ಬೆಂಗಳೂರು ಗಲಭೆಗೆ ಖಂಡನೆ : ಸೋಮವಾರಪೇಟೆಯಲ್ಲಿ ಹಿಂದೂಪರ ಸಂಘಟನೆಯಿಂದ ಪ್ರತಿಭಟನೆ

August 14, 2020

ಮಡಿಕೇರಿ ಆ. 14 : ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಕೆಲವು ಅನ್ಯಕೊಮಿನ ಸಂಘಟನೆ ಉದ್ರೀಕ್ತವಾದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನಡೆದ ಘಟನೆ ಸಂಭಂದಿಸಿದಂತೆ ಹಿಂದೂಪರ ಸಂಘಟನೆಯಿಂದ ಸೋಮವಾರಪೇಟೆ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಸೋಮವಾರಪೇಟೆಯ ಕುಟ್ಟಪ್ಪ ವೃತ್ತದಲ್ಲಿ ಜಮಾಯಿಸಿದ ಹಿಂದು ಜಾಗರಣ ವೇದಿಕೆ , ಭಾಜಪಾ ಹಾಗೂ ಹಿಂದುಪರ ಕಾರ್ಯಕರ್ತರುಗಳು ಗಲಭೆಯಲ್ಲಿ ಭಾಗಿಯಾದ ಮತಾಂಧರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸುಭಾಸ್ ತಿಮ್ಮಯ್ಯ, ನ್ಯಾಯ ಜಾಗರಣದ ಜಿಲ್ಲಾ ಸಂಯೋಜP, ವಕೀಲ ಮನೋಹರ್, ಹಿಂದು ಜಾಗರಣ ವೇದಿಕೆ ತಾಲ್ಲೂಕು ಅಧ್ಯಕ್ಷ ಉಮೇಶ್, ತಾಲ್ಲೂಕು ಕಾರ್ಯದರ್ಶಿ ಸುನಿಲ್ ಮಾದಪುರ, ಮಾತೃ ಸುರಕ್ಷಾ ತಾಲ್ಲೂಕು ಸಂಯೋಜಕ ಹೊಸಳ್ಳಿ ರಂಜನ್, ಭಾಜಪಾ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ, ಭಾಜಪಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಮಾದಪ್ಪ, ಜಿ.ಪಂ.ಸದಸ್ಯ, ವಕೀಲ ಬಿ.ಜೆ.ದೀಪಕ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!