ರಾಷ್ಟ್ರಪತಿ ಪದಕ ವಿಜೇತ ಸಿ.ಎನ್. ದಿವಾಕರ್ ಗೆ ಕೊಡಗು ಡಿಎಸ್‍ಎಸ್ ನಿಂದ ಸನ್ಮಾನ

17/08/2020

ಮಡಿಕೇರಿ ಆ. 17 : ಕರ್ನಾಟಕದಲಿತ ಸಂಘರ್ಷ ಸಮಿತಿ ವತಿಯಿಂದ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ, ರಾಷ್ಟ್ರಪತಿ ಪದಕ ವಿಜೇತ ಸಿ.ಎನ್. ದಿವಾಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆಯಂದು ನೀಡುವ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕ ರಾಜ್ಯದ 19 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪದಕಕ್ಕೆ ಭಾಜನರಾಗಿದ್ದರು.
ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕರಾದ ಸಿ.ಎನ್. ದಿವಾಕರ್ ಅವರ ಅತ್ಯುತ್ತಮ ಸೇವೆಯನ್ನು ಹಾಗೂ ಕರ್ತವ್ಯ ಪ್ರಜ್ಞೆಯನ್ನು ಮನಗಂಡು ಕೇಂದ್ರ ಗೃಹ ಇಲಾಖೆ ರಾಷ್ಟ್ರಪತಿ ಪದಕ ನೀಡಿದ್ದು, ಇವರ ಈ ಸಾಧನೆಯನ್ನು ಪ್ರಶಂಸಿಸಿ ಕೊಡಗು ದಲಿತ ಸಂಘರ್ಷ ಸಮಿತಿಯಿಂದ ಅವರ ಕಛೇರಿಯಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಸಂಚಾಲಕರಾದ ಹೆಚ್.ಎಲ್. ದಿವಾಕರ್, ತಾಲ್ಲೂಕು ಸಂಚಾಲಕ ಎ.ಪಿ. ದೀಪಕ್, ಗುತ್ತಿಗೆದಾರರಾದ ವಿಜಯ್ ಕುಮಾರ್ ಹಾಜರಿದ್ದರು.