ಕೊಡಗಿನಲ್ಲಿ ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ

14/07/2020

ಮಡಿಕೇರಿ ಜು. 14 : ಜಿಲ್ಲೆಯಲ್ಲಿ ಇಂದು ಒಂದೇ ದಿನ ಒಟ್ಟು33 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು,ಸೋಂಕಿತರ ಸಂಖ್ಯೆ 217ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮುಂಜಾನೆ 12 ಪ್ರಕರಣ, ಮಧ್ಯಾಹ್ನ 13 ಪ್ರಕರಣ ಹಾಗೂ ಸಂಜೆ 8 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದ ಜನತಾ ಕಾಲೋನಿಯ ನಿವಾಸಿಯಾದ ಜ್ವರ ಲಕ್ಷಣಗಳಿದ್ದ 17 ವರ್ಷದ ಹುಡುಗಿಗೆ ಸೋಂಕು ದೃಢಪಟ್ಟಿದೆ. ವಿರಾಜಪೇಟೆ ತಾಲ್ಲೂಕಿನ ಹಳೆ ಸಿದ್ಧಾಪುರದ ಹೆಚ್.ಎಸ್ ರಸ್ತೆಯ ಜ್ವರ ಲಕ್ಷಣಗಳಿದ್ದ 70 ವರ್ಷದ ಪುರುಷ ಮತ್ತು 43 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಇವರ ಕುಟುಂಬ ಸದಸ್ಯರು ಅಂತರ್ ಜಿಲ್ಲಾ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ.

ಅಂತರ್ ರಾಜ್ಯ ಪ್ರಯಾಣದ ಹಿನ್ನೆಲೆ ಇರುವ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿಯ ಕೊಡಗರಗಳ್ಳಿ ಗ್ರಾಮದ ಕೂರ್ಗ್ ಹಳ್ಳಿ ಎಸ್ಟೇಟ್ ನಲ್ಲಿ ವಾಸವಿರುವ 20 ವರ್ಷದ ಹುಡುಗಿಗೆ ಸೋಂಕು ದೃಢಪಟ್ಟಿದೆ. ಅಂತರ್ ರಾಜ್ಯ ಪ್ರಯಾಣದ ಹಿನ್ನೆಲೆ ಇರುವ ವಿರಾಜಪೇಟೆ ತಾಲ್ಲೂಕಿನ ಸಿದ್ಧಾಪುರದ ಎಂ.ಜಿ ರಸ್ತೆಯ ನಿವಾಸಿಯಾದ 47 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.

ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಹೆಚ್.ಸಿ.ಪುರ ನಿವಾಸಿಯಾದ ಜ್ವರ ಲಕ್ಷಣಗಳಿದ್ದ 43 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆಯ ಹುದಿಕೇರಿ ರಸ್ತೆಯ ಮುಗುಟಗೇರಿ ನಿವಾಸಿಯಾದ ಜ್ವರ ಲಕ್ಷಣಗಳಿದ್ದ 42 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಈ ಹಿಂದೆ ಕೋವಿಡ್ ಸೋಂಕು ದೃಢಪಟ್ಟ ಹುಂಡಿ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿಗಳಾದ ಹುಂಡಿ ಗ್ರಾಮದ, ಪ್ರಸ್ತುತ ವಿರಾಜಪೇಟೆ ತಾಲ್ಲೂಕಿನ ಬಾಡಗ ಬಾಣಂಗಾಲದಲ್ಲಿ ನೆಲೆಸಿರುವ 10 ವರ್ಷದ ಬಾಲಕ, 15 ವರ್ಷದ ಬಾಲಕ ಮತ್ತು 33 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಗುಂಡೂರಾವ್ ಬಢಾವಣೆಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 20 ವರ್ಷದ ಹುಡುಗನಿಗೆ ಸೋಂಕು ದೃಢಪಟ್ಟಿದೆ.

