ಜೈ ಜವಾನ್ ಮಾಜಿ ಸೈನಿಕರ ಸಂಘದಿಂದ ಸೋಮವಾರಪೇಟೆಯಲ್ಲಿ ಸ್ವಾತಂತ್ರೋತ್ಸವ
15/08/2020

ಸೋಮವಾರಪೇಟೆ ಆ.15 : ಸೋಮವಾರಪೇಟೆ ಪಟ್ಟಣದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ 74ನೇ ಸ್ವಾತಂತ್ರೋತ್ಸವನ್ನು ಸರಳವಾಗಿ ಆಚರಿಸಲಾಯಿತು.
ಜೈ ಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ನಾವೆಲ್ಲರೂ ಬ್ರಿಟಿಷರ ಗುಲಾಮಗಿರಿಯಿಂದ ಹೊರಬಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ನಂತರ ದೇಶದ ರಕ್ಷಣೆಯಲ್ಲಿ ಸಾವಿರಾರು ಸೈನಿಕರ ಬಲಿದಾನವಾಗಿದೆ. ಇನ್ನು ನಾವೆಲ್ಲರೂ ಬಲಿಷ್ಠ ರಾಷ್ಟ್ರವನ್ನು ಕಟ್ಟಲು ಪಣತೊಡಬೇಕಾಗಿದೆ ಎಂದು ಹೇಳಿದರು. ಸಂಘದ ಗೌರವಾಧ್ಯಕ್ಷ ನಿವೃತ್ತ ಮೇಜರ್ ಮಂದಪ್ಪ, ಉಪಾಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಆರ್.ಜಿ.ಬಸಪ್ಪ, ಖಜಾಂಚಿ ಎಂ.ಕೆ.ಸುಕುಮಾರ್, ಲೆಕ್ಕಪರಿಶೋಧಕ ಎಂ.ಕೆ.ಮಾಚಯ್ಯ ಮತ್ತಿತರರು ಇದ್ದರು.