ಜಿಲ್ಲಾ ಜೆಡಿಎಸ್‍ನಿಂದ 74ನೇ ಸ್ವಾತಂತ್ರ್ಯ ದಿನ ಆಚರಣೆ

15/08/2020

ಮಡಿಕೇರಿ ಆ. 15 : ಕೊಡಗು ಜಿಲ್ಲಾ ಜೆಡಿಎಸ್‍ನಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರು ಧ್ವಜಾರೋಹಣ ನೆರವೇರಿಸಿದರು.
ಜಿಲ್ಲಾ ಜೆಡಿಎಸ್‍ನ ಸಂಘಟನಾ ಕಾರ್ಯದರ್ಶಿ, ಮಾಜಿ ಸೈನಿಕರು ಆದ ಬೋಳ್ಳಿಯಂಡ ಗಣೇಶ್, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ಯುವ ಜೆಡಿಎಸ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಸಿರ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಸುನಿಲ್, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾದ ಸೈಫ್ ಅಲಿ, ಯುವ ಜೆಡಿಎಸ್‍ನ ವಕ್ತಾರ ರವಿಕಿರಣ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುಕೇಶ್ ಚಂಗಪ್ಪ, ಮಡಿಕೇರಿ ನಗರ ಯುವ ಜೆಡಿಎಸ್ ಅಧ್ಯಕ್ಷ ಮೋನಿಷ್, ನಗರ ಮಹಿಳಾ ಘಟಕದ ಅಧ್ಯಕ್ಷೆ ಸುನಂದಾ ಹಾಗೂ ಪ್ರಮುಖರಾದ ಖಲೀಲ್ ಬಾಷ, ಗಣೇಶ್ ವಿದ್ಯಾನಗರ, ಅಜಿತ್ ಕೊಟ್ಟಕೇರಿಯನ, ಉಮೇಶ್, ಫತಿಮಾ ಪಾಲ್ಗೊಂಡಿದ್ದರು.