ತಲಕಾವೇರಿಯಲ್ಲಿ ಒಂದು ಮೃತ ದೇಹ ಪತ್ತೆ : ಮುಂದುವರಿದ ಶೋಧ ಕಾರ್ಯ

08/08/2020

ಮಡಿಕೇರಿ ಆ. 8 : ಮಡಿಕೇರಿ ತಾಲ್ಲೂಕು ಭಾಗಮಂಡಲದ ತಲಕಾವೇರಿಯಲ್ಲಿ ಉಂಟಾದ ಭೂಕುಸಿತದಿಂದ 5 ಜನರು ಕಣ್ಮರೆಯಾಗಿರುತ್ತಾರೆ. ಈ ಸಂಬಂಧ ಜಿಲ್ಲಾ ಪ್ರಕೃತಿ ವಿಕೋಪ ತಂಡ NDRF ಹಾಗೂ SDRF ತಂಡಗಳು ಪರಿಹಾರ ಕಾರ್ಯಾಚರಣೆ ನಡೆಸಲು ಪ್ರಯತ್ನಿಸಿದ್ದರೂ, ಕಳೆದ 02 ದಿನಗಳಿಂದ ತಲಕಾವೇರಿಯಲ್ಲಿ ಪ್ರತಿಕೂಲ ಹವಾಮಾನದಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ.

ಆದರೆ, ಈ ದಿನ NDRF ಹಾಗೂ SDRF ಮತ್ತು ಪೊಲೀಸ್ ಇಲಾಖಾ ತಂಡಗಳು ಭಾರಿ ಮಳೆಯ ನಡುವೆಯೂ ಕಾರ್ಯಾಚರಣೆ ನಡೆಸುತ್ತಿದ್ದು, ಈ ದಿನ ಕಾಣೆಯಾದವರ ಪೈಕಿ ಆನಂದ ತೀರ್ಥ ಎಂಬುವವರ ಮೃತ ದೇಹವು ಪತ್ತೆಯಾಗಿರುತ್ತದೆ. ಉಳಿದವರ ಹುಡುಕಾಟಕ್ಕೆ ಕಾರ್ಯಾಚರಣೆ ಮುಂದುವರೆಸಲಾಗಿದೆ.