ಸುಂಟಿಕೊಪ್ಪ ಗ್ರಾ. ಪಂ. ಯಿಂದ ನಿವೃತ್ತ ಸಬ್‌ಇನ್‌ಸ್ಪೇಕ್ಟರ್‌ ಬಿ.ತಿಮ್ಮಪ್ಪ ಗೆ ಸನ್ಮಾನ

01/08/2020

ಸುಂಟಿಕೊಪ್ಪ, ಆ. 1 : ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಅವರು ಠಾಣಾಧಿಕಾರಿ ಬಿ.ತಿಮ್ಮಪ್ಪ ನಿವೃತ್ತಿಗೊಂಡ ರವರಿಗೆ ಸನ್ಮಾನಿಸಿ ಗೌರವಿಸಿದರು.
ಕಳೆದ 10 ತಿಂಗಳಿನಿಂದ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಸಬ್‍ಇನ್ಸ್‍ಪೇಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ್ದ ಬಿ.ತಿಮ್ಮಪ್ಪ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ರವರು ಸನ್ಮಾನಿಸಿ ಮಾತನಾಡಿ ಠಾಣಾಧಿಕಾರಿಯಾಗಿದ್ದ ತಿಮ್ಮಪ್ಪ ಅವರ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಿದ್ದು ಅತಿವೃಷ್ಠಿ, ಕರೋನಾ ವಾರಿಯರ್ಸ್ ಆಗಿ ಹಗಲು ರಾತ್ರಿ ಎನ್ನದೆ ಸೇವೆಯನ್ನು ಸ್ಮರಿಸಿದರು ಶುಕ್ರವಾರ ಅವರು ವಯೋನಿವೃತ್ತಿ ಹೊಂದುತ್ತಿದ್ದಾರೆ ಎಂದರು. ನಿವೃತ್ತಿ ಜೀವನವು ಸುಖಮಾಯವಾಗಿರಲ್ಲಿ ಎಂದು ಹಾರೈಸಿದರು.
ಸಬ್‍ಇನ್ಸ್‍ಪೇಕ್ಟರ್ ತಿಮ್ಮಪ್ಪ ರವರಿಗೆ ವೇಣುಗೋಪಾಲ್ ಶಾಲು ಹೊದೆಸಿ ಫಲತಾಂಬೂಲ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸಿಬ್ಬಂದಿಗಳಾದ ಪುನೀತ್‍ಕುಮಾರ್, ಶ್ರೀನಿವಾಸ್, ಎ.ಎಸ್.ಐ ಕಾವೇರಪ್ಪ,ಶಿವಪ್ಪ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.