ಮಡಿಕೇರಿ ಪಟ್ಟಣದ ಮಹದೇವಪೇಟೆಯ (ರವಿ ಪ್ರೆಸ್ ಮಿಲ್ ಹತ್ತಿರ) ನಿವಾಸಿಯಾದ ಜ್ವರ ಲಕ್ಷಣವಿದ್ದ 52 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಡಪಟ್ಟಿದೆ. ಇವರಿಗೆ ಅಂತರ್ ಜಿಲ್ಲಾ ಪ್ರಯಾಣದ ಹಿನ್ನೆಲೆ ಇರುತ್ತದೆ. ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ತೊರೆನೂರು ಗ್ರಾಮದಲ್ಲಿ (ಗ್ರಾಮ ಪಂಚಾಯತ್ ಕಚೇರಿ ಮುಂಭಾಗ) ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 36 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಈ ಹಿಂದೆ ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಹೋಬಳಿ ತೊರೆನೂರು ಶಿರಂಗಾಲ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 17 ವರ್ಷದ ಹುಡುಗನಿಗೆ ಸೋಂಕು ಧೃಢಪಟ್ಟಿದೆ. ಹಿಂದೆ ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಹೋಬಳಿ ಶಿರಂಗಾಲ, ಸಾಲುಕೊಪ್ಪಲು ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 44 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಈ ಹಿಂದೆ ಸೋಂಕು ದೃಢಪಟ್ಟಿದ್ದ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಅಚ್ಚಪ್ಪ ಲೇ ಔಟ್ ನ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 43 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿ ನಗರದ ರಾಣಿಪೇಟೆಯ ಜ್ವರ ಲಕ್ಷಣವಿದ್ದ 38 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಮಡಿಕೇರಿಯ ತಾಳತ್ತಮನೆಯ ಜ್ವರ ಲಕ್ಷಣವಿದ್ದ 34 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.ಈ ಹಿಂದೆ ಸೋಂಕು ದೃಢಪಟ್ಟಿದ್ದ ಮಡಿಕೇರಿ ನಗರದ ಗದ್ದುಗೆಯ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ 22 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.ಈ ಹಿಂದೆ ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪದ ಎಮ್ಮೆಗುಂಡಿ ರಸ್ತೆಯ ಪ್ರಾಥಮಿಕ ಸಂಪರ್ಕದ 34 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. 51 ವರ್ಷದ ಪುರುಷರೊಬ್ಬರು ವಿದೇಶದಿಂದ ಮರಳಿದ್ದು, ಅವರನ್ನು ನೇರವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ಹೊಸದಾಗಿ 19 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಜನತಾ ಕಾಲೋನಿ, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕು, ಹೆಚ್.ಎಸ್. ರಸ್ತೆ, ಹಳೇ ಸಿದ್ಧಾಪುರ, ವಿರಾಜಪೇಟೆ ತಾಲ್ಲೂಕು, ಕೂರ್ಗ್ ಹಳ್ಳಿ ಎಸ್ಟೇಟ್, ಕೊಡಗರಹಳ್ಳಿ, ಸೋಮವಾರಪೇಟೆ ತಾಲ್ಲೂಕು, ಎಂ.ಜಿ.ರಸ್ತೆ, ಸಿದ್ಧಾಪುರ, ವಿರಾಜಪೇಟೆ ತಾಲ್ಲೂಕು, ಹೆಚ್.ಸಿ.ಪುರ (ಜೈ ಹಿಂದ್ ವರ್ಕ್ ಶಾಪ್), ಗೋಣಿಕೊಪ್ಪ, ವಿರಾಜಪೇಟೆ, ಹುದಿಕೇರಿ ರಸ್ತೆ, ಮುಗುಟಗೇರಿ, ಪೊನ್ನಂಪೇಟೆ, ವಿರಾಜಪೇಟೆ ತಾಲ್ಲೂಕು, ಬಾಡಗ ಬಾಣಂಗಾಲ, ವಿರಾಜಪೇಟೆ ತಾಲ್ಲೂಕು, ಮಹದೇವಪೇಟೆ (ರವಿ ಪ್ರೆಸ್ ಮಿಲ್ ಹತ್ತಿರ), ಮಡಿಕೇರಿ, ತೊರೆನೂರು (ಗ್ರಾಮ ಪಂಚಾಯತ್ ಕಚೇರಿ ಮುಂಭಾಗ), ಸೋಮವಾರಪೇಟೆ ತಾಲ್ಲೂಕು. ಸಾಲುಕೊಪ್ಪಲು ಗ್ರಾಮ, ಶಿರಂಗಾಲ, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕು, ರಾಣಿಪೇಟೆ, ಮಡಿಕೇರಿ ತಾಳತ್ತಮನೆ, ಮಡಿಕೇರಿ

ಜಿಲ್ಲೆಯ ಒಟ್ಟು ಸೋಂಕಿತ ಪ್ರಕರಣಗಳು 217 ಒಟ್ಟು ಬಿಡುಗಡೆಗೊಂಡ ಪ್ರಕರಣಗಳು 87 ಒಟ್ಟು ಸಕ್ರಿಯ ಪ್ರಕರಣಗಳು 127, ಒಟ್ಟು ಮೃತಪಟ್ಟ ಪ್ರಕರಣಗಳು 3, ಒಟ್ಟು ನಿಯಂತ್ರಿತ ಪ್ರದೇಶಗಳು 95 ಆಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.