ರುಚಿಕರವಾದ ಪಾಸ್ತಾ ಸೂಪ್ ಮಾಡುವ ವಿಧಾನ

07/07/2020

ಬೇಕಾಗುವ ಸಾಮಾಗ್ರಿಗಳು : ಪಾಸ್ತಾ- ಅರ್ಧ ಕಪ್ , ತರಕಾರಿ – 1/4 ಕಪ್,  ಚೆನ್ನಾ – 3 ಚಮಚ,  ಪಾಸ್ತಾ ಸಾಸ್ – 1 ಕಪ್,  ಟೊಮೆಟೊ ಸಾಸ್- 1 ಕಪ್,  ಸ್ವಲ್ಪ ದೊಡ್ಡ ಪತ್ರೆ,  ರುಚಿಗೆ ತಕ್ಕ ಉಪ್ಪು , ನೀರು- 1/4 ಕಪ್,  ಜೋಳದ ಹಿಟ್ಟು- 1 ಚಮಚ,  ಚಿಕ್ಕ ಈರುಳ್ಳಿ- 1 , ಬೆಳ್ಳುಳ್ಳಿ ಎಸಳು- 3-4 ಎಸಳು,  ಎಣ್ಣೆ – 2 ಚಮಚ.

ತಯಾರಿಸುವ ವಿಧಾನ:  ದೊಡ್ಡ ಕಡಲೆಯನ್ನು ನೆನೆ ಹಾಕಿರಬೇಕು. ನಂತರ ಅದನ್ನು ತರಕಾರಿಗಳ ಜೊತೆ ಬೇಯಿಸಿ ಒಂದು ಪಾತ್ರೆಯಲ್ಲಿ ಹಾಕಿಡಿ.  ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಪಾಸ್ತಾವನ್ನು ಅದರಲ್ಲಿ ಹಾಕಿ. ಪಾಸ್ತಾ ಮೆತ್ತಗಾದ ಮೇಲೆ ಅದನ್ನು ಒಂದು ಪಾತ್ರೆಯಲ್ಲಿ ಹಾಕಿಡಿ.  ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಬೇಯಿಸಿ ತರಕಾರಿ ಸೇರಿಸಿ ಸೌಟ್ ನಿಂದ ಆಡಿಸಿ. ನಂತರ ಪಾಸ್ತಾ ಹಾಗೂ ಟೊಮೆಟೊ ಸಾಸ್ ಸೇರಿಸಿ. ದೊಡ್ಡ ಪತ್ರೆ ಹಾಕಿ, ಕಡಿಮೆ ಉರಿಯಲ್ಲಿ ಸೌಟ್ ನಿಂದ ಆಡಿಸುತ್ತಾ 2 ನಿಮಿಷ ಬೇಯಿಸಿ. ನೀರು ಹಾಕಿ, ಈಗ ಪಾಸ್ತಾ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಜೋಳದ ಹಿಟ್ಟು ಕಡಿಮೆ ಉರಿಯಲ್ಲಿ 3-4 ನಿಮಿಷ ಬೇಯಿಸಿದರೆ ಪಾಸ್ತಾ ಸೂಪ್ ರೆಡಿ.