಣ್, ಸತ್ಯ ಇವರ ತಂಡ ಅಂತ್ಯಸಂಸ್ಕಾರದಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳುವ ಭರವಸೆಯನ್ನು ವ್ಯಕ್ತಪಡಿಸಿದರು.

ಜಿಲ್ಲೆಯ ಮೂರು ತಾಲೂಕಿನಲ್ಲಿ ಸ್ವಯಂಸೇವಕರ ಅವಶ್ಯಕತೆ ಇದೆ. ಈಗಾಗಲೇ ಕೆಲವರು ಮುಂದೆ ಬಂದಿದ್ದು, ಸ್ವಯಂಸೇವಕರಾಗಿ ಭಾಗವಹಿಸುವವರು ತಕ್ಷಣ ಹೆಸರು ನೋಂದಾಯಿಸುವುದು. ಮುಂದಿನ ವಾರ ಜಿಲ್ಲಾಡಳಿತ ಸ್ವಯಂಸೇವಕರಿಗೆ ತರಭೇತಿಯನ್ನು ನೀಡಲಿದ್ದು, ಜು. 12 ರ ಮಧ್ಯಾಹ್ನದ ಒಳಗೆ ಹೆಸರು ನೋಂದಾಯಿಸುವುದು.

ಹೆಚ್ಚಿನ ಮಾಹಿತಿಗೆ ಕೆ.ಕೆ.ಮಹೇಶ್ ಕುಮಾರ್ – 9480731020, ಚೇತನ್ – 9448325136, ಚಂದ್ರ ಉಡೋತ್ – 9663725200 ಸಂಪರ್ಕಿಸಬಹುದಾಗಿದೆ.