ಕೊಡಗಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದವರಿಗೆ ಸನ್ಮಾನ

15/08/2020

ಮಡಿಕೇರಿ ಆ.15 : ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ಅವಿಶ್ರಾಂತವಾಗಿ ಶ್ರಮಿಸುತ್ತಿರುವ ವೈದ್ಯರು, ಆರೋಗ್ಯ ಇಲಾಖಾ ಸಿಬಂದಿಗಳು, ಆಶಾ ಕಾರ್ಯಕತೆರ್ಯರನ್ನು ಅತಿಥಿ ಗಣ್ಯರು ಸನ್ಮಾನಿಸಿ ಅಭಿನಂದಿಸಿದರು.
ಕೊರೊನಾ ಸಾಂಕ್ರಾಮಿಕ ತಡೆಗೆ ಶ್ರಮಿಸುತ್ತಿರುವ ಕೊಡಗು ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರುಗಳಾದ ಡಾ.ಯುವರಾಜ್, ಡಾ. ಅಯ್ಯಪ್ಪ, ಡಾ. ಶ್ವೇತ, ಡಾ. ರಾಜೇಶ್, ಡಾ. ನಿಖಿಲ್, ಡಾ.ಶ್ರದ್ಧಾ, ಡಾ. ರಾಘವೇಂದ್ರ, ಡಾ. ಆಫ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾಯಕರ್ತೆಯರಾದ ಕುಸುಮ, ಭಾರತಿ ಕುಶಾಲಪ್ಪ, ಗುರುಪ್ರಸಾದ್, ನಾಗವೇಣಿ, ಸುಧಾಮ ಕಿಶೋರ್, ಪ್ರದೀಪ್, ಸೆಲ್ವನೋರ, ಶೀಲ, ಅಜಿತ್, ನಂದೀಶ್, ಶಶಾಂಕ್, ಮಿಥುನ್, ಭರತ್, ಬೇಬಿ, ಬೋಜು, ಸೈಯ್ಯದ್, ರಾಬರ್ಟ್, ಗೀತ, ಪುಟ್ಟಮ್ಮ, ಮೋಹನ್ ಕುಮಾರ್ ಅವರುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.