ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದಾಖಲಾತಿ ಆರಂಭ

05/08/2020

ಮಡಿಕೇರಿ ಆ. 5 : ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದಾಖಲಾತಿ ಪ್ರಾರಂಭವಾಗಿದೆ ಎಂದು ಶಾಲೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ವತಿಯಿಂದ ಪೂರ್ವ ಪ್ರಾಥಮಿಕ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭವಾಗಲಿದೆ. ಎಲ್‍ಕೆಜಿ ಯಿಂದ 7 ನೇ ತರಗತಿಯವರೆಗೂ ಸಹ ಆಂಗ್ಲ ಮಾಧ್ಯಮ ಪ್ರಾರಂಭಗೊಂಡಿದೆ.
ಶಾಲೆಯಲ್ಲಿ ಉನ್ನತ ಮಟ್ಟದ ಪರಿಣತಿ ಹೊಂದಿದ ಅನುಭವಿ ನುರಿತ ಶಿಕ್ಷಕರಿಂದ ಚಟುವಟಿಕೆಯುಕ್ತ ಪಾಠ ಬೋಧನೆ, ಉಚಿತ ಪಠ್ಯ ಪುಸ್ತಕ, ಶೂ, ಸಾಕ್ಸ್ ವಿತರಣೆ, ಮಧ್ಯಾಹ್ನ ರುಚಿಯಾದ ಬಿಸಿಯೂಟ (ತಟ್ಟೆ ಮತ್ತು ಲೋಟದ ವ್ಯವಸ್ಥೆ ಇರುತ್ತದೆ), ಎಲ್ಲಾ ವರ್ಗದ ಮಕ್ಕಳಿಗೆ ವಿದ್ಯಾರ್ಥಿ ವೇತನ, ಆಧುನಿಕ ಸೌಲಭ್ಯವುಳ್ಳ ಸ್ಮಾರ್ಟ್ ಕ್ಲಾಸ್ ಕೊಠಡಿಗಳು, ಉತ್ತಮ ಪರಿಸರ, ಆಟದ ಮೈದಾನ, ಸುಂದರವಾದ ಕೊಠಡಿಗಳು, ವಾರದಲ್ಲಿ 2 ದಿನ ಎಲ್ಲಾ ತರಗತಿ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್, ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಪ್ರತಿ ಶನಿವಾರ ಯೋಗ ಧ್ಯಾನದ ತರಬೇತಿ, ಶುದ್ಧ ಕುಡಿಯುವ ನೀರು ವ್ಯವಸ್ಥೆ, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಕಂಪ್ಯೂಟರ್ ತರಬೇತಿ, ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಅಗತ್ಯ ಸಲಕರಣೆಗಳ ವಿತರಣೆ, ಉಚಿತ ಆರೋಗ್ಯ ತಪಾಸಣೆ ಮತ್ತು ಕ್ರೀಡೆಗೆ ಉತ್ತೇಜನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣೆ ಸಂಖ್ಯೆ 8762986630, 9448293498 ಸಂಪರ್ಕಿಸುವಂತೆ ಕೋರಲಾಗಿದೆ.