ಎಸ್.ಕೆ.ಎಸ್.ಎಸ್.ಎಫ್- ಕೊಡಗು ಯುಎಇ ನೂತನ ಸಮಿತಿ ಅಧ್ಯಕ್ಷರಾಗಿ ಲತೀಫ್ ಕಡಂಗ, ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಚೇರಂಬಾಣೆ ಆಯ್ಕೆ

August 2, 2020

ಮಡಿಕೇರಿ : ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಮಿತಿಯ ಅಧೀನದಲ್ಲಿ  ಯುಎಇ ಕೇಂದ್ರೀಕರಿಸಿ ಕಾರ್ಯಾನಿರ್ವಹಿಸಲು  ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಆನ್ ಲೈನ್ ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆ  ಕಾರ್ಯಕ್ರಮದಲ್ಲಿ ಎಸ್.ಕೆ .ಎಸ್ ಎಸ್ ಎಫ್  ಜಿಸಿಸಿ ಕೊಡಗು ಅಧ್ಯಕ್ಷರಾದ ಹುಸೈನ್ ಫೈಝಿ, ಕಾರ್ಯದರ್ಶಿ ಶಿಹಾಬ್ ಆಲುಂಗಲ್ ನೇತೃತ್ವದಲ್ಲಿ ನೂತನ‌ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಜಿಸಿಸಿ ಕೋಶಾಧಿಕಾರಿ ಅಬ್ದುಲ್ ರಝಾಕ್ ಫೈಝಿ ಸಮಿತಿ ರಚನೆಯ ಮೇಲುಸ್ತುವಾರಿ ವಹಿಸಿದ್ದರು. ಬಳಿಕ ಎಸ್.ಕೆ.ಎಸ್.ಎಸ್.ಎಫ್  ಜಿಸಿಸಿ ಕೊಡಗು ಅಧ್ಯಕ್ಷರ ಅನುಮೋದನೆಯೊಂದಿಗೆ ನೂತನ ಸಮಿತಿ ಘೋಷಣೆ ಮಾಡಲಾಯಿತು.
ಎಸ್.ಕೆ .ಎಸ್.ಎಸ್ ಎಫ್-ಯುಎಇ ಕೊಡಗು ನೂತನ ಸಮಿತಿಯ ಅಧ್ಯಕ್ಷರಾಗಿ ಲತೀಫ್ ಕಡಂಗ  , ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಚೇರಂಬಾಣೆ, ಕೋಶಾಧಿಕಾರಿಯಾಗಿ ಮಜೀದ್ ನೆಲ್ಲಿಹುದಿಕೇರಿ, ಉಪಾಧ್ಯಕ್ಷರುಗಳಾಗಿ ರಝಾಕ್ ಕಡಂಗ ಮತ್ತು ನಿಶಾಬ್ ನೆಲ್ಲಿಯಾಹುದಿಕೇರಿ, ಸಹ ಕಾರ್ಯದರ್ಶಿಗಳಾಗಿ ನೌಶೀರ್ ಎಡಪ್ಪಾಲ ಮತ್ತು ಇರ್ಷಾದ್ ಕೂಡಿಗೆ, ಸಂಘಟನಾ ಕಾರ್ಯದರ್ಶಿಯಾಗಿ ಯಾಹ್ಯಾ ಕೊಡ್ಲಿಪೇಟೆ ಆಯ್ಕೆಯಾಗಿದ್ದಾರೆ.ನಿರ್ದೇಶಕ ಸಮಿತಿ ಸದಸ್ಯರಾಗಿ ಹುಸೈನ್ ಪೈಝಿ ದುಬೈ, ಅಬ್ದುಸ್ಸಮದ್ ದುಬೈ, ನಿಝಾಮ್ ಶಾರ್ಜಾ,ರಜಾಕ್ ಬಜೆಗುಂಡಿ ಹಾಗೂ ಝಕರಿಯಾ ಎಡಪ್ಪಲಾ ಆಯ್ಕೆಯಾಗಿದ್ದಾರೆ.ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಮೀದ್ ಫೈಝಿ, ಅಶ್ರಫ್ ಕಡಂಗ,ಆಸಿಫ್ ಸೋಮವಾರಪೇಟೆ, ನವಾಜ್ ಎಡಪ್ಪಲಾ ಆಯ್ಕೆಯಾಗಿದ್ದಾರೆ.ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್.ಎಸ್.ಎಫ್  ಜಿಸಿಸಿ ಕೊಡಗು ನೇತಾರರು ಭಾಗವಹಿಸಿದ್ದರು.